ಇಂದಿಗೂ ಗುಹೆಯಲ್ಲಿ ಓಡಾಡುತ್ತಿರುವ ಆಂಜನೇಯ ಸ್ವಾಮಿ ಭಕ್ತರ ಕಣ್ಣಿಗೆ ಕಂಡ ಜೀವಂತ ಹನುಮಂತ ದೇವರು... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಇಂದಿಗೂ ಗುಹೆಯಲ್ಲಿ ಓಡಾಡುತ್ತಿರುವ ಆಂಜನೇಯ ಸ್ವಾಮಿ ಭಕ್ತರ ಕಣ್ಣಿಗೆ ಕಂಡ ಜೀವಂತ ಹನುಮಂತ ದೇವರು…..

ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಯಾವುದೇ ಆಂಜನೇಯ ಸ್ವಾಮಿಯ ವಿಗ್ರಹವಾಗಲಿ ಅಥವಾ ಶಿಲೆಯ ಬಗ್ಗೆ ಅಲ್ಲ. ಜೀವಂತವಾಗಿ ಮನುಷ್ಯರಂತೆ ಓಡಾಡುತ್ತಿರುವ ಉಸಿರಾಡುತ್ತಿರುವಂತಹ ಆಂಜನೇಯ ಸ್ವಾಮಿ. ಈ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿಯಂತೆ ರಾಮದೇವರ ನಗರವಾದಂತಹ ಅಯೋಧ್ಯೆಯಿಂದ ನಡೆದುಕೊಂಡು ಈ ಗುಹೆಯ ಮುಖಾಂತರ ಹೋಗುತ್ತಾರೆ.

ಸಾಕಷ್ಟು ಬಾರಿ ಆಂಜನೇಯ ಸ್ವಾಮಿಯು ಈ ಗುಹೆಯೊಳಗೆ ತಪಸ್ಸು ಮಾಡುವುದನ್ನು ಸಾಕಷ್ಟು ಜನ ಸಾಮಾನ್ಯರು ನೋಡಿದ್ದಾರೆ. ಹೌದು ಇದೊಂದು ಕಟ್ಟು ಕಥೆ ಅಲ್ಲ ಬದಲಿಗೆ ನೂರಕ್ಕೆ ನೂರು ಸತ್ಯವಾದ ವಿಚಾರ. ಆಂಜನೇಯ ಸ್ವಾಮಿಯು ಚಿರಂಜೀವಿ ಆಗಿರುವುದರಿಂದ ಎಂದಿಗೂ ಸಾವಿಲ್ಲ, ದೇವರುಗಳಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರು ವಂತಹ ದೇವರು ಯಾರು ಎಂದರೆ ಅದು ಆಂಜನೇಯ ಸ್ವಾಮಿ.

ಹಾಗಾದರೆ ಆಂಜನೇಯ ಸ್ವಾಮಿ ನಿಜವಾಗಿ ಕಂಡುಬಂದಂತಹ ಗುಹೆ ಯಾವುದು? ಹಾಗೆ ಆಂಜನೇಯ ಸ್ವಾಮಿಯನ್ನು ನೋಡಿದವರು ಯಾರು? ಹೀಗೆ ಈ ಆಂಜನೇಯ ಸ್ವಾಮಿಯ ಪವಾಡದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರಪಂಚದಲ್ಲಿ ಅತಿ ಹೆಚ್ಚು ಆರಾಧಿಸಲ್ಪಡುವಂತಹ ದೇವರು ಯಾರು ಎಂದರೆ ಅದು ಆಂಜನೇಯ ಸ್ವಾಮಿ. ಈ ಆಂಜನೇಯ ಸ್ವಾಮಿ ಈಗಲೂ ಜೀವಂತ ವಾಗಿ ಜೀವಿಸುತ್ತಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಬಹುದು.

ಇವುಗಳಲ್ಲಿ ಈ ಒಂದು ಸಾಕ್ಷಿಯು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. 1998ರಲ್ಲಿ ಹತ್ತು ಜನರ ಪ್ರವಾಸಿಗರ ತಂಡ ಟಿಬೆಟ್, ಇಂಡಿಯಾ ಹಾಗೂ ಚೈನಾ ಮೂರಕ್ಕೂ ಸೇರಿದ ಮಾನಸ ಸರೋವರ ಪರ್ವತ ಶ್ರೇಣಿಗೆ ಟ್ರಕಿಂಗ್ ಹೋಗುವುದಕ್ಕೆ ಶುರು ಮಾಡುತ್ತಾರೆ. ಈ ಮಾನಸ ಸರೋವರ ಬೆಟ್ಟದಲ್ಲಿ ಸುಮಾರು 500ಕ್ಕೂ ಹೆಚ್ಚು ಗುಹೆಗಳು ಇದೆ.

ಈ ಗುಹೆಯೊಳಗೆ ಪ್ರಯಾಣ ಬೆಳೆಸಿದಂತಹ ಪ್ರವಾಸಿಗರು ಸುಮಾರು ಒಂದು ಕಿಲೋಮೀಟರ್ ಒಳಗೆ ಹೋಗುತ್ತಾರೆ. ಈ ಹತ್ತು ಜನ ಪ್ರವಾಸಿ ಗರಲ್ಲಿ ಕೊನೆಯಲ್ಲಿ ಇದ್ದಂತಹ ಪ್ರವಾಸಿಗನ ಹೆಸರು ಧೀರೇಂದ್ರ ಸಿಂಗ್. ಈತನಿಗೆ ಗುಹೆಯೊಳಗೆ ಏನೋ ಒಂದು ಬೆಳಕು ಕಾಣಿಸುತ್ತದೆ. ಈ ಬೆಳಗಿನ ಚಿತ್ರವನ್ನು ತನ್ನ ಕ್ಯಾಮರದಲ್ಲಿ ಸೆರೆ ಹಿಡಿಯುತ್ತಾನೆ. 1998ರಲ್ಲಿ ಡಿಜಿಟಲ್ ಕ್ಯಾಮೆರಾ ಇರಲಿಲ್ಲ.

ಬದಲಿಗೆ ಅಂದಿನ ಸಮಯದಲ್ಲಿ ಇದ್ದದ್ದು ಕೇವಲ ರೀಲ್ ಕ್ಯಾಮೆರಾ ಗಳು. ಒಂದು ರೀಲ್ ನಲ್ಲಿ 36 ಚಿತ್ರಗಳನ್ನು ಸೇರೆಹಿಡಿಯಬಹುದಾಗಿತ್ತು ಅಷ್ಟೇ. ಧೀರೇಂದ್ರ ಸಿಂಗ್ ತನ್ನ ಪ್ರವಾಸವನ್ನು ಮುಗಿಸಿಕೊಂಡು ಮಹಾ ರಾಷ್ಟ್ರದ ಅಂಧೇರಿ ನಗರದ ತನ್ನ ನಿವಾಸಕ್ಕೆ ಹಿಂದಿರುಗುತ್ತಾನೆ. ಪ್ರವಾಸ ಮುಗಿಸಿ ಬಂದು ಒಂದು ವಾರವಾದರೂ ತಾನು ಸೆರೆಹಿಡಿದಂತಹ ಚಿತ್ರಣಗಳನ್ನು ಪ್ರಿಂಟ್ ಹಾಕಿಸಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *