ಕನ್ಯಾ ರಾಶಿ ಯುಗಾದಿ ವರ್ಷ ಭವಿಷ್ಯ ಮುಂದಿನ ಯುಗಾದಿ ತನಕ ನಿಮ್ಮ ಅದೃಷ್ಟ ಹೇಗಿರುತ್ತೆ ನೋಡಿ.. - Karnataka's Best News Portal

ಕನ್ಯಾ ರಾಶಿ ಯುಗಾದಿ ವಾರ್ಷಿಕ ಫಲ 2023…….||

ಇದೇ ತಿಂಗಳು ಮಾರ್ಚ್ 22ನೇ ತಾರೀಖಿನಿಂದ ಶುಭಕೃತ್ ನಾಮ ಸಂವತ್ಸರದ ಯುಗಾದಿ ಶುರುವಾಗಲಿದೆ. ಇಂದಿನ ದಿನಗಳಲ್ಲಿ ಅನುಭವಿಸಿದಂತಹ ಕಷ್ಟ ನಷ್ಟಗಳೆಲ್ಲವನ್ನು ಕೂಡ ಮೆಟ್ಟಿನಿಂತು ಹೊಸತನದೊಂದಿಗೆ ಹೊಸ ಚಿಗುರಿನೊಂದಿಗೆ ಧೈರ್ಯ ಸ್ಥೈರ್ಯ ಮತ್ತು ಹಾಗೆಯೇ ಭರವಸೆಗಳನ್ನು ಕೊಡುವಂತಹ ಹಬ್ಬವೇ ಈ ಯುಗಾದಿ ಹಬ್ಬ ಎನ್ನಬಹುದು. ಈ ಹಬ್ಬವನ್ನು ಎಲ್ಲರೂ ಕೂಡ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಹಾಗಾದರೆ ಈ ದಿನ ಕನ್ಯಾ ರಾಶಿಯವರಿಗೆ ಈ ಯುಗಾದಿ ವಾರ್ಷಿಕ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಗುರು ಇಷ್ಟು ದಿನ ಮೀನ ರಾಶಿಯಲ್ಲಿ ಇದ್ದ ಆದರೆ ಏಪ್ರಿಲ್ 22ನೇ ತಾರೀಖಿಗೆ ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಸದ್ಯಕ್ಕೆ ರಾಹು ಈಗಾಗಲೇ ಮೇಷ ರಾಶಿಯಲ್ಲಿ ಇದ್ದಾನೆ.

ಹಾಗೆ ಅವನು ಈ ವರ್ಷದ ಕೊನೆಯವರೆಗೂ ಕೂಡ ಅಲ್ಲಿಯೇ ಇರುತ್ತಾನೆ. ಆದರೆ ನವೆಂಬರ್ 29ನೇ ತಾರೀಖಿಗೆ ಅವನು ಪುನಹ ಮೀನಾ ರಾಶಿಗೆ ಹೋಗುತ್ತಾನೆ. ಒಟ್ಟಾರೆಯಾಗಿ ಗುರು ಮತ್ತು ಮೀನಾ ನಿಮ್ಮ ಅಷ್ಟಮ ಸ್ಥಾನದಲ್ಲಿ ಒಟ್ಟಾಗಿಯೇ ಸ್ಥಿತರಾಗಿಯೇ ಇದ್ದಾರೆ ಎಂದು ಹೇಳಬಹುದು. ನಿಮಗೆ ಈ ವರ್ಷ ಪಂಚಮ ಶನಿಯಿಂದ ಬಿಡುಗಡೆ ಯಾಗಿದ್ದು ಸದ್ಯಕ್ಕೆ ಶನಿ ಈಗ ಕುಂಭ ರಾಶಿಯಲ್ಲಿ ಇದ್ದಾನೆ.

ಹಾಗೆಯೇ ಶನಿ ಈ ವರ್ಷ ಪೂರ್ತಿ ಕುಂಭ ರಾಶಿಯಲ್ಲಿಯೇ ಇರುತ್ತಾನೆ. ಜೊತೆಗೆ ನಿಮ್ಮ ಎರಡನೇ ಮನೆಯಲ್ಲಿ ಕೇತು ಇದ್ದಾನೆ. ಇವನು ಕೂಡ ಈ ವರ್ಷ ನವೆಂಬರ್ 29ನೇ ತಾರೀಖಿನ ತನಕ ನಿಮ್ಮ 2 ನೇ ಮನೆಯ ಲ್ಲಿಯೇ ಇರುತ್ತಾನೆ. ಅದಾದ ನಂತರ ಬದಲಾಗುತ್ತಾನೆ. ಹಾಗಾಗಿ ಈ ನಾಲ್ಕು ಗ್ರಹಗಳ ಆಧಾರದ ಮೇಲೆ 2023ರ ಯುಗಾದಿಯಿಂದ 2024ರ ಯುಗಾದಿಯ ತನಕ.

ಕನ್ಯಾ ರಾಶಿಯ ಭವಿಷ್ಯ ಯಾವ ರೀತಿ ಇದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ. ರಾಹು ಮತ್ತು ಶನಿ ನಿಮ್ಮ ಅಷ್ಟಮದಲ್ಲಿ ಇರುವುದು ನಿಮಗೆ ಅಷ್ಟೇನೂ ಶುಭಫಲಗಳನ್ನು ನೀಡುವುದಿಲ್ಲ. ಆದರೆ ಪಂಚಮ ಶನಿ ಬಿಡುಗಡೆಯಾಗಿರುವುದರಿಂದ ನಿಮಗೆ ಶನಿಯಿಂದ ಶುಭಫಲ ಸಿಗುತ್ತದೆ. ಜೊತೆಗೆ ಕೇತುವಿನಿಂದಲೂ ಕೂಡ ನೀವು ಅಶುಭ ಫಲಗಳನ್ನು ಪಡೆಯಬಹುದು. ಶನಿ ನಿಮ್ಮ ಆರನೇ ಮನೆಗೆ ಹೋಗುವುದರಿಂದ.

ಪಂಚಮ ಶನಿ ಬಿಡುಗಡೆಯಾಗುವುದರಿಂದ ನಿಮ್ಮ ಕೆಲಸ ಕಾರ್ಯಗಳ ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿಯನ್ನು ಕಾಣುತ್ತೀರಿ ಎಂದು ಹೇಳಬಹುದು. ಜೊತೆಗೆ ಯಾರೆಲ್ಲ ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಿರುತ್ತೀರೋ ಅಂದರೆ ಸರ್ಕಾರಿ ನೌಕರಿ ಆಗಿರುತ್ತೀರೋ ಅವರಿಗೆ ಈ ವರ್ಷ ಬಹಳ ತುಂಬಾ ಚೆನ್ನಾಗಿರುತ್ತೆ ಅದು ಹೇಗೆ ಎಂದರೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಗಳನ್ನು ಪಡೆಯಬಹುದು ಉನ್ನತ ಸ್ಥಾನವನ್ನು ಅಲಂಕರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *