ಇಂದಿನಿಂದ ನೀವು ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯುವುದಿಲ್ಲ..ಹೀಗೆ ಬಳಸಿ ನೋಡಿ - Karnataka's Best News Portal

ಇಂದಿನಿಂದ ನೀವು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಎಸೆಯುವುದಿಲ್ಲ…||

ಬೇಸಿಗೆ ಕಾಲ ಬಂದಿತ್ತು ಎಂದ ತಕ್ಷಣ ಎಲ್ಲರೂ ಕೂಡ ತಂಪು ಪಾನೀಯ ಹೀಗೆ ಹಣ್ಣಿನ ಜ್ಯೂಸ್ ತಂಪಾಗಿರುವಂತಹ ಆಹಾರ ಪದಾರ್ಥಗಳನ್ನು ಪಾನೀಯಗಳನ್ನು ಸೇವನೆ ಮಾಡುತ್ತೇವೆ. ಹಾಗೂ ಪ್ರತಿಯೊಬ್ಬರೂ ಕೂಡ ಆ ಸಮಯದಲ್ಲಿ ಹೆಚ್ಚಾಗಿ ಹಣ್ಣುಗಳನ್ನು ತಿನ್ನಲೇಬೇಕು ಎಂದು ವೈದ್ಯರು ಕೂಡ ಹೇಳುತ್ತಾರೆ. ಅದಕ್ಕಾಗಿ ಹೆಚ್ಚಾಗಿ ಸಾಮಾನ್ಯವಾಗಿ ಎಲ್ಲರೂ ಕೂಡ ಕಲ್ಲಂಗಡಿ ಹಣ್ಣನ್ನು ತಿಂದೆ ತಿನ್ನುತ್ತಾರೆ.

ಆದರೆ ಎಲ್ಲರೂ ಕೂಡ ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ಅದರ ಸಿಪ್ಪೆ ಯನ್ನು ಆಚೆ ಹಾಕುತ್ತಾರೆ. ಅವುಗಳನ್ನು ಹಸುಗಳು ತಿನ್ನುತ್ತವೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮಾಹಿತಿ ನಿಮಗೆ ಅದ್ಭುತವಾದ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಬಹುದು ಹಾಗಾದರೆ ಆ ವಿಷಯ ಏನು ಅದನ್ನು ಹೇಗೆ ಮಾಡುವುದು.

ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹೌದು ನಾವೆಲ್ಲರೂ ಕೂಡ ಕಲ್ಲಂಗಡಿ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಆಚೆ ಹಾಕುತ್ತೇವೆ ಆದರೆ ಈ ದಿನ ನಾವು ಹೇಳುವಂತಹ ಮಾಹಿತಿ ನಿಮಗೆ ತಿಳಿದರೆ ಅದನ್ನು ಯಾವುದೇ ಕಾರಣಕ್ಕೂ ಆಚೆ ಹಾಕುವುದಿಲ್ಲ ಬದಲಿಗೆ ಅದನ್ನು ಅಡುಗೆಗಳಲ್ಲಿ ಉಪಯೋಗಿಸಿ ಅದನ್ನು ತಯಾರಿಸಿ ನೀವು ಕೂಡ ಸೇವನೆ ಮಾಡುತ್ತೀರಿ.

ಹೌದು ಅಷ್ಟೊಂದು ಅದ್ಭುತವಾದಂತಹ ರುಚಿಯನ್ನು ಅದು ಹೊಂದಿರು ತ್ತದೆ ಹಾಗಾದರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಉಪಯೋಗಿಸಿ ಅದರಿಂದ ಚಟ್ನಿ ಅಥವಾ ಗೊಜ್ಜು ಇದನ್ನು ಹೇಗೆ ತಯಾರಿಸುವುದು. ಇದನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂಬುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದರ ಮೇಲಿನ ಭಾಗವನ್ನು ತೆಗೆಯಬೇಕು ನಂತರ ಅದನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಬೇಕು.

ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಟೊಮೆಟೊ ಇಷ್ಟನ್ನು ಹಾಕಿ ಈ ರುಬ್ಬಿದಂತಹ ಮಿಶ್ರಣವನ್ನು ಹಾಕಿ ಅದಕ್ಕೆ ಅಚ್ಚಕಾರದ ಪುಡಿ, ಗರಂ ಮಸಾಲಾ, ಅರಿಶಿನ ಪುಡಿ, ಉಪ್ಪು, ಎಲ್ಲವನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ.

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಚಟ್ನಿ ಅಥವಾ ಗೊಜ್ಜು ತಯಾರಾಗುತ್ತದೆ. ಇದು ಅದ್ಭುತವಾದಂತಹ ರುಚಿಯನ್ನು ಕೂಡ ಹೊಂದಿರುತ್ತದೆ ಇದನ್ನು ನೀವು ಎರಡರಿಂದ ಮೂರು ದಿನಗಳ ಕಾಲ ಇಟ್ಟುಕೊಳ್ಳಬಹುದು. ಹಾಗೆಯೇ ಫ್ರಿಡ್ಜ್ ನಲ್ಲಿ ಒಂದು ವಾರ 15 ದಿನಗಳವರೆಗೂ ಕೂಡ ಇಟ್ಟುಕೊಂಡು ಇದನ್ನು ನೀವು ಸೇವನೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *