ನೆನಪಿದೆಯಾ 251 ರುಪಾಯಿಯ ಮೊಬೈಲ್? ಇವನು ಬಕ್ರ ಮಾಡಿದ್ದು ಅದೆಷ್ಟು ಕೋಟಿ ಜನರಿಗೆ ಗೊತ್ತಾ.. - Karnataka's Best News Portal

ನೆನಪಿದೆಯಾ 251 ರುಪಾಯಿಯ ಮೊಬೈಲ್? ಇವನು ಬಕ್ರ ಮಾಡಿದ್ದು ಅದೆಷ್ಟು ಕೋಟಿ ಜನರಿಗೆ ಗೊತ್ತಾ……?

ಇದು ಶುರುವಾಗಿದ್ದು 2016ರ ಇಸವಿಯಲ್ಲಿ ಆಗ ಉತ್ತರ ಪ್ರದೇಶದ ನೋವಿಡಾದ ರಿಂಗಿಂಗ್ ಬೆಲ್ಸ್ ಎಂಬ ಖಾಸಗಿ ಸಂಸ್ಥೆಯೊಂದು ಕೇವಲ 251 ರೂಪಾಯಿಗೆ ಫ್ರೀಡಂ 251 ಎಂಬ ಸ್ಮಾರ್ಟ್ ಫೋನ್ ವಿತರಿಸ ಲಾಗುತ್ತದೆ ಎಂಬ ಜಾಹೀರಾತನ್ನು ನೀಡಿತ್ತು. ಇದರಲ್ಲಿ 3G ನೆಟ್ ವರ್ಕ್.

1.3 GHZ QUAD CORD ಪ್ರೊಸೆಸರ್, 1GB RAM, 8 GB ಇಂಟರ್ನಲ್ ಸ್ಟೋರೇಜ್, 1450 MAH ಲಿಥಿಯಂ ಅಯಾನ್ ಬ್ಯಾಟರಿ, ಹೀಗೆ ಮುಂತಾದ ಅದ್ಭುತವಾದ ಫೀಚರ್ ಗಳಿವೆ ಎಂಬ ಜಾಹೀರಾತನ್ನು ನೀಡಿದ್ದರು. ಹಾಗೆಯೇ ಒಂದು ವರ್ಷ ವಾರೆಂಟಿ ಅನ್ನು ಸಹ ಕೊಟ್ಟು ದೇಶದ ಹಲವು ಕಡೆ ಇದರ ಶೋರೂಮ್ ಹಾಗೂ ಸರ್ವಿಸ್ ಸೆಂಟರ್ ಗಳನ್ನು ಕೂಡ ತೆರೆಯುವುದಾಗಿ ಅನೌನ್ಸ್ ಮಾಡಿದ್ದರು.

ಈ ಮೊಬೈಲ್ ಯಾವುದೇ ರೀತಿಯಲ್ಲೂ ಸಹ ಕೈಕೊಡದ ಹಾಗೆ ಸರ್ವಿಸ್ ನೀಡುವಂತೆ ಮಾಡಿ ಅವರು ಮಾತು ಕೊಟ್ಟಿದ್ದರು. ಹಾಗೂ ಇದರ ರಿಪೇರಿ ಸುಲಭವಾಗಿರುವಂತೆ ಸಾಕಷ್ಟು ಕಡೆ ಇದರ ಬ್ರಾಂಚ್ ತೆಗೆಯುವುದರ ಬಗ್ಗೆಯೂ ಸಹ ಹೇಳಿದ್ದರು. ಇದರ ಜೊತೆ ಈ ಮೊಬೈಲ್ ಬೆಲೆ ಕೇವಲ 251 ಎಂದು ಸಹ ಘೋಷಣೆ ಮಾಡಿದ್ದರು.

ಯಾವಾಗ ಈ ಜಾಹೀರಾತು ಅನೌನ್ಸ್ ಆಯಿತೋ ಈ ವಿಷಯ ಕಾಡ್ಗಿಚ್ಚಿನ ಹಾಗೆ ದೇಶದಲ್ಲೆಲ್ಲ ಹಬ್ಬ ತೊಡಗಿತು. ಜನರಿಗೆ ಇಷ್ಟು ಬೆಲೆಯುಳ್ಳಂತಹ ಫೋನ್ ಕೇವಲ 251 ಹೇಗೆ ಕೊಡುವುದಕ್ಕೆ ಸಾಧ್ಯ ಎಂದು ಎಲ್ಲರೂ ಯೋಚಿಸ ತೊಡಗಿದರು. ಇದಕ್ಕೆ ಕಾರಣ ಒಂದು ಕಡಿಮೆ ದರ್ಜೆಯ ಫೋನ್ ತಯಾರಿಸಲು ಸುಮಾರು ಅಂದರು 1500 ರೂಪಾಯಿ ಇಂದ 2000 ರೂಪಾಯಿ ಖರ್ಚಾಗುತ್ತದೆ.

ಹಾಗೂ ಫ್ರೀಡಂ 251 ರೀತಿಯ ಮೊಬೈಲ್ ತಯಾರಿಸಲು ಸುಮಾರು 5,000 ದಿಂದ 10,000 ವರೆಗೆ ಖರ್ಚು ಬೀಳುತ್ತದೆ. ಹೀಗಿದ್ದಾಗ ಇದನ್ನು ಕೇವಲ 251 ರೂಪಾಯಿಗೆ ಕೊಡಲು ಹೇಗೆ ಸಾಧ್ಯ ಎಂಬುದು ಹಲವರ ಯೋಚನೆಯಾಗಿತ್ತು. ಮೊಬೈಲ್ ಟೆಕ್ನಾಲಜಿಯ ಬಗ್ಗೆ ಸ್ವಲ್ಪ ತಿಳಿದಿರು ವಂತಹ ಯಾರೇ ಆದರೂ ಇದರ ಬಗ್ಗೆ ನಂಬಿಕೆ ಬರಲು ಸಾಧ್ಯವಿರಲಿಲ್ಲ.

ಆಗ ಎಷ್ಟೋ ಜನ ಇದೊಂದು ಸ್ಕ್ಯಾಮ್ ಅಷ್ಟೇ ಎಂದು ಇದನ್ನು ಉಡಾಫೆ ಮಾಡಿದರು. ಆದರೆ ಎಲ್ಲರೂ ಹೀಗೆ ಯೋಚಿಸಬೇಕಲ್ಲ. ಭಾರತದಲ್ಲಿ ಇಂತಹ ಸ್ಕ್ಯಾಮ್ ಗಳನ್ನು ಪೂರ್ವಪರ ಯೋಚಿಸದೆ ಎಷ್ಟೋ ಜನ ಈಗಲೂ ಸಹ ಇದ್ದಾರೆ. ಇಂಥವರಿಗೆ ದುಬಾರಿ ಬೆಲೆಯ ಯಾವುದೇ ವಸ್ತು ಇಷ್ಟು ಕಡಿಮೆ ಬೆಲೆ ಎಂದು ಹೇಳಿದರೆ ಸಾಕು ಅದಕ್ಕೆ ಹಣ ಖರ್ಚು ಮಾಡಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *