ಸೂರ್ಯಗ್ರಹಣ ಈ ವರ್ಷದ ಮೊದಲ ಗ್ರಹಣ ಯಾವ ರಾಶಿಗೆ ಒಳಿತು ಕೆಡುಕು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸೂರ್ಯ ಗ್ರಹಣ 2023…|| ಸೂರ್ಯ ಗ್ರಹಣ ಭಾರತ ದೇಶಕ್ಕೆ ಇದಿಯಾ ಇಲ್ಲವಾ……||

ಗ್ರಹಣ ಎನ್ನುವುದು ನಮ್ಮೆಲ್ಲರ ಬದುಕಿನಲ್ಲಿ ಕೆಲವೊಮ್ಮೆ ಭಯವನ್ನು ಉಂಟುಮಾಡುತ್ತದೆ. ಹಾಗೆಯೇ ಸಾಧಕರಿಗೆ ಸಂತೋಷವನ್ನು ಉಂಟುಮಾಡುವ ಪರ್ವಕಾಲ ಅತ್ಯಂತ ಶುಭ ಸಮಯ ಎಂದೇ ಹೇಳುತ್ತಾರೆ. ಹಾಗಾದರೆ ಸೂರ್ಯ ಗ್ರಹಣ ಇದೆಯಾ ಅಥವಾ ಇಲ್ಲವಾ ಎನ್ನುವುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈಗ ಶೋಭಾಕ್ಕೃತ್ ಅನ್ನುವಂತಹ ಸಂವತ್ಸರ ನಡೆಯುತ್ತಾ ಇದ್ದು ಶೋಭಾಕ್ಕೃತ್ ಅನ್ನುವಂತಹ ಸಂವತ್ಸರ ಪ್ರಾರಂಭವಾಗುತ್ತದೆ ಮಾರ್ಚ್ 22ನೇ ತಾರೀಖು. ಹಾಗೆಯೇ ಇದೇ ದಿನದಿಂದ ವಸಂತ ಋತುವಿನಲ್ಲಿ ಚೈತ್ರ ಮಾಸ ಪ್ರಾರಂಭವಾಗುತ್ತದೆ. ಇಂತಹ ಒಂದು ಅದ್ಭುತವಾದಂತಹ ಸಂವತ್ಸರದ ಸಂತೋಷವನ್ನು ಅನುಭವಿಸುತ್ತಿದ್ದಾಗ. ಸರಿ ಸುಮಾರು ಒಂದು ತಿಂಗಳ ಸಮಯಕ್ಕೆ ಗ್ರಹಣ ಎನ್ನುವುದು ಸಂಭವಿಸುತ್ತದೆ.

ಅದು ರಾಹುಗ್ರಸ್ತ ಸಂಪೂರ್ಣ ಸೂರ್ಯಗ್ರಹಣ. ಹಾಗಿದ್ದಾಗ ಇದು 20ನೇ ತಾರೀಖು ಏಪ್ರಿಲ್ 2023 ಅಂದರೆ ನಮಗೆ ಜನವರಿ ಒಂದು ಹೊಸ ವರ್ಷ ಎಂದು ತೆಗೆದು ಕೊಳ್ಳುವುದಿಲ್ಲ. ಬದಲಿಗೆ ಹೊಸ ವರ್ಷದ ಅಮಾವಾಸ್ಯೆ ಎಂದೂ ತೆಗೆದುಕೊಳ್ಳುತ್ತೇವೆ. ಇದು ಯುಗಾದಿ ಆದಮೇಲೆ ಪ್ರಾರಂಭವಾಗುವಂತದ್ದು. ಹಾಗಾಗಿ ಈ ವರ್ಷದ ಮೊದಲನೇ ಗ್ರಹಣ ಅದು ಸೂರ್ಯ ಗ್ರಹಣವಾಗಿರುತ್ತದೆ. ಗ್ರಹಣ ಎಂದರೆ ಸೂತಕ ಅಥವಾ ಛಾಯೆ ಎಂದು ಹೇಳುತ್ತೇವೆ.

ಹಾಗಾದರೆ ಈ ಸೂರ್ಯ ಗ್ರಹಣದ ಪ್ರಭಾವ ಯಾರ ಮೇಲಾದರೂ ಬೀಳುತ್ತದ, ಅಥವಾ ಇದರಿಂದ ಯಾವುದಾದರೂ ಸಮಸ್ಯೆಗಳು ಉಂಟಾಗಬಹುದಾ, ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಗ್ರಹಣದ ಸ್ಥಿತಿಗತಿಗಳನ್ನು ನೋಡಿದಾಗ ಭಾರತ ದೇಶಕ್ಕೆ ಮತ್ತು ನಮ್ಮ ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಇಲ್ಲ. ಆದ್ದರಿಂದ ಯಾರೂ ಕೂಡ ಭಯಪಡುವಂತಹ ಅವಶ್ಯಕತೆ ಇಲ್ಲ.

ಬದಲಿಗೆ ಪ್ರಕೃತಿಗೆ ಸಂಬಂಧಿಸಿದ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಮಳೆ ಬರುವಂತದ್ದು. ಸ್ವಲ್ಪಮಟ್ಟಿಗೆ ರೋಗಗಳು ಹೆಚ್ಚಾಗುವಂತದ್ದು. ಕ್ರಿಮಿ ಕೀಟಗಳಿಂದ ತೊಂದರೆ ಉಂಟಾಗುವಂತದ್ದು ಹಾಗೆಯೇ ಸಮುದ್ರದ ಏರಳಿತಗಳು ಹೀಗೆ ಸ್ವಾಭಾವಿಕವಾಗಿ ಕೆಲವೊಂದಷ್ಟು ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುತ್ತದೆ. ಅದರಲ್ಲೂ ಪೌರ್ಣಮಿಯ ದಿನ ಇವೆಲ್ಲಾ ಸಮಸ್ಯೆಗಳು ಹೆಚ್ಚಾಗಿರುತ್ತದೆ ಎಂದು ಹೇಳಬಹುದು. ಆದರೆ ಅಮಾವಾಸ್ಯೆಯ ದಿನ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ.

ಶಾಸ್ತ್ರೀಯವಾಗಿ ಈ ಗ್ರಹಣ ಸಂಭವಿಸುವಂಥದ್ದು ಯಾವಾಗ ಎಂದು ನೋಡಿದರೆ ಶೋಭಾಕ್ಕೃತ್ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ದಿನ ದಿನಾಂಕ 20/04/2023 ಗುರುವಾರದಂದು ವಿಶೇಷವಾಗಿ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಈ ಒಂದು ಗ್ರಹಣ ಸಂಭವಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *