ಯುಗಾದಿ ಹೊಸ ವರ್ಷದ ಸಂಪೂರ್ಣ ರಾಶಿಫಲ ಎಸ್ ಕೆ ಜೈನ್ ಅವರಿಂದ ರಾಶಿಫಲ ನೋಡಿ.. - Karnataka's Best News Portal

ಯುಗಾದಿ ವರ್ಷ ಭವಿಷ್ಯ 2023….||

ಯುಗಾದಿ ಹಬ್ಬವನ್ನು ಪ್ರತಿಯೊಬ್ಬರೂ ಕೂಡ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಹಾಗಾದರೆ ಈ ದಿನ ಯುಗಾದಿ ವರ್ಷ ಭವಿಷ್ಯ ಯಾವ ಯಾವ ರಾಶಿಯವರಿಗೆ ಯಾವ ರೀತಿ ಇರುತ್ತದೆ ಯಾವ ರಾಶಿಯವರು ಹೆಚ್ಚು ಯೋಗವನ್ನು ಪಡೆದುಕೊಳ್ಳುತ್ತಾರೆ? ಹಾಗೆ ಯಾರಿಗೆ ಈ ಯುಗಾದಿ ಅಮಾವಾಸ್ಯೆ ತೊಂದರೆಯನ್ನು ಉಂಟುಮಾಡುತ್ತದೆ ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಹಾಗಾದರೆ ಯುಗಾದಿ ವರ್ಷ ಭವಿಷ್ಯ ಯಾವ ರೀತಿ ಇದೆ ಎಂದು ನೋಡುವುದಾದರೆ ಈ ಯುಗಾದಿ ಹಬ್ಬಕ್ಕೆ ಈ ನಾಲ್ಕು ಗ್ರಹಗಳು ಮೀನ ರಾಶಿಯಲ್ಲಿ ಅಂದರೆ ವಸಂತ ಋತುವಿನಲ್ಲಿ ನಾವು ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಆದ್ದರಿಂದ ಮೇಷ ರಾಶಿಯವರು ಈ ನಾಲ್ಕು ಗ್ರಹಗಳು ಮೀನ ರಾಶಿಯಲ್ಲಿ ಇರುತ್ತದೆ ಪ್ರತಿ ವರ್ಷ ಮೀನ ರಾಶಿಯಲ್ಲಿ ಈ ನಾಲ್ಕು ಗ್ರಹಗಳು ಇದ್ದಾಗ ಯುಗಾದಿ ಹಬ್ಬ ಆಚರಿಸುತ್ತೇವೆ.

ಮೇಷ ರಾಶಿಯಲ್ಲಿ ಶುಕ್ರನು ಅಲ್ಲೇ ಇರುತ್ತಾನೆ. ಹೊಸ ವರ್ಷಕ್ಕೆ ಇದು ಅದ್ಭುತವಾದಂತಹ ಗ್ರಹ. ಹಾಗಾಗಿ ಮೇಷ ರಾಶಿಯವರಿಗೆ ಈ ವರ್ಷ ಹೆಚ್ಚು ಸಿಹಿ ಸುದ್ದಿಗಳು ಬರುವಂಥದ್ದು . ಹಾಗೆಯೇ 11ನೇ ಮನೆಯಲ್ಲಿ ಶನಿ ಇದ್ದು ಇದರಿಂದ ಆರ್ಥಿಕ ಅಭಿವೃದ್ಧಿ, ವ್ಯಾಪಾರಗಳಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ.

ಹಾಗೆಯೇ ನಿಮ್ಮ ಆಕಾಂಕ್ಷೆಗಳೆಲ್ಲವನ್ನು ಕೂಡ ಪೂರ್ಣಗೊಳಿಸಿಕೊಳ್ಳು ತ್ತೀರಿ. ನಿಮ್ಮ ರಾಶಿಯಲ್ಲಿ ರಾಹು ಬಂದಿರುವುದರಿಂದ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಸರ್ಪದಿಂದ ಭಯಗೊಳ್ಳುವುದು ಈ ರೀತಿಯಾ ದಂತಹ ಮನಸ್ಥಿತಿ ನಿಮ್ಮದಾಗಿರುತ್ತದೆ. ಇದನ್ನು ಸರಿಪಡಿಸುವುದಕ್ಕೆ ಸರ್ಪ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ವರ್ಷಪೂರ್ತಿ ಯಾವುದೇ ರೀತಿಯ ತೊಂದರೆ ಇಲ್ಲದೆ ಆರಾಮಾಗಿ ಇರಬಹುದು.

ಹಾಗೆಯೇ ಮೇಷ ರಾಶಿಯವರು ದೂರ ಪ್ರಯಾಣವನ್ನು ಮಾಡುತ್ತೀರಿ ನಿಮ್ಮ ಕೆಲಸಗಳಲ್ಲಿ ಪ್ರಮೋಷನ್ ಗಳು ಸಿಗುವ ಸಾಧ್ಯತೆ ಹೆಚ್ಚಾಗಿರು ತ್ತದೆ. ಹಾಗೆಯೇ ಶುಭ ಕಾರ್ಯಕ್ರಮಗಳಿಗೆ ಹೆಚ್ಚಿನ ಧನವನ್ನು ಖರ್ಚು ಮಾಡುತ್ತೀರಿ. ಮೇಷ ರಾಶಿಯವರಿಗೆ ಯುಗಾದಿ ಹಬ್ಬದ ದಿನ ಸ್ವಲ್ಪ ಚಿಂತೆ ಇರುತ್ತದೆ. ಆದರೆ ಎರಡು ದಿನ ಕಳೆದ ನಂತರ ಅದ್ಭುತವಾದಂತಹ ಪರಿವರ್ತನೆ ಉಂಟಾಗುತ್ತದೆ. ಇನ್ನು ಎರಡನೆಯದಾಗಿ ವೃಷಭ ರಾಶಿ ಇವರಿಗೆ ಗುರು ಬಲ ಇರುವಂತದ್ದು. ವಿವಾಹದಂಥ ಶುಭ ಕಾರ್ಯಕ್ರಮಗಳು ನಡೆಯುತ್ತದೆ.

ಸರ್ಕಾರಿ ಕೆಲಸ ಸಿಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ, ರಾಜಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಜಯ ಹಾಗೆಯೇ ಇದು ಎಲ್ಲರಿಗೂ ಕೂಡ ಅನ್ವಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವೊಬ್ಬರಿಗೆ ಜಯ ಸಿಕ್ಕರೆ ಮತ್ತಷ್ಟು ಜನರಿಗೆ ಜಯ ಸಿಗದೇ ಕೂಡ ಇರಬಹುದು. ವೃಷಭ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಶನಿಯ ಪ್ರಭಾವ ಇರುವುದರಿಂದ ಶನಿ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *