ಸಿಂಹ ರಾಶಿ ವ್ಯಕ್ತಿಗಳ ರಹಸ್ಯಗಳು..ಇವರು ಹುಟ್ಟಿರೋದೆ ರೂಲ್ ಮಾಡೋಕೆ..ಇವರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.. - Karnataka's Best News Portal

ಸಿಂಹ ರಾಶಿ ರಹಸ್ಯಗಳು….!!

ಈ ದಿನ ಸಿಂಹ ರಾಶಿಯವರ ಗುಣ ಸ್ವಭಾವಗಳು ಹಾಗೂ ಅವರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ. ಸಿಂಹ ರಾಶಿಯವರು ಯಾವ ರೀತಿಯಾದಂತಹ ಮನಸ್ಥಿತಿಗಳನ್ನು ಹೊಂದಿರುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಿಂಹ ರಾಶಿಯು ರಾಶಿ ಚಕ್ರದಲ್ಲಿ ಐದನೇ ರಾಶಿಯಾಗಿದೆ. ಇದು ಕಾಲಪುರುಷನ ಹೊಟ್ಟೆಯ ಭಾಗವನ್ನು ಸೂಚಿಸುತ್ತದೆ.

ಈ ರಾಶಿಯು ಪುರುಷ ರಾಶಿಯಾಗಿದ್ದು ಹಾಗೆಯೇ ಸ್ಥಿರ ರಾಶಿಯಾಗಿದೆ. ಈ ರಾಶಿಗೆ ಅಧಿಪತಿ ರವಿ ಅಂದರೆ ರಾಜ ಗ್ರಹ ಸೂರ್ಯ. ಮಖಾ ನಕ್ಷತ್ರ, ಪುಬಾ ನಕ್ಷತ್ರ, ಹಾಗೂ ಉತ್ತರ ನಕ್ಷತ್ರ ಒಂದನೇ ಪಾದದಲ್ಲಿ ಜನಿಸಿದವರು ಸಿಂಹ ರಾಶಿಗೆ ಸೇರುತ್ತಾರೆ. ಈ ರಾಶಿಯ ಚಿನ್ಹೆ ಸಿಂಹ. ಅದೇ ರೀತಿಯಾಗಿ ಈ ರಾಶಿಯವರು ಶೂರರು, ಪ್ರತಾಪಿಗಳು, ಉದಾರರು, ಆತ್ಮವಿಶ್ವಾಸ ಉಳ್ಳವರು, ಹಾಗೂ ಸ್ವಾತಂತ್ರ್ಯ ಪ್ರೇಮಿಗಳು ಕೂಡ ಆಗಿರುತ್ತಾರೆ.

ಸಿಂಹ ರಾಶಿಯ ಚಿನ್ಹೆ ಸಿಂಹ ಆಗಿರುವುದರಿಂದ ಈ ರಾಶಿಯವರು ರಾಜನಂತೆ ವರ್ತಿಸುತ್ತಾರೆ. ಹಾಗೆಯೇ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ, ನಾಯಕತ್ವದ ಗುಣವನ್ನು ಇವರು ಹೊಂದಿರುತ್ತಾರೆ. ಇವರು ಸತ್ಯ ಪಾಲನೆಯನ್ನು ಮಾಡುವುದರ ಜೊತೆಗೆ ರಾಜ ಗಾಂಭೀರ್ಯವನ್ನು ಹೊಂದಿರುತ್ತಾರೆ ಎಂದೇ ಹೇಳಬಹುದು. ಈ ರಾಶಿಯವರು ಯಾವ ರೀತಿ ಇರುತ್ತಾರೆ ಎಂದು ನೋಡುವುದಾದರೆ ಮಧ್ಯಮ ಎತ್ತರ, ದುಂಡನೆ ಮುಖ, ಮುಖದಲ್ಲಿ ಗಾಂಭೀರ್ಯತೆ.

ಬಲಿಷ್ಠ ವಾದಂತಹ ಭುಜಗಳು, ಹಾಗೆಯೇ ಇವರ ಕಣ್ಣುಗಳು ನೋಡುವುದಕ್ಕೆ ತುಂಬಾ ಆಕರ್ಷಣೀಯವಾಗಿರುತ್ತದೆ ಎಂದು ಹೇಳಬಹುದು. ಹಾಗೂ ಇವರ ಮುಖದಲ್ಲಿ ವಿಶೇಷವಾದಂತಹ ಕಾಂತಿ, ತೇಜಸ್ಸು, ಇರುತ್ತದೆ. ಇದು ಈ ರಾಶಿಯವರ ವಿಶೇಷವಾದಂತಹ ಲಕ್ಷಣವಾಗಿರುತ್ತದೆ. ಸಿಂಹ ರಾಶಿಯು ಸ್ಥಿರ ರಾಶಿ ಆಗಿರುವುದರಿಂದ ಇವರ ಆದಾಯವು ಕೂಡ ಸ್ಥಿರವಾಗಿರುತ್ತದೆ. ಆದಷ್ಟು ಇವರು ಸ್ಥಿರವಾಗಿರುವoತಹ ಕೆಲಸಗಳನ್ನೇ ಮಾಡುತ್ತಾರೆ.

ಈ ರಾಶಿಯ ಅಧಿಪತಿ ಸೂರ್ಯನ ಬಲಾಬಲದ ಆಧಾರದ ಮೇಲೆ ಇವರ ಹುದ್ದೆ, ವ್ಯವಹಾರಗಳು, ಬದಲಾವಣೆಯಾಗುತ್ತದೆ. ಈಗಾಗಲೇ ಮೇಲೆ ಹೇಳಿದಂತೆ ಸಿಂಹ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಅದೇ ರೀತಿಯಾಗಿ ಇವರು ಉನ್ನತವಾದಂತಹ ಹುದ್ದೆಗಳಲ್ಲಿಯೂ ಕೂಡ ಇರುತ್ತಾರೆ ಎಂದೇ ಹೇಳಬಹುದು. ಅದರಲ್ಲೂ IAS, IPS, ರಾಜಕೀಯ ನಾಯಕರು, ನಟರು, ಹೀಗೆ ನಾಯಕತ್ವದ ಕೆಲಸಗಳಲ್ಲಿ ಇವರು ಇರುತ್ತಾರೆ ಎಂದೇ ಹೇಳಬಹುದು.

ಹಾಗೆಯೇ ಇವರ ಮಾತಿನಲ್ಲಿ ಅಧಿಕಾರತ್ವದ ಗುಣ ಇರುತ್ತದೆ ಅದರಲ್ಲೂ ಸಭೆ ಸಮಾರಂಭಗಳಲ್ಲಿ ಉತ್ತಮವಾದಂತಹ ಮಾತಿನ ವರ್ತನೆ ಇರುತ್ತದೆ. ಇವರು ಸ್ವತಂತ್ರ ಪ್ರೇಮಿಗಳು ಸಹ ಹೌದು! ಹಾಗೂ ಸಿಂಹ ರಾಶಿಯವರು ಹೆಚ್ಚಾಗಿ ಶಿವನ ಭಕ್ತರಾಗಿರುತ್ತಾರೆ, ಇದನ್ನು ನೀವು ನಿಮ್ಮ ಸುತ್ತಮುತ್ತ ಇರುವಂತಹ ಜನರಲ್ಲಿಯೇ ನೋಡ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *