ಮೇಷ ರಾಶಿ ಯುಗಾದಿ ವರ್ಷ ಭವಿಷ್ಯ 2023.ಈ ವರ್ಷ ಹೇಗಿರಲಿದೆ ನೋಡಿ ನಿಮ ಅದೃಷ್ಟ - Karnataka's Best News Portal

ಮೇಷ ರಾಶಿ ಯುಗಾದಿ ವರ್ಷ ಭವಿಷ್ಯ 2023……..||

22/03/2023 ಕ್ಕೆ ಶೋಭಕೃತ ಸಂವತ್ಸರ ಆರಂಭವಾಗುತ್ತಿದೆ. ಇಂತಹ ನೂತನ ಸಂವತ್ಸರದಲ್ಲಿ ಹೇಗೆ ಇದು ಪರಿಣಾಮ ಬೀರುತ್ತದೆ ಹಾಗೆಯೇ ಈ ದಿನ ಮೇಷ ರಾಶಿಗೆ ಈ ಸಂವತ್ಸರದ ಯಾವ ರೀತಿಯಾದಂತಹ ಫಲಗಳು ದೊರೆಯುತ್ತದೆ ಹಾಗೂ ಯಾವ ರೀತಿಯ ನಷ್ಟಗಳು ಸಂಭವಿಸುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.

ಅಶ್ವಿನಿ ನಕ್ಷತ್ರದ ಒಂದು ಎರಡು ಮೂರು ಮತ್ತು ನಾಲ್ಕನೇ ಪಾದಗಳು, ಹಾಗೆಯೇ ಭರಣಿ ನಕ್ಷತ್ರ ಒಂದು ಎರಡು ಮೂರು ಮತ್ತು ನಾಲ್ಕನೇ ಪದಗಳು, ಹಾಗೆಯೇ ಕೃತಿಕಾ ನಕ್ಷತ್ರ ಒಂದನೇ ಪಾದ, ಇವಿಷ್ಟು ವ್ಯಕ್ತಿಗಳು ಬಹಳ ಮುಖ್ಯವಾಗಿ ಈಗಿನ ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಅನುಕೂಲವಾಗುತ್ತದೆ ಎಂದು ಹೇಳಬಹುದು.

ಯುಗಾದಿ ಭವಿಷ್ಯವನ್ನು ನಾವು ಗಮನಿಸಬೇಕು ಎಂದರೆ ಮೊದಲನೆಯ ದಾಗಿ ನಿಧಾನವಾಗಿ ಸಂಚಾರ ಮಾಡುವಂತಹ ಗ್ರಹಗಳನ್ನು ನೋಡಿ ಕೊಂಡು, ಅಂದರೆ ರಾಶಿ ಭವಿಷ್ಯವನ್ನು ನೋಡುವುದಕ್ಕೂ ಮುನ್ನ ಈ ಒಂದು ಮಾಸದ ಗ್ರಹಗಳ ಬದಲಾವಣೆಯಾವ ರೀತಿ ಇರುತ್ತದೆ ಅವುಗಳ ಸಂಚಾರ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಗುರುವಿನ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಗುರುವು 21/04/2023 ಕ್ಕೆ ನಿಮ್ಮ ರಾಶಿಯಿಂದ ಮೇಷ ರಾಶಿಗೆ ಬರುತ್ತಾನೆ.

ಹಾಗೆಯೇ ಗುರುವಿನ ಜೊತೆ ರಾಹು ಕೂಡ ಇರುತ್ತಾನೆ. ಮತ್ತು ಶನಿಯೂ ಕೂಡ ವರ್ಷದ ಕೊನೆವರೆಗೂ ಕೂಡ ನಿಮ್ಮ ರಾಶಿಯಿಂದ ಏಕಾದಶ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ, ಇರುತ್ತಾನೆ ಹಾಗಾಗಿ ಶನಿಯ ಸಂಪೂರ್ಣವಾದಂತಹ ಪ್ರಭಲವಾದಂತಹ ಅಂಶ ನಿಮ್ಮಲ್ಲಿ ಇರುವಂತದ್ದು. ಹಾಗೆಯೇ ವಿಶೇಷವಾಗಿ ರಾಹುವೂ ಕೂಡ 30 ಹತ್ತರವರೆಗೂ ನಿಮ್ಮ ರಾಶಿಯಲ್ಲಿ ಇದ್ದು ಆನಂತರ ವಕ್ರವಾಗಿ ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರಕ್ಕೆ ರಾಹು ಪ್ರಯಾಣ ಮಾಡುತ್ತಾನೆ.

ಹಾಗಾದರೆ ಮೇಷ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ನಿಮಗೆ ಶನಿಯ ಬಲ ಅದ್ಭುತವಾಗಿ ಇರುವುದರಿಂದ ಶನಿ ಸಂಪೂರ್ಣವಾಗಿ ಬಲಗೊಳ್ಳುತ್ತಾನೆ. ಆದರೆ ಗುರು ನಿಮಗೆ 12ನೇ ರಾಶಿಯಲ್ಲಿ ಆರಂಭದಲ್ಲಿ ಇರುತ್ತಾನೆ ಹಾಗಾಗಿ ಆರಂಭ ದಿನದಲ್ಲಿ ಸ್ವಲ್ಪ ನಿಧಾನ ಆಗಬಹುದು ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ.

ಹಾಗೆಯೇ ಮೇಷ ರಾಶಿಯವರಿಗೆ ಈ ವರ್ಷ ಆತ್ಮಸ್ಥೈರ್ಯ ಹೆಚ್ಚಾಗಿ ಎಲ್ಲರಿಗೂ ಕೂಡ ಬರುತ್ತದೆ. ಇನ್ನು ಹಣಕಾಸಿನ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದರೆ ಐದರಷ್ಟು ಸಂಪಾದನೆ ಐದರಷ್ಟು ವ್ಯಯ, ಅದರಲ್ಲೂ ಮೊದಲೇ ಹೇಳಿದಂತೆ ಆರಂಭದಲ್ಲಿ ಸ್ವಲ್ಪ ನಿಧಾನವಾದರೂ ಯುಗಾದಿ ಮುಗಿದ ನಂತರದ ದಿನದಲ್ಲಿ ನಿಮಗೆ ಆದಾಯ ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *