ರಾಹುಲ್ ಗಾಂಧಿ ಮಾಡಿದ ತಪ್ಪೇನು ....ಭಾರತದಲ್ಲಿ ಈ ಶಿಕ್ಷೆ ಯಾರೆಲ್ಲಾ ಅನುಭವಿಸಿದ್ದಾರೆ ಗೊತ್ತಾ. » Karnataka's Best News Portal

ರಾಹುಲ್ ಗಾಂಧಿ ಮಾಡಿದ ತಪ್ಪೇನು ….ಭಾರತದಲ್ಲಿ ಈ ಶಿಕ್ಷೆ ಯಾರೆಲ್ಲಾ ಅನುಭವಿಸಿದ್ದಾರೆ ಗೊತ್ತಾ.

ರಾಹುಲ್ ಗಾಂಧಿ ಮಾಡಿದ ತಪ್ಪೇನು …..? ಭಾರತದಲ್ಲಿ ಈ ಶಿಕ್ಷೆ ಯಾರೆಲ್ಲಾ ಅನುಭವಿಸಿದ್ದಾರೆ ಗೊತ್ತಾ……!!

WhatsApp Group Join Now
Telegram Group Join Now

ಅದು 2019ರ ಚುನಾವಣೆ ಪ್ರಚಾರದ ಸಂದರ್ಭ ಕೋಲಾರದಲ್ಲಿ ನಡೆಯುತ್ತಿದ್ದಂತಹ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆವೇಶದಿಂದಲೇ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದ್ದರು. ಹೀಗೆ ಭಾಷಣ ನಡೆಸುತ್ತಿರು ವಾಗ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ಧ ಕಿಡಿ ಕಾರುವುದಕ್ಕೆ ಶುರು ಮಾಡುತ್ತಾರೆ.

ಕೆಲವು ಉದಾಹರಣೆಗಳನ್ನು ತೆಗೆದುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ಶುರು ಮಾಡುತ್ತಾರೆ. ನೀರವ್ ಮೋದಿ, ಲಲಿತ್ ಮೋದಿ ಯಾಂತಹ ಕಳ್ಳರು ನಮ್ಮ ದೇಶದಲ್ಲಿ ಇದ್ದಾರೆ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಇವರೆಲ್ಲರ ಸರ್ ನೇಮ್ ಒಂದೇ ಆಗಿದ್ದು ಎಲ್ಲಾ ಕಳ್ಳರು ನಮ್ಮ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿಯನ್ನು ಮಾಡಿದ್ದರು.

ಇಲ್ಲಿ ಮೋದಿ ಎನ್ನುವ ಸರ್ ನೇಮ್ ಇರುವವರು ಎಲ್ಲರೂ ಕಳ್ಳರು ಎನ್ನುವ ಹಾಗೆ ರಾಹುಲ್ ಗಾಂಧಿ ಮಾತನಾಡಿದರು ಇದೆ ಭಾಷಣ ಈಗ ರಾಹುಲ್ ಗಾಂಧಿಯವರಿಗೆ ಮುಳುವಾಗಿದೆ. ಇದೇ ಭಾಷಣದ ವಿರುದ್ಧ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಖದ್ದಮೆ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎನ್ನುವುದು ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯ

ಎರಡು ವರ್ಷಗಳ ಕಾಲ ಶಿಕ್ಷೆಯನ್ನು ಕೂಡ ಘೋಷಣೆ ಮಾಡಿದೆ. ನ್ಯಾಯಾಲಯವು ಇಂತಹ ಶಿಕ್ಷೆಯನ್ನು ಪ್ರಕಟಿಸುತ್ತಿದ್ದಂತೆ ರಾಹುಲ್ ಗಾಂಧಿಯವರನ್ನು ಸಂಸದನ ಸ್ಥಾನದಿಂದಲೂ ಸಹ ಅನರ್ಹಗೊಳಿಸ ಲಾಗಿದೆ. ಈ ವಿಷಯ ಈಗ ದೇಶದಾದ್ಯಂತ ಕಿಡಿ ಹೊತ್ತಿಸಿಬಿಟ್ಟಿದೆ. ರಾಹುಲ್ ಗಾಂಧಿಯವರ ಭವಿಷ್ಯದ ಬಗ್ಗೆ ಪ್ರಶ್ನೆ ಉದ್ಭವವಾಗುತ್ತಿದೆ. ಒಂದು ವೇಳೆ ಈ ಶಿಕ್ಷೆಗೆ ಯಾವುದೇ ತಡೆ ತರದೆ ಹೋದರೆ ರಾಹುಲ್ ಗಾಂಧಿಯವರ ರಾಜಕೀಯ ಭವಿಷ್ಯವೇ ಅತಂತ್ರವಾಗುವ ಮಾತುಗಳು ಇದೆ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಹ ಬಾಕಿ ಇಲ್ಲ. ಹಾಗಾಗಿ ಸೂರತ್ ನ್ಯಾಯಾಲಯ ವಿಧಿಸಿರುವಂತಹ ಶಿಕ್ಷೆಗೆ ತಡೆ ತರದೆ ಹೋದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಅದಷ್ಟೇ ಅಲ್ಲದೆ ಬರೋಬ್ಬರಿ 8 ವರ್ಷಗಳ ಕಾಲ ರಾಹುಲ್ ಗಾಂಧಿಯವರು ರಾಜಕೀಯದಿಂದ ದೂರ ಇರಬೇಕಾಗುತ್ತದೆ.

ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನ ಅಭ್ಯರ್ಥಿ ಎಂದು ಬಿಂಬಿಸಲಾಗು ತ್ತಿದೆ. ಆದರೆ ಈಗ ಪ್ರಕಟವಾಗಿರುವಂತಹ ಶಿಕ್ಷೆ ಜಾರಿಯಾದರೆ ಕಾಂಗ್ರೆಸ್ ರಾಹುಲ್ ಗಾಂಧಿಯವರನ್ನು ಬಿಟ್ಟು ಚುನಾವಣೆಯನ್ನು ಎದುರಿಸ ಬೇಕಾದ ಅನಿವಾರ್ಯತೆ ಬರುತ್ತದೆ. ರಾಹುಲ್ ಗಾಂಧಿಯವರು ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಇನ್ನು ಕೇವಲ 30 ದಿನಗಳ ಕಾಲ ಅವಕಾಶವಿದೆ ಅಷ್ಟೇ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">