ನಿಮ್ಮ ಮನೆಯಲ್ಲಿ ಈ ರೀತಿ ಸೂಚನೆಗಳು ಕಾಣಿಸಿದರೆ ದೇವತೆಗಳು ನೆಲೆಸಿದ್ದಾರೆ ಅವರ ಆಶೀರ್ವಾದ ಇದೆ ಎಂದು ಅರ್ಥ..... - Karnataka's Best News Portal

ನಿಮ್ಮ ಮನೆಯಲ್ಲಿ ಈ ರೀತಿ ಸೂಚನೆಗಳು ಕಾಣಿಸಿದರೆ ದೇವತೆಗಳು ನೆಲೆಸಿದ್ದಾರೆ ಅವರ ಆಶೀರ್ವಾದ ಇದೆ ಎಂದು ಅರ್ಥ…..||

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಪೂಜೆಯನ್ನು ಮಾಡುತ್ತಿರುತ್ತಾರೆ. ಆದರೆ ಆ ಮನೆಯಲ್ಲಿ ದೈವಿಕ ಕಳೆ ಇದಿಯಾ ಅಥವಾ ಇಲ್ಲವಾ ಎಂಬುದನ್ನು ಹೇಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯ ಎಂಬುದು ಯಾರಿಗೂ ಕೂಡ ತಿಳಿದಿಲ್ಲ ಹಾಗಾದರೆ ಈ ದಿನ ಯಾವ ಮನೆಯಲ್ಲಿ ದೈವಿಕ ಕಳೆ ಇರುತ್ತದೆ.

ಹಾಗೂ ಈ ಒಂದು ದೈವಿಕ ಕಳೆ ಇದ್ದರೆ ಯಾವ ರೀತಿಯಾದಂತಹ ಲಕ್ಷಣಗಳು ಅವರ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರು ತಿಳಿದು ಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಪ್ರತಿಯೊಬ್ಬರೂ ಕೂಡ ನಿಮ್ಮ ಮನೆಗಳಲ್ಲಿ ಪೂಜೆಯನ್ನು ಮಾಡುವುದರ ಮೂಲಕ ಮಂತ್ರ ಪಾರಾಯಣವನ್ನು ಮಾಡುವುದರ ಮೂಲಕ ದೇವರನ್ನು ಆರಾಧನೆ ಮಾಡುತ್ತಿದ್ದರು ಅವರ ಮನೆಯಲ್ಲಿ ದೈವಿಕ ಶಕ್ತಿ ನೆಲೆಸಿರುತ್ತದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಕೆಲವೊಂದು ಸೂಚನೆಗಳು ಕೂಡ ಬರುತ್ತಿರುತ್ತದೆ. ಆದರೆ ಅದು ಯಾರಿಗೂ ಕೂಡ ತಿಳಿಯುವುದಿಲ್ಲ ಹಾಗಾದರೆ ಆ ಸೂಚನೆಗಳು ಯಾವುದು ಎಂದು ನೋಡುವುದಾದರೆ. ಮನೆಯಲ್ಲಿ ಒಂದು ರೀತಿಯ ಶಾಂತ ವಾತಾವರಣ ನೆಲೆಸಿರುತ್ತದೆ. ಹಾಗೂ ಮನೆಯವರೆಲ್ಲ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲೂ ಕೂಡ ಹೆಚ್ಚು ಜಗಳವಾಡುವುದಿಲ್ಲ ಶಾಂತತೆಯಿಂದ ಇರುತ್ತಾರೆ.

ಹಾಗೂ ಮನೆಗೆ ಯಾರೇ ಬರಲಿ ಅವರು ನಮ್ಮ ಮನೆಯಲ್ಲಿ ನೆಮ್ಮದಿಯಿಂದ ಕುಳಿತು ಶಾಂತತೆಯನ್ನು ಅನುಭವಿಸುತ್ತಿರುತ್ತಾರೆ. ಹಾಗೆಯೇ ಎಲ್ಲ ಏನೇ ಮಾತನಾಡಿದರು ಕೂಡ ಮನೆಯಲ್ಲಿ ಒಳ್ಳೆಯದೇ ನಡೆಯುತ್ತಿರುತ್ತದೆ. ಬೇರೆಯವರು ನಿಮ್ಮ ಬಗ್ಗೆ ಎಷ್ಟೇ ಹೀಯಾಳಿಸಿ ಮಾತನಾಡಿ ನಿಮಗೆ ಶಾಪ ಹಾಕಿದರೂ ಕೂಡ ಅದು ನಿಮಗೆ ತಟ್ಟುವುದಿಲ್ಲ ಬದಲಿಗೆ ಅದು ಒಳ್ಳೆಯ ರೀತಿಯಾಗಿಯೇ ನಡೆಯುತ್ತಿರುತ್ತದೆ. ಆ ಮನೆಯಲ್ಲಿ ಅತಿಥಿ ಸತ್ಕಾರ ನಡೆಯುತ್ತಿರುತ್ತದೆ.

ನೀವು ಯಾವುದೇ ಪದಾರ್ಥವನ್ನು ತಯಾರು ಮಾಡಿದರು ಕೂಡ ಅದರ ಪರಿಮಳ ಹೆಚ್ಚಾಗುವುದಷ್ಟೇ ಅಲ್ಲದೆ ಅದರ ರುಚಿಯೂ ಕೂಡ ಹೆಚ್ಚಾಗಿರುತ್ತದೆ. ಹಾಗೆಯೇ ಅಂಥವರ ಮನೆಗಳಲ್ಲಿ ಎಲ್ಲಾ ಪ್ರಾಣಿ ಪಕ್ಷಿಗಳು ಕೂಡ ಬರುತ್ತಿರುತ್ತದೆ. ಅವುಗಳು ಕೂಡ ಅಲ್ಲಿ ಹೆಚ್ಚು ಸಂತೋಷವನ್ನು ಅನುಭವಿಸುತ್ತವೆ ಹಾಗೂ ಅದೇ ರೀತಿಯಾಗಿ ಅವುಗಳಿಗೂ ಕೂಡ ಅವರ ಮನೆಯವರು ಆಹಾರ ಪದಾರ್ಥಗಳನ್ನು ಹಾಕುತ್ತಿರುತ್ತಾರೆ.

ನಿಮ್ಮ ದೇವರ ಮನೆಯಲ್ಲಿರುವಂತಹ ಎಲ್ಲಾ ವಿಗ್ರಹಗಳು ಫೋಟೋಗಳಲ್ಲಿರುವಂತಹ ದೇವರುಗಳು ಕಳಕಳಿಯಿಂದ ಕಾಣಿಸುವಂತದ್ದು. ನಿಮಗೆ ಮಂದಹಾಸವನ್ನು ತೋರುತ್ತಿದೆ ಎನ್ನುವ ಅನುಭವ ಉಂಟಾಗುವುದು. ಹೀಗೆ ಈ ಎಲ್ಲಾ ವಿಧವಾಗಿ ನಿಮಗೆ ಕೆಲವೊಂದಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆಗ ನೀವು ತಿಳಿದುಕೊಳ್ಳ ಬಹುದು ನಮ್ಮ ಮನೆಯಲ್ಲಿ ದೈವಿಕ ಅಂಶ ಇದೆ ಎಂದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *