ಮನುಷ್ಯನ ರೀತಿ ಚರ್ಮ ಇರುವ ಪ್ರಪಂಚದ ಏಕೈಕ ಶಿವಲಿಂಗ 15 ಅಡಿ ಉದ್ದ 5000 ವರ್ಷಗಳ ಪುರಾತನ ಲಿಂಗ.. » Karnataka's Best News Portal

ಮನುಷ್ಯನ ರೀತಿ ಚರ್ಮ ಇರುವ ಪ್ರಪಂಚದ ಏಕೈಕ ಶಿವಲಿಂಗ 15 ಅಡಿ ಉದ್ದ 5000 ವರ್ಷಗಳ ಪುರಾತನ ಲಿಂಗ..

ಮನುಷ್ಯನ ರೀತಿ ಚರ್ಮ ಇರುವ ಪ್ರಪಂಚದ ಏಕೈಕ ಶಿವಲಿಂಗ 15 ಅಡಿ ಉದ್ದ 5000 ವರ್ಷಗಳ ಪುರಾತನ ಲಿಂಗ…..

WhatsApp Group Join Now
Telegram Group Join Now

ಈ ಶಿವಲಿಂಗವನ್ನು ನೋಡುತ್ತಿದ್ದರೆ ಎಂತವರಿಗಾದರೂ ಭಕ್ತಿ ಉಕ್ಕಿಬರುತ್ತದೆ. ಈ ರೀತಿಯ ಶಿವಲಿಂಗವನ್ನು ನೀವು ಎಲ್ಲೂ ನೋಡಲು ಸಾಧ್ಯವೇ ಇಲ್ಲ. ಬರೋಬ್ಬರಿ 15 ಅಡಿ ಎತ್ತರವಿರುವ ಶಿವಲಿಂಗವನ್ನು ಜಗತ್ತಿನ ತೆಳುವಾದ ಉದ್ದವಾದ ಶಿವಲಿಂಗ ಎಂದು ಪರಿಗಣಿಸಲಾಗಿದೆ.

ಈ ಶಿವಲಿಂಗಕ್ಕೆ ದಿನದ 24 ಗಂಟೆಯೂ ಸಹ ನೀರಿನ ಅಭಿಷೇಕ ನೆರವೇರುತ್ತದೆ. ಈ ಶಿವಲಿಂಗವು ಸುಮಾರು 5000 ದಿಂದ 6000 ವರ್ಷದ ಹಳೆಯದ್ದು ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ. ಈ ಶಿವಲಿಂಗದ ಮೇಲಿನ ಭಾಗದಲ್ಲಿ ರಕ್ತದ ಕಲೆಯಿದ್ದು ಈ ರಕ್ತದ ಕಲೆಯು ಭಗವಂತನ ರಕ್ತ ಎಂದೇ ಇಲ್ಲಿನ ಭಕ್ತರು ನಂಬಿದ್ದಾರೆ. ಈ ರಕ್ತದ ಕಲೆಗೆ ಬಂಗಾರದ ಕವಚವನ್ನು ಮುಚ್ಚಲಾಗಿದ್ದು.

ಐದು ವರ್ಷಕ್ಕೊಮ್ಮೆ ಭಕ್ತರಿಗೆ ಈ ಕವಚವನ್ನು ತೆಗೆದು ತೋರಿಸಲಾಗು ತ್ತದೆ. ಪೂಜೆ ಮಾಡುವಂತಹ ಅರ್ಚಕರು ಸಹ ಐದು ವರ್ಷದ ತನಕ ಈ ಕವಚವನ್ನು ಮುಟ್ಟುವುದಿಲ್ಲ. ಬದಲಿಗೆ ಪ್ರತಿ ಐದು ವರ್ಷಕೊಮ್ಮೆ ಈ ಕವಚವನ್ನು ಮುಟ್ಟಲಾಗುತ್ತದೆ. ಹಾಗಾದರೆ ಈ ಅದ್ಭುತವಾದಂತಹ ಶಿವಾಲಿಂಗ ಇರುವುದಾದರೂ ಎಲ್ಲಿ? ಹಾಗೂ ಈ ಶಿವಲಿಂಗದ ವಿಶೇಷತೆ ಏನು?

ಹೀಗೆ ಈ ಶಿವಲಿಂಗದ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ತಿಳಿಯೋಣ. ಈ ಶಿವಲಿಂಗವನ್ನು ಅಮರ ರಾಮ ಶಿವಲಿಂಗ, ಅಮರೇಶ್ವರ ಸ್ವಾಮಿ ಲಿಂಗ, ಅಮರಾವತಿ ಉದ್ದ ಲಿಂಗ, ಚರ್ಮದ ಲಿಂಗ ಹೀಗೆ ನಾನ ಹೆಸರುಗಳಿಂದ ಕರೆಯುತ್ತಾರೆ. ಹಾಗಾದರೆ ಈ ದೇವಸ್ಥಾನ ಇರುವುದಾದರೆ ಎಲ್ಲಿ? ಇದರ ಸಂಪೂರ್ಣವಾದಂತಹ ವಿಳಾಸ ನೋಡುವುದಾದರೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಕರ್ನಾಟಕದ ನೆರೆ ರಾಜ್ಯದ ಆಂಧ್ರಪ್ರದೇಶದಲ್ಲಿರುವ ಗುಂಟುರ್ ಗೆ ಹೋಗಬೇಕು ಗುಂಟುರ್ ಇಂದ 38 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮರಾವತಿ ನಗರ ತಲುಪುತ್ತೀರಾ. ಅಮರಾವತಿ ನಗರದಿಂದ 1 ಕಿಲೋಮೀಟರ್ ಮುಂದೆ ಸಾಗಿದರೆ ಕೃಷ್ಣಾ ನದಿ ಕಂಡುಬರುತ್ತದೆ ಇದೇ ಕೃಷ್ಣಾ ನದಿ ದಡದಲ್ಲಿ ನೆಲೆಸಿರುವ ಶ್ರೀ ಅಮರೇಶ್ವರ ಸ್ವಾಮಿ ವಾರಿ ದೇವಸ್ಥಾನಂ. ಅತ್ಯಂತ ಶ್ರೇಷ್ಠವಾದ ಕಲ್ಲಿನಿಂದ ಉದ್ಭವ ಗೊಂಡಂತ ಈ ಶಿವಲಿಂಗವು ಮನುಷ್ಯನ ಚರ್ಮದ ರೀತಿ ಇದೆ.

ಮನುಷ್ಯನ ಚರ್ಮವನ್ನು ಮುಟ್ಟಿದರೆ ಯಾವ ರೀತಿ ಅನುಭವ ಸಿಗುತ್ತದೆಯೋ ನಮಗೆ ಈ ಶಿವಲಿಂಗವನ್ನು ಮುಟ್ಟಿದರು ಕೂಡ ಅದೇ ಅನುಭವ ಉಂಟಾಗುತ್ತದೆ. ಹಾಗೆ ಈ ಶಿವಲಿಂಗವನ್ನು ಮುಟ್ಟಿದರೆ ಚರ್ಮದ ರೀತಿ ಒಳಗಡೆ ಸಹ ಹೋಗುತ್ತದೆ. ಈ ಶಿವಲಿಂಗ ಪ್ರತಿ ದಿನ ಎತ್ತರಕ್ಕೆ ಬೆಳೆಯುತ್ತಿದೆ ಎಂದು ಈ ಶಿವಲಿಂಗದ ಮೇಲ್ಭಾಗವನ್ನು ತೆಗೆಯುತ್ತಾರೆ ಆಗ ಇದರಿಂದ ರಕ್ತ ಚಿಮ್ಮುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">