ಇವರನ್ನು ಕಂಡರೆ ಸರಕಾರಗಳೇ ಗಡಗಡ…..! ನಾವು ಈ ದೇಶವನ್ನು ಒಡೆಯದೆ ಬಿಡಲ್ಲ ಎನ್ನುವ ಈ ಖಾಲಿಸ್ತಾನಿ ಯಾರು?
ಸದ್ಯ ದೇಶದ ಬೆಳವಣಿಗೆ ಹಾಗೂ ವಿದ್ಯಾಮಾನಗಳ ಅನುಸಾರ ಈ ಮಾಹಿತಿಯನ್ನು ನಾವಿಲ್ಲಿ ಚರ್ಚಿಸುವುದು ಬಹಳ ಅತ್ಯಗತ್ಯ, ಇದು ಎಲ್ಲರಿಗೂ ತಿಳಿಯಬೇಕಾದ ವಿಷಯ ಕೂಡ ಹೌದು, ಪಂಜಾಬ್ ನಲ್ಲಿ ನಡೆಯುತ್ತಿರುವ ಕಳೆದ ಕೆಲ ತಿಂಗಳುಗಳ ಬೆಳವಣಿಗೆಗಳು ಅದರ ಈ ಹಿಂದಿನ ಕರಾಳ ಚರಿತ್ರೆಯನ್ನು ಮತ್ತೆ ನೆನಪಿಗೆ ತರುತ್ತಿದೆ.
ಈ ವ್ಯಕ್ತಿಯನ್ನು ನೋಡಿ ಇವನ ಹೆಸರು ಅಮೃತ್ ಪಾಲ್ ಸಿಂಗ್ ಎಂದು ಕೆಲವೇ ತಿಂಗಳುಗಳ ಹಿಂದೆ ಈತ ಯಾರೆಂಬುದೇ ಯಾರಿಗೂ ಗೊತ್ತಿರಲಿಲ್ಲ. ಆದರೆ ಈತ ಈಗ ಪಂಜಾಬ್ ನಲ್ಲಿ ಉದಯೋನ್ಮುಖ ಜನನಾಯಕನಾಗಿ ಕಲಿಸ್ತಾನಿ ಚಳುವಳಿಯ ಮುಖ್ಯ ನೇತಾರನಾಗಿ ಬೆಳಕಿಗೆ ಬರುತ್ತಿದ್ದಾನೆ. ಈತನನ್ನು ಅಲ್ಲಿಯ ಎರಡನೇ ಬಿಂಧನ್ ವಾಲೆ ಎಂದು ಜನ ಕರೆಯುತ್ತಿದ್ದಾರೆ.
ವಾರೀಸ್ ಪಂಜಾಬ್ ಎಂಬ ಈತನದ್ದೆ ಒಂದು ಸಂಘ ಇದೀಗ ಅಲ್ಲಿ ಸೃಷ್ಟಿಯಾಗಿದೆ. ಅದರ ಮಾಜಿ ನಾಯಕ ವಿಧಿವಶವಾದ ಮೇಲೆ ಈ ಸಂಘದ ನೇತೃತ್ವ ಈತನಿಗೆ ಸಿಕ್ಕಿದೆ. ಇತ್ತೀಚೆಗೆ ಒಂದು ಕಿಡ್ನಾಪಿಂಗ್ ಕೇಸ್ ನಲ್ಲಿ ಈತನ ಜೊತೆಗಾರನನ್ನು ಬಂಧಿಸಿದ್ದಕ್ಕಾಗಿ ಈತನ ಅನುಯಾಯಿ ಗಳಿಂದ ಉಗ್ರ ಹೋರಾಟವೇ ನಡೆದಿತ್ತು. ಇವರೆಲ್ಲ ತಲ್ವಾರ್ ಹಾಗೂ ಇತರೆ ಆಯುಧಗಳನ್ನು ಹಿಡಿದು.
ಪೊಲೀಸ್ ಠಾಣೆಗೆ ನುಗ್ಗಿ ರಂಪಾಟ ನಡೆಸಿದ್ದರು. ಬಂದಿಸಿದವನನ್ನು ರಿಲೀಸ್ ಮಾಡದೆ ಹೋದರೆ ರಕ್ತಪಾತ ನಡೆಸುವುದಾಗಿ ಬೆದರಿಕೆಯನ್ನು ನೀಡಿದ್ದರು. ಆ ಜನರನ್ನು ನಿಯಂತ್ರಿಸಲು ಪೊಲೀಸರೇ ಹೆಣಗಾಡಬೇಕಾ ಯಿತು. ಅವರು ಅಮೃತ್ ಪಾಲ್ ಸಿಂಗ್ ನ ಜೊತೆ ನೆಗೋಷಿಯೇಶನ್ ಗೂ ಸಹ ಇಳಿದು ಜನರನ್ನು ಕಂಟ್ರೋಲ್ ಮಾಡಲು ಸಹ ಅವನ ಸಹಾಯ ಪಡೆದುಕೊಂಡರು. ಇದೆಲ್ಲ ಆದಮೇಲೆ ನಮ್ಮ ಚಳುವಳಿಗೆ ಸಹಕರಿಸದ.
ಹಾಗೂ ನಮ್ಮ ಬೇಡಿಕೆಗಳಿಗೆ ನಿರ್ಲಕ್ಷ ತೋರುವಂತಹ ಸರ್ಕಾರದ ಪ್ರಮುಖ ನೇತಾರರಿಗೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಯವರಿಗೆ ತಂದಂತಹ ಪರಿಸ್ಥಿತಿಯನ್ನೇ ಮರುತರಲಿದ್ದೇವೆ ಎಂದು ಸಹ ಅಮೃತ್ ಪಾಲ್ ಸಿಂಗ್ ಬಹಿರಂಗವಾಗಿಯೇ ಹೇಳಿಕೆ ಕೊಟ್ಟ. ಇದು ಉಗ್ರವಾದಂತಹ ಸೂಚನೆ ಹಾಗೂ ದೇಶದ ಆಂತರಿಕ ಭದ್ರತೆಯು ಅಪಾಯದಲ್ಲಿದೆ ಎಂಬುವುದರ ಮುನ್ಸೂಚನೆಯಾಗಿತ್ತು. ಅಸಲಿಗೆ ಈ ಖಲಿಸ್ತಾನ ಚಳುವಳಿ ಎಂದರೆ ಏನು.
ಇದು ಹೇಗೆ? ಯಾಕೆ? ಯಾವಾಗಿನಿಂದ ಶುರುವಾಯಿತು ಎಂದು ಇಲ್ಲಿಯವರಿಗೆ ಗೊತ್ತೇ ಇಲ್ಲ. ಅನೇಕರು ಇದು 1984 ರಿಂದೀಚೆಗೆ ಶುರುವಾದoತಹ ಹೋರಾಟ ಎಂದೇ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ ಅಸಲಿಗೆ ಇದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಹೊಡೆದು ಆಳುವ ನೀತಿಯಿಂದ ಹುಟ್ಟಿದ ಅನೇಕ ಕಳೆಗಳಲ್ಲಿ ಇದು ಸಹ ಒಂದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.