ಬೀದಿಯಲ್ಲಿ ಪೆಪ್ಸಿ ಮಾರುತ್ತಿದ್ದ ಹುಡುಗ ಲೇಸ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ ನಿರುದ್ಯೋಗಿ ಅಂತ ಕೊರಗುವವರು ತಪ್ಪದೇ ನೋಡಿ.. » Karnataka's Best News Portal

ಬೀದಿಯಲ್ಲಿ ಪೆಪ್ಸಿ ಮಾರುತ್ತಿದ್ದ ಹುಡುಗ ಲೇಸ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ ನಿರುದ್ಯೋಗಿ ಅಂತ ಕೊರಗುವವರು ತಪ್ಪದೇ ನೋಡಿ..

ಬೀದಿಯಲ್ಲಿ ಪೆಪ್ಸಿ ಮಾರುತಿದ್ದ ಹುಡುಗ ಲೇಸ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ..? ಯಾರು ಈ ಹರ್ಮನ್…..?

WhatsApp Group Join Now
Telegram Group Join Now

1909ರಲ್ಲಿ ನಾರ್ತ್ ಕೆರೋಲಿನ ದಲ್ಲಿ ಹರ್ಮನ್ ಲೇ ಎಂಬ ಹುಡುಗ ಹುಟ್ಟುತ್ತಾನೆ. ಈ ಹುಡುಗ ಕೇವಲ 11ನೇ ವಯಸ್ಸಿನಲ್ಲಿಯೇ ತನ್ನ ಮನೆಯ ಸುತ್ತಮುತ್ತ ಪೆಪ್ಸಿ ಮಾರಾಟ ಮಾಡುವುದಕ್ಕೆ ಶುರು ಮಾಡುತ್ತಾನೆ. ಈತನ ಮನೆಯ ಮುಂದೆ ಒಂದು ಬೇಸ್ ಬಾಲ್ ನ ಮೈದಾನವಿತ್ತು.

ಇದರಲ್ಲಿ ಇಂಟರೆಸ್ಟಿಂಗ್ ವಿಷಯ ಏನು ಎಂದರೆ ಈ ಮೈದಾನದೊಳಗೆ ಒಂದು ಪೆಪ್ಸಿಗೆ 10 ಸೆನ್ಸ್ ಕೊಡಬೇಕಿತ್ತು. ಇದೇ ಪೆಪ್ಸಿ ಮೈದಾನದ ಹೊರಗಿನ ಅಂಗಡಿಯಲ್ಲಿ ಕೇವಲ 4 ಸೆನ್ಸ್ ಗೆ ಸಿಗುತ್ತಾ ಇತ್ತು. ಹರ್ಮನ್ ಗೆ ಇಲ್ಲೇ ಒಂದು ಆಲೋಚನೆ ಬರುತ್ತದೆ. ಹೊರಗಡೆ 4 ಸೆನ್ಸ್ ಕೊಟ್ಟು ಒಂದು ಪೆಪ್ಸಿಯನ್ನು ತೆಗೆದುಕೊಂಡು ಅದನ್ನು ಮೈದಾನದ ಒಳಗಡೆ 5 ಸೆನ್ಸ್ ಗೆ ಮಾರಾಟ ಮಾಡಿದರು.

ಜನ ಹೆಚ್ಚು ನನ್ನಲ್ಲಿಯೇ ಖರೀದಿ ಮಾಡುತ್ತಾರೆ ಎನ್ನುವುದನ್ನು ಆದ ಅರಿತುಕೊಳ್ಳುತ್ತಾನೆ. ಈತನ ಈ ಒಂದು ವಿಷಯ ಹೆಚ್ಚು ಕೆಲಸ ಮಾಡಿತು. ಕೇವಲ ಒಂದು ಸೆನ್ಸ್ ಲಾಭ ಪಡೆದು ಆತ ಪೆಪ್ಸಿ ಯನ್ನು ಮಾರಾಟ ಮಾಡುತ್ತಾನೆ. ಆಗ ಆತನಿಗೆ ಒಂದು ಸಣ್ಣದೊಂದು ಬ್ಯುಸಿನೆಸ್ ಐಡಿಯಾ ಬರುತ್ತದೆ. ಮುಂದೆ ಆತ

ಮನೆ ಮನೆಗೆ ಪೇಪರ್ ಹಾಕುವಂತಹ ಕೆಲಸವನ್ನು ಕೂಡ ಮಾಡುತ್ತಾನೆ.
ಹೀಗಿರುವಾಗ ಅವನ ಮನೆಯ ಮುಂದೆ ಒಂದು ಪರೇಡ್ ಕಾರ್ಯಕ್ರಮ ಆಯೋಜನೆ ಆಗಿರುತ್ತದೆ. ಈ ಪರೇಡ್ ಕಾರ್ಯಕ್ರಮದಲ್ಲಿ ಐಸ್ ಕ್ರೀಮ್ ಮಾರಾಟ ಮಾಡೋಣ ಎಂದು ಅವನು ಮತ್ತು ಅವನ ಸ್ನೇಹಿತರು ಆಲೋಚನೆಯನ್ನು ಮಾಡುತ್ತಾರೆ. ಇಬ್ಬರು ನೂರು ನೂರು ಡಾಲರ್ ಇನ್ವೆಸ್ಟ್ ಮಾಡಿ ಐಸ್ ಕ್ರೀಮ್ ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡುತ್ತಾರೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಆದರೆ ದುರಾದೃಷ್ಟವೋ ಏನೋ ಗೊತ್ತಿಲ್ಲ ಕೊನೆಯ ಕ್ಷಣದಲ್ಲಿ ಆ ಅಪರೇಡ್ ಕ್ಯಾನ್ಸಲ್ ಆಗುತ್ತದೆ. ಅಲ್ಲಿ ಅವರಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತದೆ. ಇನ್ನು ಹೀಗೆ ಮಾಡಿದರೆ ಆಗುವುದಿಲ್ಲ ಎಂದು ಸನ್ ಶೈನ್ ಎಂಬ ಬಿಸ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡುತ್ತಾನೆ ಹರ್ಮನ್. ಆಗಿನ ಕಾಲದಲ್ಲಿ ಸನ್ ಶೈನ್ ಬಿಸ್ಕೆಟ್ ಎಂದರೆ ಅಮೆರಿಕಾದಲ್ಲಿ ತುಂಬಾ ಫೇಮಸ್ ಬ್ರಾಂಡ್ ಆಗಿತ್ತು.

ಆದರೆ ವಿಪರ್ಯಾಸ ಎಂದರೆ ಈ ಕೆಲಸಕ್ಕೆ ಸೇರಿದ ಸ್ವಲ್ಪ ಸಮಯದಲ್ಲಿ ಯೇ ಆತ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಹೊಸ ಕೆಲಸವನ್ನು ಹುಡುಕಲು ಶುರು ಮಾಡುತ್ತಾನೆ ಹರ್ಮನ್. ನ್ಯೂಸ್ ಪೇಪರ್ ನಲ್ಲಿ ಜಾಹೀರಾತನ್ನು ನೋಡಿ ನೂರಕ್ಕೂ ಹೆಚ್ಚು ಕಂಪನಿಗಳಿಗೆ ಕೆಲಸಕ್ಕೆ ಅಪ್ಲೈ ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">