ಜಿರಳೆಗಳನ್ನು ಶಾಶ್ವತವಾಗಿ ತೊಡೆದುಹಾಕಲು ನೈಸರ್ಗಿಕ ಮಾರ್ಗಗಳು….!!
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಜಿರಳೆಗಳು ವಾಸವಿರುತ್ತದೆ ಎಂದು ಹೇಳಬಹುದು. ಅದರಲ್ಲೂ ಅಡುಗೆ ಮನೆಗಳಲ್ಲಿ ಹಾಗೂ ಹೆಚ್ಚಾಗಿ ದಿನಸಿ ಸಾಮಾನುಗಳನ್ನು ಇಡುವಂತಹ ಸ್ಥಳಗಳಲ್ಲಿ ಜಿರಳೆಗಳು ಹೇರಳವಾಗಿ ಇರುತ್ತದೆ. ಹಾಗೂ ಅಡುಗೆ ಮನೆಗಳಲ್ಲಿ ಪಾತ್ರೆ ತೊಳೆಯುವಂತಹ ಶಿಂಕ್ ಕೆಳಗಿನ ಭಾಗದಲ್ಲಿ ಹಾಗೂ ಹೆಚ್ಚಾಗಿ ನೀರು ಹರಿದಾಡುವಂತಹ ಸ್ಥಳಗಳಲ್ಲಿ ಈ ಜಿರಳೆಗಳನ್ನು ನಾವು ಕಾಣಬಹುದು.
ಅದೇ ರೀತಿಯಾಗಿ ಜಿರಳೆಗಳು ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದೇ ಇರುತ್ತದೆ ಎಂದು ಹೇಳಬಹುದು. ಆದರೆ ಜಿರಳೆಗಳು ನಮಗೆ ಅಷ್ಟಾಗಿ ತೊಂದರೆಯನ್ನು ಉಂಟು ಮಾಡದೆ ಇದ್ದರೂ ಅವುಗಳಿಂದ ನಮಗೆ ಕೆಲವೊಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಜಿರಳೆಗಳು ಅಡುಗೆ ಮನೆಯಲ್ಲಿ ಓಡಾಡುವುದರಿಂದ ಆಹಾರ ಪದಾರ್ಥಗಳ ಮೇಲೆ ಅವು ಹರಿದಾಡುತ್ತಿರುತ್ತದೆ.
ಇದರಿಂದ ನಾವು ತಿನ್ನುವಂತ ಆಹಾರದಲ್ಲಿ ಕೆಲವೊಂದಷ್ಟು ಪ್ರಮಾಣದಲ್ಲಿ ಕಲ್ಮಶಗಳು ಸೇರಿಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ತಿನ್ನುವುದರಿಂದ ನಮ್ಮ ಆಹಾರವೂ ಕೂಡ ಹಾಳಾಗಿರುತ್ತದೆ ಅದನ್ನು ತಿನ್ನುವ ನಮ್ಮ ಆರೋಗ್ಯವೂ ಸಹ ಹಾಳಾಗುತ್ತದೆ ಆದ್ದರಿಂದ ಜಿರಳೆಗಳು ಮನೆಯಲ್ಲಿ ಇರುವುದು ಸ್ವಲ್ಪಮಟ್ಟಿಗೆ ತೊಂದರೆ ಎಂದೇ ಹೇಳಬಹುದು. ಅದರಲ್ಲೂ ಮಕ್ಕಳಿರುವಂತಹ ಮನೆಯಲ್ಲಿ ಇಂತಹ ಕೀಟಗಳು ಇರುವುದು ಬಹಳ ಅಪಾಯಕಾರಿಯಾಗಿರುತ್ತದೆ.
ಅದಕ್ಕಾಗಿ ಹೆಚ್ಚಿನ ಜನ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಅಥವಾ ಅವುಗಳನ್ನು ನಾಶಪಡಿಸಲು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ತಂದು ಉಪಯೋಗಿಸಿ ಅವುಗಳನ್ನು ನಾಶಪಡಿಸುತ್ತಿರುತ್ತಾರೆ. ಆದರೆ ಅವು ಕೆಲವೊಮ್ಮೆ ಅವುಗಳಿಂದಲೂ ನಾಶವಾಗುವುದಿಲ್ಲ ಹಾಗೂ ಅದಕ್ಕೆ ಬಳಸುವಂತಹ ಪದಾರ್ಥಗಳು ಸಹ ನಮಗೆ ಕೆಲವೊಮ್ಮೆ ಅಪಾಯವನ್ನು ಉಂಟು ಮಾಡಬಹುದು. ಹಾಗಾಗಿ ಅವುಗಳನ್ನು ಉಪಯೋಗಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಉಪಯೋಗಿಸಿ ಅದನ್ನು ನೀವು ಅನುಸರಿಸಿದ್ದೆ ಆದಲ್ಲಿ.
ಒಳ್ಳೆಯ ವಿಧಾನದಲ್ಲಿ ನೀವು ನಿಮ್ಮ ಮನೆಯಲ್ಲಿ ಜಿರಳೆಗಳನ್ನು ಆಚೆ ಹಾಕಬಹುದು ಹಾಗೂ ಇದು ನಿಮಗೆ ಯಾವುದೇ ರೀತಿಯಲ್ಲೂ ಅಪಾಯವನ್ನು ಉಂಟು ಮಾಡುವುದಿಲ್ಲ ಹಾಗಾದ್ರೆ ಆ ಒಂದು ವಿಧಾನ ಯಾವುದು ಅದನ್ನು ಮಾಡುವುದಕ್ಕೆ ಯಾವುದೇ ಇಲ್ಲ ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದಂತೆ ಮಾಹಿತಿ ಯನ್ನು ನೋಡೋಣ. ಮೊದಲನೆಯದಾಗಿ ಲವಂಗದ ಪುಡಿ ಹೌದು ಜಿರಳೆಗಳು ಎಲ್ಲೆಲ್ಲಿ ಓಡಾಡುತ್ತಿರುತ್ತದೆಯೋ ಅಲ್ಲಿ ಲವಂಗದ ಪುಡಿಯನ್ನು ಹಾಕುವುದರಿಂದ.
ಅದರ ವಾಸನೆಗೆ ಜಿರಳೆಗಳು ಬರುವುದಿಲ್ಲ ಹಾಗು ಎರಡನೆಯದಾಗಿ ಬಿರಿಯಾನಿ ಎಲೆ ಅಂದರೆ ಪಲಾವ್ ಎಲೆ ಇದನ್ನು ಸಹ ಮಿಕ್ಸಿಯಲ್ಲಿ ಚೆನ್ನಾಗಿ ನುಣ್ಣನೆ ಪುಡಿ ಮಾಡಿ ಜಿರಳೆಗಳು ಎಲ್ಲೆಲ್ಲಿ ಓಡುತ್ತಿರುತ್ತದೆಯೋ ಅಲ್ಲಿಗೆ ಈ ಪುಡಿಯನ್ನು ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.