ಎದೆಯಲ್ಲಿ ಗಟ್ಟಿಕಟ್ಟಿದ ಕಫವನ್ನು ಕಿತ್ತೆಸೆಯುತ್ತದೆ..ಕ್ಷಣಮಾತ್ರದಲ್ಲಿ ರಿಲಿಫ್ ಸಿಗುತ್ತದೆ‌‌.. » Karnataka's Best News Portal

ಎದೆಯಲ್ಲಿ ಗಟ್ಟಿಕಟ್ಟಿದ ಕಫವನ್ನು ಕಿತ್ತೆಸೆಯುತ್ತದೆ..ಕ್ಷಣಮಾತ್ರದಲ್ಲಿ ರಿಲಿಫ್ ಸಿಗುತ್ತದೆ‌‌..

ಎದೆಯಲ್ಲಿ ಗಟ್ಟಿಕಟ್ಟಿದ ಕಫವನ್ನು ಕ್ಷಣದಲ್ಲಿ ಕರಗಿಸುತ್ತದೆ ಈ ಕೆಂಪು ಕಲ್ಲು ಸಕ್ಕರೆ ಕಷಾಯ……||

WhatsApp Group Join Now
Telegram Group Join Now

ತಂಪಾದ ವಾತಾವರಣದಿಂದ ಕೆಲವೊಮ್ಮೆ ನಮ್ಮ ಗಂಟಲಿನಲ್ಲಿ ಕಫ ಕಟ್ಟಿಕೊಳ್ಳಬಹುದು, ಹಾಗೂ ಹಲವಾರು ಕಾರಣಗಳಿಂದ ನಮ್ಮ ಎದೆಯಲ್ಲಿ ಕಫ ಸೇರ ಬಹುದು. ಆದರೆ ಇದನ್ನು ನಿರ್ಲಕ್ಷಿಸುವುದು ಅಷ್ಟೇ ಅಪಾಯಕಾರಿ ಯಾಗಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಬಹುದು. ಏಕೆಂದರೆ ಚಿಕ್ಕ ಮಕ್ಕಳು ತಾಯಿಯ ಎದೆ ಹಾಲನ್ನು ಕುಡಿಯುವುದರಿಂದ ಅದು ಕೆಲವೊಮ್ಮೆ.

ಕಫದ ರೀತಿ ಮಕ್ಕಳಲ್ಲಿ ಆಗುತ್ತದೆ. ಇಂತಹ ಸಮಯದಲ್ಲಿ ಮಕ್ಕಳು ಉಸಿರಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಇದು ಕೇವಲ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಕೂಡ ಈ ಸಮಸ್ಯೆ ಎದುರಾಗು ತ್ತದೆ ಎಂದೇ ಹೇಳಬಹುದು ಮೇಲೆ ಹೇಳಿದಂತೆ ವಾತಾವರಣದಿಂದ ಈ ರೀತಿಯಾದಂತಹ ಹಲವಾರು ಬದಲಾವಣೆಗಳು ಪ್ರತಿಯೊಬ್ಬರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಸಮಸ್ಯೆಗಳನ್ನು ಸರಿಪಡಿಸಿ ಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.

ಎದೆಯಲ್ಲಿ ಕಟ್ಟಿದ ಕಫ ಉಲ್ಬಣವಾದಾಗ ಶ್ವಾಸಕೋಶದಿಂದ ಉಸಿರಾಡುವುದಕ್ಕೆ ಸಾಧ್ಯವಾಗುವುದಿಲ್ಲ ಇದಕ್ಕಾಗಿ ಆಸ್ಪತ್ರೆ ಗಳಿಗೆ ಹೋಗಿ ಕೆಲವೊಂದು ಔಷಧಿಗಳನ್ನು ತೆಗೆದುಕೊಳ್ಳುವುದರ ಮೂಲಕ ಸಿರಪ್ ಗಳನ್ನು ಕುಡಿಯುವುದರ ಮೂಲಕ ಇದನ್ನು ಸರಿಪಡಿಸಿಕೊಳ್ಳು ತ್ತೇವೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ವಿಧಾನ ಬಹಳ ಸುಲಭವಾಗಿದ್ದು ಮನೆಯಲ್ಲಿಯೇ ತಯಾರಿಸುವಂತಹ ಮನೆ ಮದ್ದಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿ ಮಾಡಿ ಸೇವನೆ ಮಾಡಬಹುದಾಗಿದೆ.

ಇದರಲ್ಲಿ ಯಾವುದೇ ರೀತಿಯಾದ ಬೇರೆ ಪದಾರ್ಥಗಳನ್ನು ಸೇರಿಸಿರುವುದಿಲ್ಲ ಬದಲಿಗೆ ನಿಮ್ಮ ಅಡುಗೆ ಮನೆಗಳಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಈ ಮನೆಮದ್ದನ್ನು ತಯಾರಿಸಬಹುದು. ಹಾಗಾದರೆ ಇದನ್ನು ತಯಾರಿಸಲು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
1 ಚಮಚ ಒಣ ಶುಂಠಿ ಪುಡಿ
ಸ್ವಲ್ಪ ಕಲ್ಲುಪ್ಪು
ಕಾಲು ಚಮಚ ಮೆಣಸಿನ ಪುಡಿ
2 ಚಮಚ ಕೆಂಪು ಕಲ್ಲು ಸಕ್ಕರೆ.

ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದರಲ್ಲಿ ಇರುವಂತಹ ಎಲ್ಲಾ ಪದಾರ್ಥಗಳು ಕೂಡ ಎದೆಯಲ್ಲಿ ಕಟ್ಟಿದ ಕಫವನ್ನು ನೀರಾಗಿಸುವುದಕ್ಕೆ ಸಹಾಯಮಾಡುತ್ತದೆ ಹಾಗೂ ಇದನ್ನು ಮಕ್ಕಳಿಗೂ ಕೂಡ ಕೊಡಬಹುದಾಗಿರುತ್ತದೆ. ಇದು ನಮ್ಮ ಎದೆಯಲ್ಲಿ ಕಟ್ಟಿದ ಕಫವನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ ಎಂದು ಹೇಳಬಹುದು.

ನಂತರ ಈ ಎಲ್ಲಾ ಪದಾರ್ಥವನ್ನು ಹಾಕಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಶೋಧಿಸಿಕೊಂಡು ನಂತರ ಇದಕ್ಕೆ 7 ರಿಂದ 8 ದೊಡ್ಡಪತ್ರೆ ಎಲೆಯನ್ನು ಚೆನ್ನಾಗಿ ಬಿಸಿ ಮಾಡಿಕೊಂಡು ಅದರ ರಸವನ್ನು ಈ ಕಷಾಯಕ್ಕೆ ಹಾಕಬೇಕು ನಂತರ ಇದನ್ನು ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ಎದೆಯಲ್ಲಿ ಕಟ್ಟಿದ ಕಫ ಸಂಪೂರ್ಣವಾಗಿ ಕರಗಿ ಹೋಗುತ್ತದೆ. ಇದರಲ್ಲಿರುವಂತಹ ಮೆಣಸು ನಿಮ್ಮ ಕಟ್ಟಿದ ಕಫವನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">