ನಮ್ಮ ಪೂರ್ವಜರಿಗಿದ್ದ ಅಗಾಧ ಜ್ಞಾನದ ಬಗ್ಗೆ ಗೊತ್ತಾ ? ನಮ್ಮವರ ಅರಿವನ್ನು ಕದ್ದವರು ಯಾರು. - Karnataka's Best News Portal

ನಮ್ಮ ಪೂರ್ವಜರಿಗಿದ್ದ ಅಗಾಧ ಜ್ಞಾನದ ಬಗ್ಗೆ ಗೊತ್ತಾ ? ನಮ್ಮವರ ಅರಿವನ್ನು ಕದ್ದವರು ಯಾರು.

ಈ ಜಗತ್ತಿನಲ್ಲಿ ಭಾರತ ಯಾಕೆ ಗ್ರೇಟ್ ಅನ್ನೋದು ಇದಕ್ಕೆ ನೋಡಿ…!!

ತಮಿಳುನಾಡಿನ ಅರತ್ತುರೈ ಎಂಬಲ್ಲಿ ವರಮೂರ್ತೇಶ್ವರ್ ಎಂಬ ಹೆಸರಿನ ದೇವಸ್ಥಾನ ಇದೆ. ಇದು ಭಾರತದ ಪುರಾತನ ದೇವಾಲಯಗಳಲ್ಲಿ ಒಂದು. ಇದು ಚೋಳರ ಕಾಲದಲ್ಲಿ ತನ್ನ ಉತ್ತುಂಗದಲ್ಲಿ ಇತ್ತು. ಈ ದೇಗುಲ ಕುರಿತಾದ ವಿವರಣೆ ನಮ್ಮ ಅನೇಕ ಪುರಾಣಗಳಲ್ಲೂ ಸಹ ಬರುತ್ತದೆ. ಕೆಲವು ವರದಿಗಳ ಪ್ರಕಾರ.

ಈ ದೇವಸ್ಥಾನವು ಇಲ್ಲಿಂದ ಐದಾರು ಸಾವಿರ ವರ್ಷದ ಹಳೆಯದೆಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ನಾವು ನೀವು ಕಾಣಬಹುದಾ ದಂತಹ ಅಚ್ಚರಿ ಏನು ಎಂದರೆ. ಇಲ್ಲಿರುವಂತಹ ಬಹು ವಿಚಿತ್ರವಾ ದoತಹ ಕೆತ್ತನೆ. ಇಲ್ಲಿ ನೋಡಿ ಹಾವು ಅಥವಾ ಹುಳುವಿನಂತೆ ಕೆತ್ತಲಾದ ವಾಸ್ತವವಾಗಿ ಇದು ವೀರ್ಯಾಣುವಿನ ಕೆತ್ತನೆ. ಅದರ ಪಕ್ಕದಲ್ಲಿರುವುದು ಹೆಣ್ಣಿನ ಅಂಡದ ಕೆತ್ತನೆ. ಅಂದರೆ ಇವುಗಳ ಬಗ್ಗೆ ಪ್ರಾಚೀನ ಭಾರತೀಯರು ಇಲ್ಲಿಂದ.

ಸಾವಿರಾರು ವರ್ಷಗಳ ಹಿಂದೆಯೇ ಅರಿತಿದ್ದರು ಎಂದು ಹೇಳಲು ಇದೊಂದು ಜ್ವಲಂತ ಸಾಕ್ಷಿಯಾಗಿದೆ. ಈ ಕೆತ್ತನೆಯ ಕೆಳಗೆ ಮತ್ತವೇ ಚಿತ್ರಗಳು ರಿಪೀಟ್ ಆಗಿ ಹೇಗೆ ಹೆಣ್ಣಿನ ಅಂಡದೊಳಗೆ ಪುರುಷರ ವೀರ್ಯವು ಸೇರಿ ಗರ್ಭಧಾರಣೆಯಾಗುತ್ತದೆ ಎಂಬ ವಿವರಣೆ ಇದೆ. ಅದರ ಕೆಳಗಡೆ ಹೆಣ್ಣಿನ ಗರ್ಭದಲ್ಲಿ ಮೊದಲ ವಾರದಲ್ಲಿ ರೂಪುಗೊಳ್ಳು ವಂತಹ ಕೆತ್ತನೆಯೂ ಸಹ ಇದೆ. ಇದೇ ಎಮ್ರಿಯೋ ಮುಂದೆ ಹೇಗೆ ಒಂದು ಮಾಂಸದ ಮುದ್ದೆಯಾಗಿ ಬೆಳೆದು.

See also  ಪರ ಸ್ತ್ರೀ ಪರ ಪುರುಷರ ವ್ಯಾಮೋಹಕ್ಕೆ ಬಲಿಯಾಗುವುದಕ್ಕೆ ಕಾರಣವೇನು? ಯಾಕೆ ಹೀಗಾಗ್ತಿದೆ ನೋಡಿ

ಪ್ರತ್ಯೇಕ ಜೀವವಾಗಿ ಹೊರಬರುತ್ತದೆ ಎಂಬುದು ಅದರಲ್ಲಿ ಕೆತ್ತನೆಯ ಮೂಲಕವೇ ಜನರಿಗೆ ತಿಳಿಸಲಾಗಿದೆ. ಈ ಕೆತ್ತನೆ ಇಲ್ಲಿಂದ ಕಡಿಮೆ ಎಂದರೂ ಮೂರ್ನಾಲ್ಕು ಸಾವಿರ ವರ್ಷದ ಹಳೆಯದೆಂದು ನಿಸ್ಸಂದೇಹ ವಾಗಿ ಹೇಳಬಹುದು. ಅನೇಕರು ಇದನ್ನು ಹಾವುಗಳ ಕೆತ್ತನೆ ಎಂದು ಹೇಳುತ್ತಾರೆ. ಆದರೆ ಈ ಗೊಂದಲಕ್ಕೆ ಉತ್ತರವಾಗಿ ಅದೇ ದೇಗುಲದಲ್ಲಿ ಇನ್ನೂ ಒಂದು ಕೆತ್ತನೆ ಇರುವುದನ್ನು ನೀವು ಕಾಣಬಹುದು.

ಅಲ್ಲಿ ಯಾವುದೋ ಎರಡು ಮೀನುಗಳು ಏನನ್ನೋ ಕಚ್ಚಿ ಹಿಡಿದಿರುವಂತೆ ಕೆತ್ತಿದ್ದಾರೆ. ಕೆಲವು ಕಡೆ ಅರ್ಧಮಾನವ ಹಾಗೂ ಅರ್ಧ ಮೀನಿನ ಆಕೃತಿಯ ರಚನೆಗಳು ಇದೆ. ಇದು ದಶಾವತಾರಗಳಲ್ಲಿ ವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯವತಾರದ ಕೆತ್ತನೆ ಅನ್ನುವುದು ಅನೇಕರ ವಾದ. ನಮ್ಮ ಪುರಾಣಗಳಲ್ಲಿ ದಶಾವತಾರದ ಬಗ್ಗೆ ರೋಚಕ ವಿವರಣೆಗಳು ಇದೆ. ಇನ್ನೊಂದು ಕಡೆ ವರ್ಣರಂಜಿತ ಹಾವುಗಳು. ಚಂದ್ರಾಕೃತಿಯ ಕಡೆಗೆ ನುಗ್ಗುತ್ತಿರುವಂತಹ ಕೆತ್ತನೆಗಳು ಇದೆ.

ಪುರಾಣಗಳಲ್ಲಿ ಹಾವನ್ನು ರಾಹು ಮತ್ತು ಕೇತು ಗಳಿಗೆ ಹೋಲಿಸಲಾಗಿದೆ. ರಾಹು ಮತ್ತು ಕೇತುಗಳು ಚಂದ್ರನನ್ನು ತಿನ್ನಲು ಬರುವಾಗ. ಅವರ ನೆರಳು ಚಂದ್ರನ ಅರ್ಧ ಮುಖವನ್ನು ಮರೆಮಾಚುವ ಬಗ್ಗೆ ನಮ್ಮಲ್ಲಿ ವರ್ಣನೆ ಇದೆ. ಇದೇ ಚಂದ್ರ ಗ್ರಹಣ. ಈ ಕೆತ್ತನೆಯಲ್ಲೂ ಸಹ ನೀವು ಅರ್ಧಚಂದ್ರಾಕೃತಿಯನ್ನು ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.