ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಕೆಲಸ ನಿಮಿಷದಲ್ಲಿ ಮುಗಿಯುತ್ತೆ.....!! ಪೊರಕೆ ಬಹಳ ದಿನಗಳವರೆಗೆ ಬಾಳಿಕೆ ಬರುತ್ತದೆ..! - Karnataka's Best News Portal

ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಕೆಲಸ ನಿಮಿಷದಲ್ಲಿ ಮುಗಿಯುತ್ತೆ…..!! ಪೊರಕೆ ಬಹಳ ದಿನಗಳವರೆಗೆ ಬಾಳಿಕೆ ಬರುತ್ತದೆ..!

ಮನೆಯಲ್ಲಿರುವಂತಹ ಮಹಿಳೆಯರಿಗೆ ಮನೆಯಲ್ಲಿರುವ ಎಲ್ಲಾ ಕಸವನ್ನು ತೆಗೆದುಹಾಕುವುದು ಎಂದರೆ ದೊಡ್ಡ ಕೆಲಸವಾಗಿರುತ್ತದೆ. ಅದರಲ್ಲೂ ಮನೆಯಲ್ಲಿ ಮಕ್ಕಳೇನಾದರೂ ಇದ್ದರೆ ದಿನಕ್ಕೆ ನಾಲ್ಕರಿಂದ ಐದು ಬಾರಿ ಕಸ ಗುಡಿಸಲೇ ಬೇಕಾಗಿರುತ್ತದೆ. ಇಲ್ಲವಾದರೂ ಕೂಡ ದಿನಕ್ಕೆ ಮೂರು ಬಾರಿಯಾದರೂ ಮನೆಯಲ್ಲಿ ಕಸ ಗುಡಿಸಬೇಕು.

ಅದರಲ್ಲೂ ಈ ಸಮಯದಲ್ಲಿ ಹೆಚ್ಚು ಧೂಳು ಬರುತ್ತಿರುತ್ತದೆ. ಇದರಿಂದ ಮನೆಯಲ್ಲಿಯೂ ಕೂಡ ಹೆಚ್ಚು ಕಸ ಬಂದು ಸೇರುತ್ತದೆ. ಆದ್ದರಿಂದ ಪ್ರತಿದಿನ ಮೂರು ಬಾರಿಯಾದರೂ ಮನೆಯನ್ನು ಸ್ವಚ್ಛ ಮಾಡಲೇಬೇಕು ಇದರಿಂದ ಮನೆಯಲ್ಲಿರುವಂತಹ ಮಹಿಳೆಯರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಎಂದೇ ಹೇಳಬಹುದು. ಆದರೆ ಈ ದಿನ ನಾವು ಹೇಳುವಂತಹ ಈ ಟಿಪ್ಸ್ ಫಾಲೋ ಮಾಡಿದರೆ.

ನಿಮ್ಮ ಕೆಲಸ ಬೇಗ ಮುಗಿಯುತ್ತದೆ ಹಾಗೆಯೇ ಯಾವುದೇ ರೀತಿಯ ಹೆಚ್ಚು ಶ್ರಮ ಪಡುವಂತಹ ಅವಶ್ಯಕತೆ ಇಲ್ಲ. ಜೊತೆಗೆ ಮನೆಯಲ್ಲಿರುವಂತಹ ಪೊರಕೆ ಕೂಡ ಹೆಚ್ಚು ದಿನಗಳವರೆಗೆ ಬಾಳಿಕೆ ಬರುತ್ತದೆ. ಹೆಚ್ಚು ಹಣ ಕೊಟ್ಟು ತಂದಂತಹ ಪೊರಕೆ ಹೆಚ್ಚು ದಿನ ಬಾಳಿಕೆಗೆ ಬರುವುದಿಲ್ಲ ಕೆಲವೇ ದಿನಗಳಲ್ಲಿ ಅದು ಎಲ್ಲಾ ಉದುರಿ ಹೋಗಿ ಬೇಗ ಹಾಳಾಗುತ್ತಿರುತ್ತದೆ. ಆದರೆ ಈ ಒಂದು ವಿಧಾನವನ್ನು ನೀವು ಅನುಸರಿಸಿದರೆ.

ಪೊರಕೆ ಹೆಚ್ಚು ದಿನ ಬಾಳಿಕೆಗೆ ಬರುತ್ತದೆ.ಹೀಗೆ ಪೋರಕೆಗೆ ಸಂಬಂಧ ಪಟ್ಟಂತೆ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪೊರಕೆಯನ್ನು ಉಪಯೋಗಿಸಿ ಗುಡಿಸುತ್ತಿದ್ದರೆ ಪ್ರತಿದಿನ ಅದರ ಕಡ್ಡಿಗಳು ಸಡಿಲವಾಗಿ ಅದರ ಕಡ್ಡಿಗಳೆಲ್ಲವೂ ಆಚೆ ಬೀಳುತ್ತಿರು ತ್ತದೆ ಆದರೆ ಇದನ್ನು ತಡೆಗಟ್ಟಲು ಒಂದು ಅಂಚೆ ಕಡ್ಡಿಯನ್ನು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಿ ಅದನ್ನು ಪೊರಕೆಯ ಮಧ್ಯೆ ಭಾಗಕ್ಕೆ ಹಾಕುವುದರಿಂದ.

ಪೊರಕೆ ಸ್ಟಿಫ್ ಆಗಿ ಕೂರುತ್ತದೆ ಹಾಗೂ ಪೋರಕೆಯ ಯಾವುದೇ ಕಡ್ಡಿ ಆಚೆ ಬೀಳುವುದಿಲ್ಲ. ಇದರಿಂದ ಪೊರಕೆ ಹೆಚ್ಚು ದಿನ ಬಾಳಿಕೆ ಬರುವ ಹಾಗೆ ಸಹಾಯವಾಗುತ್ತದೆ. ಅದೇ ರೀತಿಯಾಗಿ ಕಡ್ಡಿ ಹಾಕುವಂತಹ ಸ್ಥಳದಲ್ಲಿ ಮತ್ತೆ ಪೊರಕೆ ಕಡ್ಡಿ ಉದುರುತ್ತಿದ್ದರೆ ಆ ಜಾಗಕ್ಕೆ ಟೇಪ್ ಗಟ್ಟಿಯಾಗಿ ಸುತ್ತಬೇಕು ಈ ರೀತಿ ಮಾಡುವುದರಿಂದಲೂ ಕೂಡ ಪೊರಕೆಯ ಕಡ್ಡಿ ಆಚೆ ಬೀಳುವುದಿಲ್ಲ.

ಅದೇ ರೀತಿಯಾಗಿ ಪೊರಕೆಯ ಮೇಲ್ಭಾಗದಲ್ಲಿ ಒಂದು ದಾರದ ಸಹಾಯದಿಂದ ಎರಡು ಭಾಗ ಮಾಡಿ ಅದಕ್ಕೆ ಒಂದು ದಾರ ಸುತ್ತಿ ನಂತರ ಅಷ್ಟನ್ನು ಸೇರಿಸಿ ಒಂದು ದಾರವನ್ನು ಕಟ್ಟಿ ಕಸವನ್ನು ಗುಡಿಸುವುದರಿಂದ ಪೊರಕೆ ಬಗ್ಗುವುದಿಲ್ಲ ಜೊತೆಗೆ ಫ್ರಿಜ್ ಅಥವಾ ವಾಷಿಂಗ್ ಮಷೀನ್ ಕೆಳಗೆಯೂ ಸಹ ಕಸವನ್ನು ಸುಲಭವಾಗಿ ತೆಗೆಯಬಹುದು. ಈ ರೀತಿ ಮಾಡುವುದರಿಂದ ಮೇಲೆ ಹೇಳಿದಂತೆ ಕಡ್ಡಿಗಳು ಬಗ್ಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *