27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ……….??

ಸಿನಿಮಾ ಕ್ಷೇತ್ರದಲ್ಲಿ ನಾಯಕರಾಗಿ ಪಾದಾರ್ಪಣೆ ಮಾಡಿದಂತಹ ಎಲ್ಲರೂ ಕೂಡ ಯಶಸ್ವಿಯಾಗುವುದಿಲ್ಲ. ಅನೇಕರು ಈ ಪ್ರಯತ್ನವನ್ನು ನಡೆಸಿ ನಂತರ ಹೆಸರೇ ಇಲ್ಲದಂತೆ ಚಿತ್ರರಂಗದಿಂದ ಮರೆಯಾದಂತಹ ಉದಾಹರಣೆಗಳು ನಮ್ಮಲ್ಲಿಯೇ ಸಿಗುತ್ತದೆ. ಅಂಥವರ ಪೈಕಿ ನಟ ಹಾಗೂ ನಿರ್ಮಾಪಕ ಗಿರಿದ್ವಾರಕೀಶ್ ಅವರು ಕೂಡ ಒಬ್ಬರು.

ಗಿರಿದ್ವಾರಕೀಶ್ ಎಂದ ತಕ್ಷಣ ಇವರ ನಟನೆಯ ಮಜುನು ಚಿತ್ರ ಹಲವರಿಗೆ ನೆನಪಿಗೆ ಬರುತ್ತದೆ. ಹೌದು ಕನ್ನಡದ ಮಜುನು, ಹೃದಯ ಕಳ್ಳರು, ಹೀಗೆ ಮುಂತಾದ ಚಿತ್ರಗಳಲ್ಲಿ ಕಳೆದ ಎರಡು ದಶಕಗಳ ಹಿಂದೆಯೇ ನಾಯಕರಾಗಿ ನಟಿಸಿದ್ದರು. ಕನ್ನಡದ ಹಿರಿಯ ನಟ ಸುಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ ಆದಂತಹ ದ್ವಾರಕೀಶ್ ಅವರ ಐವರು ಮಕ್ಕಳ ಪೈಕಿ ಈ ಗಿರಿ ದ್ವಾರಕೀಶ್ ಅವರು ಕೂಡ ಒಬ್ಬರು.

ಇವರ ಐವರು ಮಕ್ಕಳಲ್ಲಿ ಗಿರಿ ಹಾಗೂ ಅಭಿಲಾಶ್ ದ್ವಾರಕೀಶ್ ಇವರಿಬ್ಬರು ಮಾತ್ರ ಚಿತ್ರ ಜಗತ್ತಿಗೆ ಕಾಲಿಟ್ಟಂತವರು. ಗಿರಿದ್ವಾರಕೀಶ್ ಅವರು ಈಗ ಕನ್ನಡದ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ಕಿರುತೆರೆ ಹಾಗೂ ಹಿರಿತೆರೆಯಲ್ಲಿಯೂ ಕೂಡ ನಟರಾಗಿ ನಿರ್ಮಾಪಕರಾಗಿ ಸಕ್ರಿಯ ರಾಗಿ ಮುಂದುವರೆಯುತ್ತಿದ್ದಾರೆ. ನಿಮಗೆಲ್ಲರಿಗೂ ಕೂಡ ಹಿರಿಯ ನಟ ದ್ವಾರಕೀಶ್ ಅವರು ಯಾರೆಂದು ಗೊತ್ತೇ ಇದೆ.

ಇಲ್ಲಿವರೆಗೂ ನೂರಾರು ಚಿತ್ರಗಳಲ್ಲಿ ನಟಿಸಿದಂತಹ ಅವರು 1964 ರಲ್ಲಿಯೇ ನಟನೆಯನ್ನು ಪ್ರಾರಂಭ ಮಾಡಿದವರು. ಹಾಗೂ 1966ರ ಹೊತ್ತಿಗೆ ಅವರು ಚಿತ್ರಗಳ ನಿರ್ಮಾಣಕ್ಕೆ ಕೂಡ ಕೈ ಹಾಕಿದರು. ಮೇಯರ್ ಮುತ್ತಣ್ಣ, ಭಾಗ್ಯವಂತರು, ಮುಂತಾದ ಯಶಸ್ವಿ 50 ಚಿತ್ರಗಳಿಗೂ ಮಿಗಿಲಾಗಿ ಅವರು ತಮ್ಮ ದ್ವಾರಕೀಶ್ ಚಿತ್ರ ಎಂಬ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿದ್ದಾರೆ.

ಇವರ ಐವರು ಮಕ್ಕಳಲ್ಲಿ ಗಿರಿ ದ್ವಾರಕೀಶ್ ಕೂಡ ಒಬ್ಬರು ಇವರು ಬೆಂಗಳೂರಿನಲ್ಲಿ ಜನಿಸಿದ್ದೆ ಆದರೂ ಇವರು ಹುಟ್ಟಿದ ಬಳಿಕ ದ್ವಾರಕೀಶ್ ಕುಟುಂಬ ಕೆಲವೊಂದು ಕಾರಣಾಂತರಗಳಿಂದ ಚೆನ್ನೈಗೆ ಶಿಫ್ಟ್ ಆಗು ತ್ತಾರೆ. ದೊಡ್ಡ ದೊಡ್ಡ ಸಂಸ್ಕರಣದ ಲ್ಯಾಬ್ ಗಳು ಹಾಗೂ ಸ್ಟುಡಿಯೋ ಗಳು ಅಲ್ಲಿಯೇ ಹೆಚ್ಚಾಗಿ ಇದ್ದವು ಹಾಗಾಗಿ ಅನೇಕ ಚಿತ್ರನಟರು ತಂತ್ರಜ್ಞರು ಆಗೆಲ್ಲಾ ಸಾಮಾನ್ಯವಾಗಿ ಚೆನ್ನೈ ನಗರದಲ್ಲಿಯೇ ವಾಸವಾಗಿರುತ್ತಿದ್ದರು.

ಹಾಗೆ ನೋಡುವುದಾದರೆ ಕನ್ನಡದ ಹೆಸರಾಂತ ನಟ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬದವರು ಕೂಡ ಕೆಲವೊಂದು ಕಾಲದವರೆಗೆ ಚೆನ್ನೈ ನಗರದಲ್ಲಿ ವಾಸವಾಗಿದ್ದರು. ದ್ವಾರಕೀಶ್ ಅವರ ಪರಿವಾರ ಚೆನ್ನೈಗೆ ಬಂದಾಗ ಗಿರಿದ್ವಾರಕೀಶ್ ಅವರಿಗೆ ಆಗಿನ್ನು 8 ವರ್ಷ ವಯಸ್ಸು. ಚೆನ್ನೈನ ಆದರ್ಶ ಸ್ಕೂಲ್ ನಲ್ಲಿ ಅವರ ಆರಂಭಿಕ ಶಿಕ್ಷಣ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *