ಕರ್ಕಾಟಕ ರಾಶಿ ಯುಗಾದಿ ಭವಿಷ್ಯ ಸಕಲ ಇಷ್ಟ ಸಿದ್ಧಿಯಾಗುವ ಸಂವತ್ಸರ....ಹೇಗಿರಲಿದೆ ನೋಡಿ ಭವಿಷ್ಯ - Karnataka's Best News Portal

ಕರ್ಕಾಟಕ ರಾಶಿ ಯುಗಾದಿ ಭವಿಷ್ಯ ಸಕಲ ಇಷ್ಟ ಸಿದ್ಧಿಯಾಗುವ ಸಂವತ್ಸರ….ಹೇಗಿರಲಿದೆ ನೋಡಿ ಭವಿಷ್ಯ

ಕರ್ಕಾಟಕ ರಾಶಿ – ” ಯುಗಾದಿ ಭವಿಷ್ಯ ” ಸಕಲ ಇಷ್ಟ ಸಿದ್ಧಿಯಾಗುವ ಸಂವತ್ಸರ…..||

ಇದೇ ಮಾರ್ಚ್ 22ಕ್ಕೆ ಚಂದ್ರಮಾನ ಯುಗಾದಿ ಅಂದರೆ ಹೊಸ ಸಂವತ್ಸರ ಆರಂಭವಾಗುವಂತದ್ದು. ನಮ್ಮ ಹಿಂದೂ ಧರ್ಮದಲ್ಲಿ ವರ್ಷದ ಆರಂಭದಲ್ಲಿ ಆಚರಣೆ ಮಾಡುವಂತಹ ಮೊದಲ ಹಬ್ಬವಾಗಿರು ತ್ತದೆ ಎಂದು ಹೇಳಬಹುದು. ಈ ಒಂದು ಹಬ್ಬದಲ್ಲೇ ಬೇವು ಬೆಲ್ಲ ಎರಡನ್ನು ತಿನ್ನುವುದರ ಮೂಲಕ ನಮ್ಮ ವರ್ಷದಲ್ಲಿ ಎಲ್ಲಾ ಸುಖ ದುಃಖಗಳು ಕೂಡ ಸಮನಾಗಿರಲಿ.

ಹಾಗೂ ಎಲ್ಲರೊಟ್ಟಿಗಿನ ಸಂಬಂಧ ಗಟ್ಟಿಯಾಗಿರಲಿ ಎನ್ನುವುದರ ಮೂಲಕ ನಾವೆಲ್ಲರೂ ಕೂಡ ಬೇವು ಬೆಲ್ಲವನ್ನು ತಿಂದು ವರ್ಷದ ಆರಂಭದ ಹಬ್ಬವಾದಂತಹ ಯುಗಾದಿ ಹಬ್ಬವನ್ನು ಆಚರಣೆ ಮಾಡು ತ್ತೇವೆ. ಹಾಗಾದರೆ ಕರ್ಕಾಟಕ ರಾಶಿಯವರಿಗೆ ಈ ವರ್ಷ ಯಾವ ರೀತಿಯಾದಂತಹ ಯೋಗ ಫಲಗಳನ್ನು ಪಡೆದು ಕೊಳ್ಳುತ್ತಾರೆ ಹಾಗೂ ಇವರ ರಾಶಿಯಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಒಂದು ಅಂದಾಜಿನ ಪ್ರಕಾರ ಹೇಳುವುದಾದರೆ 100 ಕ್ಕೆ 60 ರಷ್ಟು ನಿಮಗೆ ಒಳ್ಳೆಯ ಫಲಗಳು ಅಂದರೆ ಒಳ್ಳೆಯ ಸಮಯ ಬರುವಂತಹ ಸೂಚನೆಗಳು ಇದೆ. ಕರ್ಕಾಟಕ ರಾಶಿಯಲ್ಲಿ ಈ ಒಂದು ಯುಗಾದಿ ಸಂವತ್ಸರದಲ್ಲಿ ಬುಧನು ರಾಜನಾಗಿರುತ್ತಾನೆ ಎಂದೇ ಹೇಳಬಹುದು. ಹಾಗೂ ಆತನಿಗೆ ಮಂತ್ರಿಯಾಗಿ ಶುಕ್ರನು ಬರುತ್ತಾನೆ. ಹಾಗೆಯೇ ಕರ್ಕಾಟಕ ರಾಶಿಯವರಿಗೆ ರಾಶ್ಯಾಧಿಪತಿ ಚಂದ್ರನಾಗಿದ್ದಾನೆ.

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

ಇನ್ನು ಕರ್ಕಾಟಕ ರಾಶಿಯವರ ಗುಣ ಸ್ವಭಾವವನ್ನು ನೋಡುವುದಾದರೆ. ಇಲ್ಲಿ ಪುನರ್ ವಸು ನಕ್ಷತ್ರದ ಕೊನೆಯ ಪಾದ ಅಂದರೆ ಇ ಅಕ್ಷರ ಬರುವಂತದ್ದು. ಪುಷ್ಯ ನಕ್ಷತ್ರದ ನಾಲ್ಕು ಪದಗಳು ಅಂದರೆ ಹು,ಹೆ, ಒ,ಡ ಅಕ್ಷರಗಳು ಬರುವಂತದ್ದು. ಹಾಗೂ ಆಶ್ಲೇಷ ನಕ್ಷತ್ರದ ನಾಲ್ಕು ಪಾದಗಳು, ಒಟ್ಟಾರೆಯಾಗಿ ಕರ್ಕಾಟಕ ರಾಶಿಯು ಜಲ ತತ್ವ ರಾಶಿಯಾಗಿರುತ್ತದೆ.

ಹಾಗಾದರೆ ಈ ಒಂದು ಮಾಸದಲ್ಲಿ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯ ರಾಶಿ ಭವಿಷ್ಯ ಇರುತ್ತದೆ ಎಂದು ನೋಡುವುದಾದರೆ. ಈ ವರ್ಷ ನಿಮಗೆ ಗುರುವಿನ ಬಲ ಇರುವುದಿಲ್ಲ. ಇದರಿಂದ ಸ್ವಲ್ಪ ಹಿನ್ನಡೆ ಆಗುವಂಥದ್ದು, ಮನಸ್ಸಿನಲ್ಲಿ ಅಶಾಂತಿ, ಕಲಹಗಳು ಉಂಟಾಗು ವಂತದ್ದು, ಜನವಿರೋಧಗಳು ಹಾಗಾಗಿ ಮಾರ್ಚ್ 22 ಮೇಲೆ ನೀವು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.

ನಿಮಗೆ ಈ ಸಮಯದಲ್ಲಿ ಹಣಗಳು ಬರುತ್ತದೆ ಹಾಗೂ ಅದೇ ರೀತಿ ಯಾಗಿ ಹಣ ಖರ್ಚಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ. ಹಾಗೂ ಮನಸ್ಸಿನಲ್ಲಿ ಚಿಂತೆ ಭಯ ಇವೆಲ್ಲವೂ ಕೂಡ ಇರುವಂತದ್ದು. ಹಾಗೂ ನಿಮಗೆ ಶನಿಯ ಬಲವೂ ಕೂಡ ಇರುವುದಿಲ್ಲ ಆದ್ದರಿಂದ ಈ ಒಂದು ಸಂವತ್ಸರದಲ್ಲಿ ಆರೋಗ್ಯದಲ್ಲಿ ಕೆಲವೊಂದಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]