ಇಲ್ಲಿ ಕುದುರೆಗೆ ಬರುತ್ತಿದೆ ಜೀವ, ಅತಿ ಶೀಘ್ರದಲ್ಲಿ ಬರಲಿದೆ ಕಲ್ಕಿ ಅವತಾರ…ಎಲ್ಲಿದೆ ನೋಡಿ ಈ ಕುದುರೆ…

ಇಲ್ಲಿ ಕುದುರೆಗೆ ಬರುತ್ತಿದೆ ಜೀವ, ಅತಿ ಶೀಘ್ರದಲ್ಲಿ ಬರಲಿದೆ ಕಲ್ಕಿ ಅವತಾರ…..!!

WhatsApp Group Join Now
Telegram Group Join Now

ಯಾವಾಗ ಭೂಮಿಯ ಮೇಲೆ ಆಧರ್ಮ ಜನ್ಮ ತಾಳುತ್ತದೆಯೋ ಆಗ ನಾನು ಹೊಸ ಅವತಾರದೊಂದಿಗೆ ಜನ್ಮತಾಳುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ. ಪುರಾಣಗಳ ಪ್ರಕಾರ ಭಕ್ತರಿಗೆ ಅಥವಾ ಭೂಮಿಯ ಮೇಲೆ ಯಾವುದೇ ದೊಡ್ಡ ತೊಂದರೆ ಉಂಟಾದಾಗ ಆ ಸಮಸ್ಯೆಯ ನಿವಾರಣೆಗೆ ದೇವರು ಯಾವುದೋ ಒಂದು ರೂಪದಲ್ಲಿ.

ಅಥವಾ ಇನ್ನೊಂದು ರೂಪದಲ್ಲಿ ಅವತರಿಸಿ ಬಂದು ಆ ಸಮಸ್ಯೆಗಳನ್ನು ಪರಿಹರಿಸುತ್ತಾನೆ. ಇದೇ ಕಾರಣಕ್ಕೆ ವಿಷ್ಣು ನಾನಾ ಅವತಾರಗಳನ್ನು ಎತ್ತಿದ್ದರು. ಈ ರೀತಿಯಾಗಿ ವಿಷ್ಣು ಸುಮಾರು 24 ಅವತಾರಗಳನ್ನು ತಾಳುತ್ತಾರೆ ಎಂಬುದನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಅವತಾರಗಳ ಮೂಲಕ ಧರ್ಮ ಸ್ಥಾಪನೆ ಮಾಡಿ ಧರ್ಮ ರಕ್ಷಣೆ ಮಾಡುತ್ತಾನೆ ಎನ್ನುತ್ತಾರೆ. ಅಂತಹದ್ದರಲ್ಲಿ ವಿಷ್ಣುವಿನ 24ನೇ ಅವತಾರವೇ ಕಲ್ಕಿ ಅವತಾರ.

ಆದರೆ ವಿಷ್ಣು ಪುರಾಣದ ಪ್ರಕಾರ ಇದು ಹತ್ತನೇ ಅವತಾರವಾಗಿದೆ. ಕಲ್ಕಿ ಎಂಬ ಪದದ ಅರ್ಥ ಶಾಶ್ವತತೆ ಅಥವಾ ಸಮಯರೂಪಕವಾಗಿದೆ ಇದರ ಮೂಲಕ ಕಲ್ಕ ಎಂಬ ಸಂಸ್ಕೃತ ಪದದಲ್ಲಿದೆ. ಇದರ ಅರ್ಥ ಕತ್ತಲೆಯನ್ನು ನಾಶ ಮಾಡು ಅಥವಾ ಅಜ್ಞಾನವನ್ನು ನಾಶ ಮಾಡುವುದು ಎಂದರ್ಥ. ಕಲ್ಕಿಯು ಬಿಳಿ ಕುದುರೆ ಮೇಲೆ ಸವಾರಿ ಮಾಡಿ. ಪಾಪಿಗಳನ್ನು ನಾಶ ಮಾಡಿ.

ಭೂಮಿಯಲ್ಲಿ ಮತ್ತೆ ಆಧರ್ಮವನ್ನು ಸ್ಥಾಪಿಸುತ್ತಾನೆ ಎನ್ನುವ ಉಲ್ಲೇಖವಿದೆ. ಪೌರಾಣಿಕೆ ನಂಬಿಕೆಯ ಪ್ರಕಾರ ಭಗವಾನ್ ಕಲ್ಕಿಯ ಅವತಾರವಾದ ತಕ್ಷಣ ಸತ್ ಯುಗವು ಪ್ರಾರಂಭವಾಗುತ್ತದೆ. ಶ್ರೀ ಕೃಷ್ಣನ ನಿರ್ಗಮನದಿಂದ ಈ ಕಲಿಯುಗ ಪ್ರಾರಂಭವಾಗಿತ್ತು. ಭಾಗವತ ಪುರಾಣದ ಪ್ರಕಾರ ಕಲಿಯುಗದ ಅಂತ್ಯದ ವೇಳೆ ಹಿಮಾಲಯದ ತಪ್ಪಲಿನಲ್ಲಿರುವಂತಹ ಶಾಂಬಲ ಎಂಬ ಗ್ರಾಮದಲ್ಲಿ ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಟಿ ಎಂದು ವಿಷ್ಣು ಹಾಗೂ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಆತನ ಮಗ ಸುಮತಿಯ ಮಗನಾಗಿ ಕಲ್ಕಿಯೂ ಅವತಾರವನ್ನೆತ್ತಿ ಬರುತ್ತಾನೆ ಎನ್ನುವುದು ಉಲ್ಲೇಖಿಸಲಾಗಿದೆ. ಅಧರ್ಮವನ್ನು ನಾಶಪಡಿಸಿ ಧರ್ಮವನ್ನು ಸ್ಥಾಪನೆ ಮಾಡಲೆಂದೇ ಕಲ್ಕಿಯೂ ದೇವದತ್ತ ಎಂಬ ಹೆಸರನ್ನು ಇಟ್ಟುಕೊಂಡು ಬಿಳಿ ಕುದುರೆಯನ್ನೇರಿ ಬರುತ್ತಿದ್ದಾನೆ ಎನ್ನುವುದು ಧರ್ಮ ಗ್ರಂಥದಲ್ಲಿ ಉಲ್ಲೇಖವಿದೆ. ಇದಷ್ಟೇ ಅಲ್ಲದೆ ಕಲ್ಕಿಯೂ ರೆಕ್ಕೆಯನ್ನು ಹೊಂದಿರುತ್ತಾನೆ ಬಿಳಿ ಬಣ್ಣದ ಕುದುರೆಯನ್ನೇರಿ ಬರುತ್ತಾನೆ ಹಾಗೂ ಎಡಗೈನಲ್ಲಿ ಮಿಂಚುವ ಖಡ್ಗವನ್ನು ಹಿಡಿದು.

ದುಷ್ಟರನ್ನು ನಾಶಪಡಿಸುತ್ತಾನೆ. ಅಂದ ಹಾಗೆ ಇಡೀ ವಿಶ್ವದಲ್ಲಿಯೇ ಜೈಪುರ್ ನಲ್ಲಿ ಕಲ್ಕಿಯ ದೇವಾಲಯವಿದೆ. ಕಲ್ಕಿಯು ಭಗವಂತನಿಗೆ ಸಮರ್ಪಕವಾದ ಏಕೈಕ ದೇವಾಲಯ ಇದು ಎಂದು ಹೇಳಲಾಗುತ್ತಿದೆ. ಕಲ್ಕಿಯ ದೇವಸ್ಥಾನವನ್ನು ಜೈಪುರ್ ನಗರದ ಸಂಸ್ಥಾಪಕ ಮಹಾರಾಜ ಸವರಾಯಿ ಜೈ ಸಿಂಗ್ ನಿಯೋಜಿಸಿದ್ದರು. ಕೆಲವು ಉಲ್ಲೇಖಗಳು 1727ರಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]