ಕರ್ನಾಟಕದಲ್ಲಿ ಸೇಬು ಬೇಸಾಯ….||ಸೇಬನ್ನು ಬೆಳೆಸುವ ವಿಧಾನ.||
ಸೇಬನ್ನು ಸಾಮಾನ್ಯವಾಗಿ ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಬೆಳೆಯಬಹುದು ಆದರೆ ಕರ್ನಾಟಕದಲ್ಲಿ ಬೆಳೆಯಲು ಸಾಧ್ಯವಾ ಎಂದು ನೀವು ಊಹಿಸಿದರೆ ಅದು ಸಾಧ್ಯ! ಹೌದು ನಮ್ಮ ಈ ಕರ್ನಾಟಕದಲ್ಲಿ ನಮ್ಮ ವಾತಾವರಣಕ್ಕೆ ತಕ್ಕಂತೆ ಸೇಬಿನ ಸಸ್ಯಗಳು ಬಂದಿದ್ದು ಅವು ಗಳನ್ನು ಬೆಳೆಯುವುದರ ಮೂಲಕ ಸೇಬಿನ ಬೇಸಾಯವನ್ನು ಮಾಡ ಬಹುದಾಗಿರುತ್ತದೆ. ಹಾಗೂ ಬಣ್ಣ ಸೇಬಿನ ಗಾತ್ರ ಎಲ್ಲವನ್ನು ಕೂಡ ಉತ್ತಮವಾದ ರೀತಿಯಲ್ಲಿಯೇ ಬೆಳೆಯಬಹುದು.
ಯಾವುದೇ ರೀತಿಯ ವ್ಯತ್ಯಾಸವು ಕೂಡ ಇವುಗಳಲ್ಲಿ ಇರುವುದಿಲ್ಲ. ಹಾಗಾದರೆ ಈ ಒಂದು ಸೇಬಿನ ವ್ಯವಸಾಯವನ್ನು ಮಾಡುವುದು ಹೇಗೆ? ಈ ಸೇಬಿನ ಸಸ್ಯ ಎಲ್ಲಿ ಸಿಗುತ್ತದೆ ಹಾಗೂ ಈ ಸಸ್ಯಕ್ಕೆ ಏನಾದರೂ ರೋಗ ಉಂಟಾದರೆ ಯಾವ ರೀತಿಯಾಗಿ ಇವುಗಳನ್ನು ಬೆಳೆಸಬೇಕಾಗುತ್ತದೆ. ಹಾಗೂ ಈ ಸೇಬಿನ ಸಸ್ಯವನ್ನು ಬೆಳೆಸಬೇಕಾದರೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು.
ಹಾಗೂ ಯಾವ ರೀತಿಯಾದಂತಹ ಪಾಲನೆ ಪೋಷಣೆ ಮಾಡಬೇಕಾಗು ತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ನಮ್ಮ ಕರ್ನಾಟಕದಲ್ಲಿ ಬೆಳೆಯಬಹುದಾದಂತಹ ಸೇಬಿನ ಸಸ್ಯದ ಮೂರು ತಳಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದರಲ್ಲೂ ಮೊದಲನೇ ತಳಿ ಯಾವುದು ಎಂದರೆ HRMN 99, ಎರಡನೇ ತಳಿ ANNA, ಹಾಗೆಯೇ ಮೂರನೇ ತಳಿಯ ಹೆಸರು DORSETT ಹಾಗೂ GOLDEN.
HRMN 99 ತಳಿ ಹಾಗೂ ANNA ತಳಿಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಾಗಿರುತ್ತದೆ ಹಾಗೆಯೇ ಈ ಒಂದು ತಳಿಗಳು ಹೆಚ್ಚು ಇಳುವರಿ ಯನ್ನು ಕೊಡುತ್ತದೆ. ಆದರೆ DORSETT ಹಾಗೂ GOLDEN ಇಳುವರಿ ಕಡಿಮೆ ಇರುತ್ತದೆ ಆದರೆ ಇದು ಕೆಂಪು ಬಣ್ಣವನ್ನು ಹೊಂದಿರುವುದಿಲ್ಲ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಈ ಸೇಬು ಹಣ್ಣು ಇರುತ್ತದೆ.
HRMN 99, ಹಾಗೂ ANNA ತಳಿಗಳಿಗೆ ಹೆಚ್ಚು ಬೆಲೆ ಇರುವುದಿಲ್ಲ ಆದರೆ DORSETT ಹಾಗೂ GOLDEN ಸೇಬುಗಳಿಗೆ ಹೆಚ್ಚು ಬೆಲೆ ಇರುತ್ತದೆ ಏಕೆಂದರೆ ಇದನ್ನು ಹೆಚ್ಚಾಗಿ ಜ್ಯೂಸ್ ತಯಾರಿಕೆಯಲ್ಲಿ ಉಪಯೋಗಿಸುವುದರಿಂದ ಇದರ ಬೆಲೆ ಹೆಚ್ಚಾಗಿರುತ್ತದೆ. ಹಾಗಾದರೆ ಈ ಸೇಬಿನ ಗಿಡಗಳು ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ. ಹತ್ತಿರದ ತೋಟಗಾರಿಕಾ ಇಲಾಖೆಯನ್ನು ನೀವು ಸಂಪರ್ಕ ಮಾಡಬಹುದು. ಅಥವಾ ಅದರಲ್ಲೂ ನಿಮಗೆ HRMN 99 ತಳಿಗಳು ಬೇಕಾದರೆ.
ಈ ಒಂದು ತಳಿಯನ್ನು ಪ್ರಾರಂಭಿಸಿದಂತಹ ಅರ್ಮಾನ್ ಶರ್ಮಾ ಅವರಿಗೆ ನೀವು ಕರೆಯನ್ನು ಮಾಡುವುದರ ಮೂಲಕ ನೀವು ಈ ತಳಿಗಳನ್ನು ತರಿಸಿಕೊಳ್ಳಬಹುದು. ಇವರ ಮೊಬೈಲ್ ಸಂಖ್ಯೆ 7018520244. ಈ ಒಂದು ಸಸ್ಯ ನಿಮಗೆ ಹಿಮಾಚಲ್ ಪ್ರದೇಶದಿಂದ ಬರುತ್ತದೆ ಆದ್ದರಿಂದ ಇವರಿಗೆ ಕರೆ ಮಾಡುವುದರ ಮೂಲಕ ನೀವು ಈ ತಳಿ ಸಸ್ಯ ತರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.