ತಿರುಪತಿ ಗರ್ಭಗುಡಿಯಲ್ಲಿ ನಿಗೂಡ ಪುನುಗು ಬೆಕ್ಕು ಪ್ರತ್ಯಕ್ಷ..ತಿಮ್ಮಪ್ಪನ ಕ್ಷೇತ್ರದಲ್ಲಿ ಏನಾಗ್ತಿದೆ ನೋಡಿ.

ತಿರುಪತಿ ಗರ್ಭಗುಡಿಯಲ್ಲಿ ನಿಗೂಡ ಪುನುಗು ಬೆಕ್ಕು ಪ್ರತ್ಯಕ್ಷ….!!

WhatsApp Group Join Now
Telegram Group Join Now

ಸಂಕಟ ಬಂದಾಗ ವೆಂಕಟರಮಣ ಪಾದಕ್ಕೇರುವುದು ದೇವರ ಮೇಲೆ ನಂಬಿಕೆ ಇಟ್ಟಿರುವವರು ಪಾಲಿಸಿಕೊಂಡು ಬಂದಿರುವಂತಹ ಪಾಲಿಸಿಯಾಗಿದೆ. ಸಂಕಟ ಬರದಿದ್ದರೂ ಆಗಾಗ ತಿರುಪತಿಯಿಂದ ಬೆಟ್ಟ ಹತ್ತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀನಿವಾಸನ ದರ್ಶನವನ್ನು ಪಡೆದು ಬರುವವರ ಸಂಖ್ಯೆಯನ್ನು ಎಣಿಸಲು ಕೂಡ ಸಾಧ್ಯವಾಗುವುದಿಲ್ಲ. ಪರೀಕ್ಷೆಗಳಲ್ಲಿ ಪಾಸ್ ಆಗಲಿ ಎಂದು, ಒಳ್ಳೆಯ ಹುಡುಗಿ ಸಿಗಲೆಂದು,

ಒಳ್ಳೆಯ ಹುಡುಗಿ ಸಿಗಲೆಂದು, ಒಳ್ಳೆಯ ಕೆಲಸ ಸಿಗಲಿ ಎಂದು, ಮಗಳಿಗೆ ಉತ್ತಮ ಗಂಡ ಸಿಗಲೆಂದು, ಈ ರೀತಿಯ ಹರಕೆಗಳನ್ನು ತೀರಿಸಿಕೊಳ್ಳ ಲೆಂದು, ರಜೆ ದಿನಗಳಲ್ಲಿ ದೇವರ ದರ್ಶನವನ್ನು ಪಡೆಯಲೆಂದು ಹೀಗೆ ನಾನಾ ಕಾರಣಗಳನ್ನು ಇಟ್ಟುಕೊಂಡು, ಅಥವಾ ಸಮಯ ಸಿಕ್ಕಾಗಲೆಲ್ಲ ತಿರುಪತಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವಂತಹ ಹಲವಾರು ಜನರನ್ನು ನಾವು ನೋಡಬಹುದು.

ವೆಂಕಟೇಶ್ವರನ ಅದ್ಭುತ ವಿಗ್ರಹಗಳನ್ನು ನೋಡುತ್ತಲೆ ಪ್ರತಿಯೊಬ್ಬರ ಭಕ್ತರ ಕಣ್ಣಲ್ಲಿಯೂ ಕೂಡ ಏನೋ ಒಂದು ರೀತಿಯ ಆನಂದ. ಸಾಕ್ಷಾತ್ ಭಗವಂತ ನಮ್ಮ ಕಣ್ಣ ಮುಂದೆ ಬಂದು ನಿಂತಿದ್ದಾರೆ ನಮ್ಮ ಜನ್ಮ ಸಾರ್ಥಕ ಎನ್ನುವ ಭಾವನೆ ಉಂಟಾಗುತ್ತದೆ. ಇಷ್ಟೆಲ್ಲಾ ಮಹತ್ವವನ್ನು ಒಳಗೊಂಡಿ ರುವಂತಹ ವೆಂಕಟೇಶ್ವರನ ವಿಗ್ರಹವನ್ನು ಸ್ವಲ್ಪ ಸಮಯದಲ್ಲಿಯೇ ನೋಡುವುದಾದರೂ ವೆಂಕಟೇಶ್ವರನ ದರ್ಶನವನ್ನು ಪಡೆದು ಪ್ರತಿಯೊಬ್ಬರು ಕಣ್ತುಂಬಿಕೊಳ್ಳುತ್ತಾರೆ.

ವಿಗ್ರಹ ಒಂದೇ ಆಗಿರಬಹುದು ಆದರೆ ನೋಡುವಂಥ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡ ವಿಭಿನ್ನವಾದoತಹ ಬೇಡಿಕೆಗಳು ಇರುತ್ತದೆ. ಅವರವರ ಮನಸ್ಸಿನಲ್ಲಿ ವೆಂಕಟೇಶ್ವರನನ್ನು ಆರಾಧನೆ ಮಾಡುತ್ತಿರು ತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ನಡೆಯುತ್ತಿರುವಂತಹ ಅದ್ಭುತ ಪವಾಡಗಳು ಏನು? ಹಾಗೆಯೇ ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರು ವಂತಹ ವಿಚಿತ್ರವಾದಂತಹ ಪುನುಗು ಬೆಕ್ಕು ಯಾವುದು? ಇದರ ಹಿಂದೆ ಇರುವಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಇಂದು ತಿರುಪತಿ ದೇವಾಲಯ ಒಂದು ಕ್ಷಣವು ಮುಚ್ಚದೆ ಇದ್ದರೂ 1801 ರಲ್ಲಿ 12 ವರ್ಷಗಳ ಅವಧಿಗಾಗಿ ಮುಚ್ಚಿದ್ದು ದೇವಸ್ಥಾನದ ಇತಿಹಾಸಗಳಲ್ಲಿ ದಾಖಲಾಗಿದೆ. ಈ ಸಮಯದಲ್ಲಿ ತಿರುಪತಿಯನ್ನು ಆಳುತ್ತಿದ್ದಂತಹ ರಾಜನು ರಾಜ ದ್ರೋಹದ ಆರೋಪದ ಮೇಲೆ ವರ್ಷಕ್ಕೆ ಒಬ್ಬರಂತೆ 12 ಜನರಿಗೆ ಸಾವಿನ ಶಿಕ್ಷೆಯನ್ನು ವಿಧಿಸಿದ್ದ. ನೇಣು ಹಾಕಿದಂತಹ ಇವರ ಶವಗಳನ್ನು ದೇವಾಲಯದ ಗೋಡೆಗೆ ತೂಗು ಹಾಕಿದ್ದ ಎನ್ನುವುದು ಇತಿಹಾಸದಲ್ಲಿ ತಿಳಿಸಲಾಗಿದೆ.

ಇದೇ ಸಮಯದಲ್ಲಿ ಗರ್ಭಗುಡಿಯ ಮೇಲಿರುವ ಗೋಪುರದಲ್ಲಿ ಗರ್ಭಗುಡಿಯಲ್ಲಿರುವಂತೆಯೇ ಆದರೆ ಗಾತ್ರದಲ್ಲಿ ಚಿಕ್ಕದಾದ ವಿಮಾನ ವೆಂಕಟೇಶ್ವರ ಸ್ವಾಮಿಯ ವಿಗ್ರಹ ಗೋಚರವಾಗುತ್ತಿತ್ತು. ಶ್ರೀನಿವಾಸನ ಸಂಪೂರ್ಣ ವಿಗ್ರಹ ಸ್ವಯಂ ಉದ್ಭವ ಮೂರ್ತಿಯಾಗಿದೆ. ಇದನ್ನು ಯಾರೂ ಕೂಡ ಸ್ಥಾಪನೆ ಮಾಡಿಲ್ಲ. ಇದು ಸ್ವಯಂ ಉದ್ಭವ ಮೂರ್ತಿಯಾಗಿದ್ದರೂ ಅದರ ಪ್ರತಿಯೊಂದು ಅಂಗಾಂಗಗಳ ಭಾಗ ಪ್ರಮಾಣ ಬದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]