ಕರ್ನಾಟಕ ಪೊಲೀಸ್ ಒಬ್ಬ PC ಇಂದ ಹಿಡಿದು IG ವರೆಗೂ ಎಷ್ಟು ಸಂಬಳ ಪಡೆಯುತ್ತಾರೆ ಗೊತ್ತಾ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕರ್ನಾಟಕ ಪೊಲೀಸ್ ಒಬ್ಬ PC ಇಂದ ಹಿಡಿದು IG ವರೆಗೂ ಎಷ್ಟು ಸಂಬಳ ಪಡೆಯುತ್ತಾರೆ ಗೊತ್ತಾ….||

ಅನೇಕರಿಗೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಕನಸು ಇರುತ್ತದೆ ಅದಕ್ಕಾಗಿ ಅನೇಕ ಪರಿಶ್ರಮಗಳನ್ನು ಕೂಡ ಎದುರಿಸುತ್ತಾರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರತಿವರ್ಷ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ರಾಜ್ಯ KSP ಯ ಅಧಿಕೃತ ವೆಬ್ಸೈಟ್ ನಲ್ಲಿ.

ಅದರ ಹುದ್ದೆಗಳ ಅಧಿ ಸೂಚನೆ ಇದ್ದೇ ಇರುತ್ತದೆ. ಇದರ ಅನೇಕ ಪರೀಕ್ಷೆಗಳಿಗೆ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ. ಇನ್ನು ಈ ಇಲಾಖೆಯಲ್ಲಿ ಇರುವಂತಹ PSI, PC ಹುದ್ದೆಗಳಿಗೆ ಸಂಬಳ ಎಷ್ಟು ಮತ್ತು ಇತರ ಸವಲತ್ತುಗಳು ಏನು ಅವರ ಕರ್ತವ್ಯಗಳು ಏನು ಎಂಬ ಬಗ್ಗೆ ಸೂಕ್ತ ಮಾಹಿತಿ ಇರೋದಿಲ್ಲ. ಹಾಗಾದರೆ ಈ ದಿನ.

ಎಲ್ಲ ವಿಷಯಗಳಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರು ಈ ಪರೀಕ್ಷೆಗಳಿಗೆ ಪೂರಕವಾದಂತಹ ಸ್ಟಡಿ ಮೆಟೀರಿಯಲ್ ಕೈಪೀಡಿ ಹಾಗೂ ಇತರೆ ದಿನಪತ್ರಿಕೆಗಳನ್ನು ಓದಿಕೊಂಡರೆ ಸಾಲದು ಈ ಹುದ್ದೆಗಳಿಗೆ ಫಿಸಿಕಲ್ ಫಿಟ್ನೆಸ್ ಕೂಡ ಅಗತ್ಯವಾಗಿರುವುದ ರಿಂದ ಸಾಧ್ಯವಾದಷ್ಟು ಆರೋಗ್ಯವನ್ನು ಕಾಪಾಡಿಕೊಂಡು ರನ್ನಿಂಗ್ ಹೈಜೆಂಪ್ ಹೀಗೆ ಮುಂತಾದವುಗಳನ್ನು ನಿರಂತರವಾಗಿ

ಅಭ್ಯಾಸ ಮಾಡಿಕೊಳ್ಳಬೇಕು. ಇನ್ನು ಕರ್ನಾಟಕ ರಾಜ್ಯದ PSI ಸಂಬಳದ ಬಗ್ಗೆ ಹೇಳುವುದಾದರೆ. ಇವರು ಕೇಂದ್ರವೇತನ ಆಯೋಗ ಅಂದರೆ CPC ಕಮಿಷನ್ ಪ್ರಕಾರ ನಿಗದಿಯಾಗುತ್ತದೆ ಪ್ರಸ್ತುತ ಈಗ ಏಳನೇ ವೇತನದ ಪ್ರಕಾರ ಸಂಬಳವನ್ನು ಕೊಡಲಾಗುತ್ತಿದೆ. ಈಗ ರಾಜ್ಯ PSI ಗಳಿಗೆ ಇರುವಂತಹ ಆರಂಭಿಕ ಸಬಲ 37,900 ಇದರ ಜೊತೆ ಮೆಡಿಕಲ್ ಭತ್ಯೆ ಎಂಬಂತೆ 200 ರೂಪಾಯಿ ಹೀಗೆ ಇತರೆ ಭತ್ಯೆಗಳು 3000.

ಹಾಗೂ ಇದರ ಜೊತೆ ಪ್ರತಿಯೊಬ್ಬರಿಗೂ ಅವರ ಜಿಲ್ಲೆಯ HRA ಭತಿಯೇ ಕೂಡ ಇರುತ್ತದೆ HRA ಅಂದರೆ ಹೌಸ್ ರೆಂಟ್ ಅಲೋಯನ್ಸ್ ಇದೇ ಸರಿ ಸುಮಾರು 24% ಇರುತ್ತದೆ. ಬೆಂಗಳೂರಿನಲ್ಲಿ ಡ್ಯೂಟಿ ಮಾಡು ವಂತ PSI ಗಳಿಗೆ HRA 24% ಇದ್ದರೆ ಇತರೆ ಜಿಲ್ಲಾ ನೌಕರರುಗಳಿಗೆ ಅದು ಶೇಕಡ 16% ಇರುತ್ತದೆ.

ಹಾಗೂ ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವವರಿಗೆ ಅವರ HRA ಮಿತಿ ಶೇಕಡ 8% ಇರುತ್ತದೆ. ಹಾಗಾಗಿ ಇದೆಲ್ಲ ಸೇರಿ ಒಬ್ಬ ಬೆಂಗಳೂರಿನ PSI ಗೆ ಒಟ್ಟು 54,460 ರೂಪಾಯಿ ವೇತನ ಪ್ರತಿ ತಿಂಗಳು ಸಿಗುತ್ತದೆ. ಇತರೆ ಜಿಲ್ಲಾ PSI ಅಧಿಕಾರಿಗಳಿಗೆ 51,428 ರೂಪಾಯಿ ತಿಂಗಳ ವೇತನ ಹಾಗೂ ಗ್ರಾಮೀಣ ಭಾಗದ PSI ಗಳಿಗೆ ಸುಮಾರು 48,396 ರೂಪಾಯಿ ತಿಂಗಳ ವೇತನ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *