ಮೇಷ ರಾಶಿಯವರ ಬಗ್ಗೆ ಯಾರಿಗೂ ತಿಳಿಯದ ಎಂಟು ರಹಸ್ಯಗಳು ಇಲ್ಲಿದೆ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿಯವರ 8 ರಹಸ್ಯಗಳು……!!

ಮೇಷ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಯಾವುದಾದರೂ ಒಂದು ವಿಷಯದಲ್ಲಿ ಯಶಸ್ಸನ್ನು ಸಾಧಿಸಲೇಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇವರಲ್ಲಿ ಸ್ವಲ್ಪ ಮಟ್ಟಿಗೆ ಸೋಮಾರಿತನ ಇದ್ದೇ ಇರುತ್ತದೆ. ಹಾಗೆಯೇ ಮೇಷ ರಾಶಿಯವರು ಬೇರೆಯವರ ಕೈ ಕೆಳಗೆ ಹೋಗಿ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ಬದಲಿಗೆ ತಾವೇ ಸ್ವಂತವಾಗಿ ಯಾವುದೇ ಕೆಲಸ ಮಾಡಿದರು ಪರವಾಗಿಲ್ಲ ನನ್ನ ಕೈ ಕೆಳಗೆ ಬೇರೆಯವರು ಕೆಲಸ ಮಾಡಬೇಕು ಎಂದು ಬಯಸುತ್ತಾರೆ.

ಅಂದರೆ ಸ್ವತಂತ್ರವಾಗಿ ಕೆಲಸ ಮಾಡುವುದನ್ನು ಇಷ್ಟಪಡುತ್ತಾರೆ. ಇವರು ಬೇರೆಯವರ ಯಾವುದೇ ಗುಣ ಸ್ವಭಾವವನ್ನು ಯಾವುದೇ ವಿಷಯವನ್ನು ಫಾಲೋ ಮಾಡುವುದಿಲ್ಲ ಬೇರೆಯವರೇ ನನ್ನನ್ನು ನೋಡಿ ನನ್ನ ವಿಷಯಗಳನ್ನು ಅಂದರೆ ನನ್ನ ಕೆಲವೊಂದಷ್ಟು ಕೆಲಸ ಕಾರ್ಯಗಳನ್ನು ಫಾಲೋ ಮಾಡಲಿ ಎಂದು ಬಯಸುತ್ತಾರೆ. ಮೇಷ ರಾಶಿಯವರು ಯಾರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ.

ಬೇರೆಯವರು ಮೇಷ ರಾಶಿಯವರನ್ನು ನೋಡಿದರೆ ಇವರಿಗೆ ಹೆಚ್ಚು ದರ್ಪ, ದವಲತ್ತು, ದಕ್ಷತೆ, ಇದೆ ಎಂದುಕೊಳ್ಳುತ್ತಾರೆ. ಆದರೆ ಮೇಷ ರಾಶಿಯವರ ವ್ಯಕ್ತಿತ್ವ ಅರ್ಥವಾಗಬೇಕು ಎಂದರೆ ಕೆಲವೊಂದಷ್ಟು ಸಮಯ ಅವರೊಟ್ಟಿಗೆ ಪ್ರತಿಯೊಬ್ಬರೂ ಕಳೆಯಲೇಬೇಕು ಆಗ ಮಾತ್ರ ಅವರ ಗುಣ ಸ್ವಭಾವ ತಿಳಿಯುತ್ತದೆ. ಈ ರಾಶಿಯ ಪ್ರತಿಯೊಬ್ಬರು ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಶಿಸ್ತಿನಿಂದ ಮಾಡುತ್ತಾರೆ.

ಇವರು ಯಾವುದೇ ಕಾರಣಕ್ಕೂ ಇಟ್ಟ ಗುರಿ ನೆಟ್ಟ ಬಾಣವನ್ನು ಹಿಂದಕ್ಕೆ ತೆಗೆಯುವುದಿಲ್ಲ. ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನು ಆತುರದಲ್ಲಿ ಮುಗಿಸುವುದಿಲ್ಲ ಆ ಕೆಲಸದಲ್ಲಿ ಶಿಸ್ತು ಇರುತ್ತದೆ. ಮೇಷ ರಾಶಿಯವರಿಗೆ ಯಾರು ತಮ್ಮತ್ತ ಕೈ ಮಾಡಿ ತೋರಿಸುವುದು ಇಷ್ಟ ಇರುವುದಿಲ್ಲ. ಹಾಗೆಯೇ ಇವರು ಮಾಡುವಂತಹ ಕೆಲಸದಲ್ಲಿ ಯಾರೂ ಕೂಡ ತಪ್ಪನ್ನು ಹುಡುಕುವಂತೆ ಇವರು ಕೆಲಸವನ್ನು ಮಾಡುವುದು ಇಲ್ಲ.

ಮೇಷ ರಾಶಿಯವರು ಯಾವಾಗಲೂ ನಾಯಕರಾಗಿರಲು ಬಯಸುತ್ತಾರೆ. ಉತ್ತಮ ವ್ಯವಸ್ಥಾಪಕರಾಗಿರಲು ಬಯಸುತ್ತಾರೆಯೇ ವಿನಹ ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಇವರು ಒಂದು ಕೆಲಸವನ್ನು ಎಲ್ಲರಂತೆ ಮುಗಿಸುವುದಕ್ಕಿಂತ ವಿಶಿಷ್ಟವಾಗಿ ಮಾಡಬೇಕು ಎಂದು ಬಯಸುತ್ತಾರೆ. ಇವರ ಬಳಿ ಯಾರಾದರೂ ಸಲಹೆಯನ್ನು ಕೇಳಿದರೆ ತಕ್ಷಣವೇ ನೀಡಿ ಬಿಡುತ್ತಾರೆ. ಆ ಬಳಿಕ ತಾನು ನೀಡಿದ ಸಲಹೆಗಿಂತ ಇನ್ನು ಉತ್ತಮವಾದ ಸಲಹೆಯನ್ನು ನೀಡಬಹುದಿತ್ತೋ ಏನೋ ಎಂದುಕೊಳ್ಳುತ್ತಾರೆ.

ಮತ್ತೊಬ್ಬರು ದುಡಿಯುವ ವಿಷಯದಲ್ಲಿ ಮೇಷ ರಾಶಿಯವರು ಮಾಡುವಂತಹ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಆತುರತೆ ಎದ್ದು ಕಾಣುತ್ತದೆ. ಈ ರಾಶಿಯ ಜನರಿಗೆ ದೊಡ್ಡ ದೊಡ್ಡ ಸಾಹಸಗಳನ್ನು ಮಾಡುವುದು ಎಂದರೆ ತುಂಬಾ ಇಷ್ಟ. ಸಾಹಸಗಳ ಬಗ್ಗೆ ಅಷ್ಟೇ ಭಯವೂ ಕೂಡ ಇವರಲ್ಲಿ ಇರುತ್ತದೆ. ಆಸೆಯ ಹಿಂದೆಯೇ ಅವಿತು ಕುಳಿತಿರುವಂತಹ ಭಯದಿಂದಾಗಿ ಬೇಗ ಯಾವುದೇ ಸಾಹಸಕ್ಕೆ ಕೈ ಹಾಕುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *