ಬೇಗ ತೂಕ ಕಡಿಮೆ ಮಾಡಲು, ಥೈರಾಯಿಡ್ ಪಿಸಿಓಡಿ ಕಡಿಮೆ ಆಗಲು ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ರಿಚ್ ರೆಸಿಪಿ....! - Karnataka's Best News Portal

ಬೇಗ ತೂಕ ಕಡಿಮೆ ಮಾಡಲು, ಥೈರಾಯಿಡ್ ಪಿಸಿಓಡಿ ಕಡಿಮೆ ಆಗಲು ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ರಿಚ್ ರೆಸಿಪಿ….!

ಬೇಗ ತೂಕ ಕಡಿಮೆ ಮಾಡಲು, ಥೈರಾಯಿಡ್ ಪಿಸಿಓಡಿ ಕಡಿಮೆ ಆಗಲು ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ರಿಜ್ ರೆಸಿಪಿ….!!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚು ದೇಹದ ತೂಕವನ್ನು ಹೊಂದಿದ್ದು ಇದರಿಂದ ಅವರು ಥೈರಾಯ್ಡ್ ಪಿಸಿಓಡಿ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಈ ಸಮಸ್ಯೆ ಬಂದ ನಂತರ ಅವರ ದೇಹದಲ್ಲಿ ಹಲವಾರು ಹಾರ್ಮೋನ್ ಗಳ ಬದಲಾವಣೆಯು ಕೂಡ ಎದುರಾಗುತ್ತಿರುತ್ತದೆ.

ಅದಕ್ಕಾಗಿ ಅವರು ಆಸ್ಪತ್ರೆಗಳಿಗೆ ಹೋಗಿ ತೋರಿಸುವುದರ ಮೂಲಕ ಹಾಗೂ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಅದನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ನೀವು ಎಷ್ಟೇ ರೀತಿಯ ಔಷಧಿಗಳನ್ನು ಪಡೆದರು ಅದು ಕೆಲವೊಮ್ಮೆ ಪ್ರಯೋಜನಕ್ಕೆ ಬರುವು ದಿಲ್ಲ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಥೈರಾಯ್ಡ್ ಪಿಸಿಓಡಿ ಬಂದರೆ ಮಕ್ಕಳಾಗದೆ ಬಂಜೆಯಾ ಗಿಯೇ ಉಳಿಯುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದಲ್ಲಿ ಹೆಚ್ಚಿನ ಗಮನವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಈ ರೀತಿಯಾದಂತಹ ಸಮಸ್ಯೆ ಹೆಚ್ಚಾಗುವುದಕ್ಕೆ ನಾವು ಸೇವನೆ ಮಾಡುತ್ತಿ ರುವಂತಹ ಆಹಾರ ಪದ್ಧತಿಯೇ ಪ್ರಮುಖವಾದಂತಹ ಕಾರಣವಾಗಿರು ತ್ತದೆ. ಹೌದು ನಾವು ಯಾವುದೇ ರೀತಿಯಾದ ಒಳ್ಳೆಯ ಆಹಾರ ಕ್ರಮ ವನ್ನು ಅನುಸರಿಸುತ್ತಿಲ್ಲ ಬದಲಿಗೆ ನಮ್ಮ ದೇಹಕ್ಕೆ ಅನಾರೋಗ್ಯವನ್ನು ಹೆಚ್ಚು ಮಾಡುವಂತಹ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಎಲ್ಲಾ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿದೆ ಎಂದೇ ಹೇಳಬಹುದು.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಅದಕ್ಕಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಇದನ್ನು ನೀವು ಮಾಡಿಕೊಂಡು ಸೇವನೆ ಮಾಡಿದ್ದೆ ಆದಲ್ಲಿ ಮೇಲೆ ಹೇಳಿದಂತೆ PCOD, ಥೈರಾಯ್ಡ್ ದೇಹದ ತೂಕ ಎಲ್ಲವೂ ಕೂಡ ಕಡಿಮೆಯಾಗುತ್ತದೆ. ಹಾಗಾದರೆ ಇದಕ್ಕೆ ಬೇಕಾಗಿರುವಂತಹ ಮುಖ್ಯ ಪದಾರ್ಥ ಯಾವುದು ಎಂದರೆ ರಾಗಿ.

ರಾಗಿಯನ್ನು ಒಂದು ದಿನ ನೆನೆ ಹಾಕಿ ಅದನ್ನು ಮೊಳಕೆ ಬರಿಸಿ ಅದನ್ನು ತೆಗೆದುಕೊಳ್ಳಬೇಕು, ನಂತರ ಬಟಾಣಿ ಮತ್ತು ಹಸಿ ಕಡಲಿಯನ್ನು ಸಹ ಒಂದು ಬೌಲ್ ನಷ್ಟು ನೆನೆಹಾಕಿ ಅದನ್ನು ಕೂಡ ಮೊಳಕೆ ಬರಿಸಿ ತೆಗೆದು ಕೊಳ್ಳಬೇಕು ನಂತರ ಇವೆರಡನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸಿ ಜಾರಿಗೆ ಹಾಕಿ ಎರಡು ಒಣ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಒಂದು ಇಂಚು ಶುಂಠಿ, ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು.

ಸ್ವಲ್ಪ ನೀರು ಇಷ್ಟನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿದಂತಹ ಮಿಶ್ರಣವನ್ನು ನೀವು ತಕ್ಷಣವೇ ದೋಸೆ ಮಾಡಿ ಸೇವನೆ ಮಾಡಬಹುದು. ಈ ರೀತಿಯಾಗಿ ನಿಮ್ಮ ಆಹಾರ ಕ್ರಮದಲ್ಲಿ ಇಂತಹ ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರಿಂದ ಮೇಲೆ ಹೇಳಿದಂತೆ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.