ಅನುಪ್ರಭಾಕರ್ ಅವರ ಮೊದಲ ಮದುವೆ ಮುರಿದು ಬೀಳಲು ಕಾರಣ ಏನು? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ…

ಅನುಪ್ರಭಾಕರ್ ಅವರ ಮೊದಲ ಮದುವೆ ಮುರಿದು ಬೀಳಲು ಕಾರಣ ಏನು? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ…

WhatsApp Group Join Now
Telegram Group Join Now

ಅನುಪ್ರಭಾಕರ್ ಕನ್ನಡದ ಚಂದುಳ್ಳಿ ಚೆಲುವೆ, ಅಪ್ಪಟ ಕನ್ನಡತಿಯಾದ ಈಕೆ ಹಳ್ಳಿ ಸೊಗಡಿನ ಸಾಂಸಾರಿಕ ಚಿತ್ರಗಳಿಗೂ, ಲವ್ ಸ್ಟೋರಿ ಗೂ ಹೇಳಿ ಮಾಡಿಸಿದಂತಹ ನಟಿ ಅಪ್ರತಿಮ ಸುಂದರಿ, ಅಪ್ಸರೆಯಂತಹ ಕಂಗೊಳಿಸುತ್ತಿದ್ದ ಅಷ್ಟೇ ಮಟ್ಟದ ಟ್ಯಾಲೆಂಟ್ ಕೂಡ ಹೊಂದಿರುವ ನಟಿ. ಅನುಪ್ರಭಾಕರ್ ಅವರು ಇಂದಿಗೂ ಸಹ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ ಆದರೆ ಅನುಪ್ರಭಾಕರ್ ವಿಷಯ ಬಂದಾಗ ಇತ್ತೀಚಿಗೆ ಅವರ ಎಲ್ಲಾ ವಿಷಯಗಳಿಗಿಂತ ಹೆಚ್ಚಾಗಿ ಅವರ ಮೊದಲ ಮದುವೆ ವಿಷಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.

ಯಾಕೆಂದರೆ ಪ್ರಭಾಕರ್ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಖ್ಯಾತ ಹಿರಿಯ ನಟಿ ಆದ ಅಭಿನಯ ಶಾರದೆ ಜಯಂತಿ ಅವರ ಪುತ್ರನ ಕೈಹಿಡಿದು ಅವರ ಮನೆಗೆ ಸೊಸೆಯಾಗಿ ಹೋಗಿದ್ದರು. ನಂತರ ಆ ಮದುವೆ ಮುರಿದು ಬಿದ್ದಿತ್ತು, ಇಷ್ಟು ದಿನ ಸುಮ್ಮನಿದ್ದ ನಟಿ ಈಗ ಮೊದಲ ಮದುವೆ ಬಗ್ಗೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರಲೋಕ ಎನ್ನುವ ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿದ ನಟಿ ಧೈರ್ಯವಾಗಿ ತನ್ನ ಜೀವನದ ಕಥೆಯನ್ನು ಹೇಳಿದ್ದಾರೆ. ನಾನು ಜಯಂತಿ ಅಮ್ಮ ಅವರ ಸೊಸೆಯಾಗಿ ಹೋಗಿ ಬಹಳ ವಿಷಯಗಳನ್ನು ಅವರಿಂದ ಕಲಿತೆ. ಒಂದು ಹೆಣ್ಣಾಗಿ ಮಾತ್ರವಲ್ಲದೆ ಒಬ್ಬ ನಟಿಯಾಗಿ ಹೇಗಿರಬೇಕು ಎನ್ನುವುದನ್ನು ನಾನು ಅವರಿಂದ ಕಲಿತೆ. ಅವರ ಜೊತೆ ನನಗೆ ಒಂದು ಉತ್ತಮ ಸಂಬಂಧ ಇತ್ತು. ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು.

See also  ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೇಂಜ್..ಈ ವಿಡಿಯೋ ಪೂರ್ತಿ ನೋಡಿ

ಆದರೆ ಗಂಡ ಹೆಂಡತಿ ಎನ್ನುವ ಸಂಬಂಧ ಬಂದಾಗ ಸ್ವಲ್ಪ ಏರುಪೇರು ಆಗಿ ನಾವು ಅನಿವಾರ್ಯ ಕಾರಣಗಳಿಂದ ದೂರ ಆಗಬೇಕಾಯಿತು. ಯಾಕೆಂದರೆ 10 ರಿಂದ 12 ವರ್ಷಗಳ ಕಾಲ ನಾನು ಅವರ ಜೊತೆಗೆ ಇದ್ದೆ ಆದರೆ ನಂತರ ಇಂತಹದೊಂದು ದಿನ ಬರುತ್ತದೆ ಎಂದು ನಾವು ಬಯಸಿರಲಿಲ್ಲ. ಜೀವನ ಎಂದರೆ ಹೀಗೆ ಅಂದುಕೊಂಡದ್ದಕ್ಕಿಂತ ಅನಿರೀಕ್ಷಿತವಾದುದ್ದೇ ಹೆಚ್ಚಾಗಿ ಆಗುವುದು. ಹಾಗೆ ನನ್ನ ಜೀವನದಲ್ಲೂ ಅಂತಹ ಕಹಿ ಘಟನೆ ಬಂತು.

ನಾವಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎನ್ನುವ ಸಂದರ್ಭ ಬಂದಾಗ ಈ ಕಹಿ ಡಿಸಿಶನ್ ಅನ್ನು ನಾವು ತೆಗೆದುಕೊಳ್ಳಲೇ ಬೇಕಾಯಿತು. ಒಂದು ದಿನ ನಾನು ನನ್ನ ಅಮ್ಮನ ಮನೆಗೆ ವಾಪಸ್ ಬರಬೇಕಾಯಿತು. ಆ ಸಮಯಕ್ಕೆ ನನ್ನ ತಂದೆ ಇರಲಿಲ್ಲ ಆದರೂ ನನ್ನ ಕುಟುಂಬದ ಎಲ್ಲರೂ ನನ್ನನ್ನು ಸಪೋರ್ಟ್ ಮಾಡಿ ಕುಗ್ಗಿಹೋಗಿದ್ದ ನನ್ನನ್ನು ಚೇತರಿಸಿಕೊಳ್ಳುವ ರೀತಿ ಮಾಡಿದರು.

[irp]


crossorigin="anonymous">