ಬೆಂಗಳೂರಿನಲ್ಲಿ ಸೈಟ್ ಅಥವಾ ಭೂಮಿ ಖರೀದಿ ಮಾಡಲು ಯೋಚಿಸಿದ್ದರೆ ಮೊದಲು ಈ ವಿಡಿಯೋ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಹುಷಾರ್…..!!

ಇತ್ತೀಚಿನ ದಿನಗಳಲ್ಲಿ ಸೈಟ್ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗು ತ್ತಿದ್ದು ಅವರು ಬೇರೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಆದ್ದರಿಂದ ಯಾರೇ ಆಗಲಿ ಅವರು ಬೆಂಗಳೂರಿನ ಸುತ್ತಮುತ್ತ ಇರುವಂತಹ ಪ್ರದೇಶಗಳಲ್ಲಿ ಯಾವುದೇ ರೀತಿಯಾದಂತಹ ಸೈಟ್ ಖರೀದಿ ಮಾಡುವ ಮುನ್ನ ಕೆಲವೊಂದಷ್ಟು ಎಚ್ಚರಿಕೆಯ ಕ್ರಮಗಳನ್ನು ವಹಿಸುವುದು ಕೂಡ ಉತ್ತಮವಾಗಿರುತ್ತದೆ.

ಇಲ್ಲವಾದಲ್ಲಿ ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಅನಧಿಕೃತ ಲೇಔಟ್ ಗಳು ನಿರ್ಮಾಣವಾಗುತ್ತಿದೆಯೋ ಇದರಲ್ಲಿ ಹೆಚ್ಚಿನ ಜನ ಲೇಔಟ್ ನಿರ್ಮಾಣ ಮಾಡುತ್ತಿರುವವರು, ಹಣವನ್ನು ಸಂಪಾದನೆ ಮಾಡುವುದಕ್ಕೋಸ್ಕರ, ಅಕ್ರಮವಾಗಿ ಲೇಔಟ್ ಗಳನ್ನು ನಿರ್ಮಾಣ ಮಾಡಿ ಜನಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಅದರಲ್ಲೂ ಜನರು ತಾವು ರೆವಿನ್ಯೂ ಸೈಟ್ ಅಥವಾ ಕಮರ್ಷಿಯಲ್ ಸೈಟ್ ಇವುಗಳನ್ನು ಖರೀದಿ ಮಾಡುವಂತಹ ಸಮಯದಲ್ಲಿ ಕೆಲವೊಂದ ಷ್ಟು ಮಾಹಿತಿಗಳನ್ನು ತಿಳಿದುಕೊಂಡಿರಬೇಕಾಗಿರುವುದು ಮುಖ್ಯವಾಗಿರು ತ್ತದೆ. ಏಕೆಂದರೆ ನೀವು ಯಾವುದೇ ಸೈಟ್ ತೆಗೆದುಕೊಳ್ಳಬೇಕು ಎಂದರೆ ಅಲ್ಲಿ ಸರ್ಕಾರದಿಂದ ಒಪ್ಪಿಗೆಯನ್ನು ಪಡೆದ ನಂತರ ಅಲ್ಲಿ ಕೆಲವೊಂದಷ್ಟು ನೀತಿ ನಿಯಮಗಳನ್ನು ಅವರು ಅನುಸರಿಸುತ್ತಿರುತ್ತಾರೆ, ಹಾಗೂ ಡಿಸಿ ಪರ್ಮಿಷನ್ ಅನ್ನು ಪಡೆದು ಅಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಹೇಳುತ್ತಿರುತ್ತಾರೆ. ಆದ್ದರಿಂದ ನೀವು ಯಾವುದೇ ಸೈಟ್ ಖರೀದಿ ಮಾಡುವ ಮುನ್ನ.

ಆ ಸೈಟ್ ನ ಸಂಪೂರ್ಣವಾದಂತಹ ಮಾಹಿತಿಗಳನ್ನು ತಿಳಿದುಕೊಂಡು ನಂತರ ಅದು ನೀವು ಖರೀದಿಸುವುದಕ್ಕೆ ಯೋಗ್ಯವಾಗಿದೆ ಅಂದರೆ ಸೈಟ್ ಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸರಿಯಾಗಿದೆಯಾ ಇಲ್ಲವಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಂತರ ನೀವು ಖರೀದಿ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮೇಲೆ ಹೇಳಿದಂತೆ ಬೇರೆಯವರು ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ.

ಅದು ಹೇಗೆ ಎಂದರೆ ಒಬ್ಬರಿಗೆ ಆ ಸೈಟ್ ಅನ್ನು ಮಾರಾಟ ಮಾಡಿ ಮತ್ತೊಬ್ಬರಿಗೂ ಕೂಡ ಅದೇ ಸೈಟ್ ಅನ್ನು ಮಾರಾಟ ಮಾಡುವುದರ ಮೂಲಕ ಹಣವನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ರೀತಿಯಾಗಿ ಮೋಸ ಹೋಗುವುದರ ಬದಲು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡಿರುವುದು ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಮೊದಲನೆಯದಾಗಿ ಸರ್ಕಾರದ ಆದೇಶದ ಮೇಲೆ ಅಲ್ಲಿ ಸೈಟ್ ಗಳು ಮಾರಾಟ ಆಗುತ್ತಿದ್ದರೆ ಆ ಸ್ಥಳದಲ್ಲಿ ಮೊದಲನೆಯದಾಗಿ.

ಓಡಾಡುವುದಕ್ಕೆ ರಸ್ತೆಯ ವ್ಯವಸ್ಥೆ ಇರುತ್ತದೆ ಹಾಗೂ ಅ ಸೈಟ್ ಗಳಿಗೆ ಸಾಕಾಗುವಷ್ಟು ನೀರಿನ ಶೇಖರಣೆಗಾಗಿ ಟ್ಯಾಂಕರ್ ಗಳು ಕೂಡ ಅಲ್ಲಿ ಮೊದಲೇ ಇರುತ್ತದೆ. ಇದನ್ನು ನೀವು ಗಮನಿಸಿಕೊಂಡು ಸೈಟ್ ಖರೀದಿ ಮಾಡುವುದು ಉತ್ತಮ. ಯಾವುದು ಇಲ್ಲದೆ ಇದ್ದರೆ ಅವು ಅಷ್ಟು ಒಳ್ಳೆಯದಲ್ಲ ಎಂದೇ ತಿಳಿದುಕೊಳ್ಳಬಹುದು.ಅದರಲ್ಲೂ ಈ ರೀತಿಯಾದ ವ್ಯವಸ್ಥೆಗಳನ್ನು ಮಾಡುವುದರ ಮೂಲಕವೂ ಕೂಡ ಈಗ ಜನರನ್ನು ಯಾಮಾರಿಸುತ್ತಿದ್ದಾರೆ ಆದ್ದರಿಂದ ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *