ಕಾರ್ಮಿಕ ಕಾರ್ಡ್ ಮಾಡಿಸೋದು ಹೇಗೆ ಮಾಡಿಸಿದರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತೆ ನೋಡಿ.. - Karnataka's Best News Portal

ಕಾರ್ಮಿಕ ಕಾರ್ಡ್ ಮಾಡಿಸೋದು ಹೇಗೆ ಮಾಡಿಸಿದರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತೆ ನೋಡಿ..

ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ…..||

ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ? ಹಾಗೂ ಇದನ್ನು ಮಾಡಿಸಿಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಜೊತೆಗೆ ಇದನ್ನು ಮಾಡಿಸಿಕೊಳ್ಳುವುದರಿಂದ ನಮಗೆ ಸರ್ಕಾರದಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳು ಅಂದರೆ ಸೌಲಭ್ಯಗಳು ಸಿಗುತ್ತದೆ. ಅದಕ್ಕೂ ಮೊದಲು ಈ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಲು ಯಾರೆಲ್ಲ ಅರ್ಹರು ಎಂದು ನೋಡುವುದಾದರೆ.

ಯಾವುದೇ ಒಬ್ಬ ವ್ಯಕ್ತಿ ಕಟ್ಟಡ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಅಂದರೆ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಮಿಕರು ಅವರಿಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ ಸೌಲಭ್ಯಗಳು ದೊರೆಯುವುದಿಲ್ಲ. ಆದರೆ ಅಂತಹ ಸ್ಥಳಗಳಲ್ಲಿ ಕೆಲಸ ಮಾಡುವಂಥವರು ಸರ್ಕಾರದಿಂದ ಈ ಒಂದು ಕಾರ್ಡ್ ಅಂದರೆ ಕಾರ್ಮಿಕ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದರಿಂದ ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಉಂಟಾದರೆ.

ಉದಾಹರಣೆಗೆ ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ಏನಾದರೂ ಅಪಾಯ ಉಂಟಾದರೆ ಅವರಿಗೆ ಇಂತಿಷ್ಟು ಹಣವಂತೆ ಸರ್ಕಾರದಿಂದ ಅವರ ಕುಟುಂಬಕ್ಕೆ ಧನ ಸಹಾಯ ಬರುತ್ತದೆ. ಜೊತೆಗೆ ಅವರಿಗೆ ಪ್ರತಿ ತಿಂಗಳು ಇಷ್ಟು ಹಣ ಕೂಡ ಬರುತ್ತದೆ ಅದೇ ರೀತಿಯಾಗಿ ಈ ಕಾರ್ಡ್ ಮಾಡಿಸಿಕೊಳ್ಳುವುದರಿಂದ ಅವರ ಮನೆಯವರಿಗೆ ಅಂದರೆ ಕುಟುಂಬ ದವರಿಗೆ ಯಾವುದೆಲ್ಲ ರೀತಿಯ ಸೌಲಭ್ಯಗಳು ಸಿಗುತ್ತದೆ ಎಂದು ನೋಡುವುದಾದರೆ.

ಮೊದಲನೆಯದಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಯ ಮಕ್ಕಳಿಗೆ ವರ್ಷಕ್ಕೆ ಇಂತಿಷ್ಟು ಹಣ ಎಂಬಂತೆ ಸ್ಕಾಲರ್ ಶಿಪ್ ಬರುತ್ತದೆ. ಹಾಗೆಯೇ ಅವರ ಮಕ್ಕಳಿಗೆ ಮದುವೆ ಮಾಡಬೇಕು ಎಂದುಕೊಂಡಿದ್ದರೆ ಆ ಮದುವೆ ಖರ್ಚಿಗಾಗಿ 1 ಲಕ್ಷ ವರೆಗೆ ಹಣ ಸಿಗುತ್ತದೆ. ಅದೇ ರೀತಿಯಾಗಿ ಆ ಕಾರ್ಮಿಕನಿಗೆ 60 ವರ್ಷ ದಾಟಿದ ನಂತರ ಪಿಂಚಣಿ ಹಣವನ್ನು ಕೂಡ ಪಡೆಯಬಹುದು. ಹಾಗೇನಾದರೂ ಅಪಘಾತ ಉಂಟಾದರೆ ಅವರಿಗೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಎರಡು ಲಕ್ಷದವರೆಗೆ ಪರಿಹಾರ ಧನವನ್ನು ಕೂಡ ಪಡೆಯಬಹುದು. ಕಾರ್ಮಿಕ ಕಾರ್ಡ್ ಹೊಂದಿರುವಂತಹ ಕುಟುಂಬದ ಹೆಣ್ಣು ಮಗಳ ಹೆರಿಗೆಯ ಸಂದರ್ಭದಲ್ಲಿ ಗಂಡು ಮಗು ಜನನ ಆದರೆ 20,000 ಹಾಗೆಯೇ ಹೆಣ್ಣು ಮಗು ಜನನ ಆದರೆ 30,000 ವರೆಗೂ ಹಣದ ಸಹಾಯ ಪಡೆಯಬಹುದು. ಹಾಗಾದರೆ ಕಾರ್ಮಿಕ ಕಾರ್ಡ್ ಮಾಡಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

ಆ ವ್ಯಕ್ತಿಯ ವಯಸ್ಸು ಮತ್ತು ಸ್ಥಳದ ಆಧಾರವಾಗಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಬೇಕಾಗುತ್ತದೆ, ಮೂರು ಪಾಸ್ಪೋರ್ಟ್ ಸೈಜ್ ಅಳತೆಯ ಫೋಟೋಗಳು ಬೇಕಾಗುತ್ತದೆ, ನಿಮ್ಮ ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಇಷ್ಟು ದಾಖಲಾತಿಗಳನ್ನು ನೀವು ಕಾರ್ಮಿಕ ಕಾರ್ಡ್ ಅಪ್ಲಿಕೇಶನ್ ಫಾರಂ ವಿ ನಲ್ಲಿ ಭರ್ತಿ ಮಾಡಿ. ಅರ್ಜಿಯನ್ನು ಕಟ್ಟಡ ಕಾರ್ಮಿಕ ಇಲಾಖೆಗೆ ಸಲ್ಲಿಸುವಂಥದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]