ಕಿಡ್ನಿ ಫೇಲ್ ಆಗೋದಕ್ಕೆ ಅತಿ ಮುಖ್ಯವಾದ 20 ಕಾರಣಗಳು..ಕಿಡ್ನಿ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ.. » Karnataka's Best News Portal

ಕಿಡ್ನಿ ಫೇಲ್ ಆಗೋದಕ್ಕೆ ಅತಿ ಮುಖ್ಯವಾದ 20 ಕಾರಣಗಳು..ಕಿಡ್ನಿ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ..

ಕಿಡ್ನಿ ಫೇಲ್ ಆಗಿರುವುದಕ್ಕೆ 20 ಲಕ್ಷಣಗಳು…..!!

WhatsApp Group Join Now
Telegram Group Join Now

ಕಿಡ್ನಿಯಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದು ಹಲವಾರು ರೀತಿಯ ಲಕ್ಷಣಗಳನ್ನು ತೋರಿಸುತ್ತದೆ. ಆದರೆ ಹೆಚ್ಚಿನ ಜನಕ್ಕೆ ಆ ಮಾಹಿತಿ ತಿಳಿದಿರುವುದಿಲ್ಲ ಆನಂತರ ಕೊನೆಯಲ್ಲಿ ಆ ಸಮಸ್ಯೆ ಉಲ್ಬಣ ಗೊಂಡು ಅದರಿಂದ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಇಂತಹ ವಿಷಯಗಳನ್ನು ಅಂದರೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅದರಲ್ಲೂ ಕಿಡ್ನಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಹೆಚ್ಚಾಗಿದೆ ಎಂದು ಹೇಳಬಹುದು, ಏಕೆ ಎಂದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯನ್ನು ತಮ್ಮ ಆಹಾರ ಶೈಲಿಯನ್ನು ಹೀಗೆ ಕೆಲವೊಂದು ಕೆಟ್ಟ ಚಟಗಳನ್ನು ಅನುಸರಿಸುತ್ತಿರುವುದರಿಂದ ಅವರಲ್ಲಿ ಕಿಡ್ನಿ ಫೇಲ್ ಆಗುವುದು ಹೀಗೆ ಕಿಡ್ನಿ ಸಮಸ್ಯೆ ಕಿಡ್ನಿ ಸ್ಟೋನ್ ಹೀಗೆ ಹಲವಾರು ಸಮಸ್ಯೆಗಳನ್ನು ಅವರು ಅನುಭವಿಸುತ್ತಿರುತ್ತಾರೆ.


ಆದರೆ ಈ ಎಲ್ಲಾ ಸಮಸ್ಯೆ ಬರುವುದಕ್ಕೂ ಮುನ್ನ ನಾವು ಕೆಲವೊಂದಷ್ಟು ಎಚ್ಚರಿಕೆಯನ್ನು ವಹಿಸಿರುವುದರಿಂದ ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಕಿಡ್ನಿಗೆ ಸಂಬಂಧಿಸಿದಂತಹ ಯಾವುದೇ ಸಮಸ್ಯೆಗಳು ಬಾರದಂತೆ ನಾವು ಯಾವ ರೀತಿಯಾದಂತಹ ಜೀವನ ಶೈಲಿಯನ್ನು ಹಾಗೂ ಆಹಾರ ಶೈಲಿಯನ್ನು ಅನುಸರಿಸಬೇಕು ಹಾಗೆ ಏನಾದರೂ ಕಿಡ್ನಿಯಲ್ಲಿ ಯಾವುದಾದರೂ ಸಮಸ್ಯೆಗಳು ಎದುರಾಗಿದ್ದರೆ ಅದು ನಮಗೆ ಯಾವ ರೀತಿಯ ಲಕ್ಷಣಗಳನ್ನು ತೋರಿಸುತ್ತದೆ.

ಈ ಲಕ್ಷಣಗಳು ಕಾಣಿಸಿಕೊಂಡಿದ್ದರೆ ನಮಗೆ ಕಿಡ್ನಿಯಲ್ಲಿ ಅಪಾಯಗಳು ಉಂಟಾಗುತ್ತಿದೆ ಎಂದೇ ಅರ್ಥ ಆದ್ದರಿಂದ ಅವುಗಳನ್ನು ತಿಳಿದುಕೊಂಡು ನಿಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಹಾಗಾದರೆ ಮೊದಲನೆಯದಾಗಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಬಹಳ ಮುಖ್ಯವಾದ ಕಾರಣ ಏನು ಎಂದರೆ ಹೆಚ್ಚಾಗಿ ನೀರನ್ನು ಸೇವನೆ ಮಾಡದೆ ಇರುವುದು, ಹೆಚ್ಚಾಗಿ ಮೈದಾ ಹಿಟ್ಟಿನ ಪದಾರ್ಥ ಸೇವನೆ ಮಾಡುವುದು ಇವೆಲ್ಲವೂ ಕೂಡ ಕಿಡ್ನಿ ಸಮಸ್ಯೆಗೆ ಪ್ರಮುಖವಾದ ಕಾರಣವಾಗಿದೆ.

ಹಾಗೆಯೇ ಕಿಡ್ನಿ ಸಮಸ್ಯೆ ಉಂಟಾಗಿದ್ದರೆ ಯಾವ ಕೆಲವೊಂದಷ್ಟು ಲಕ್ಷಣಗಳು ನಮಗೆ ಕಾಣಿಸುತ್ತದೆ ಎಂದು ನೋಡುವುದಾದರೆ ಮೊದಲನೆ ದಾಗಿ ಮೂತ್ರ ವಿಸರ್ಜಿಸುವಾಗ ರಕ್ತ ಕಾಣಿಸಿಕೊಳ್ಳುವುದು, ಬೆನ್ನು ನೋವು ಕೈಕಾಲು ನೋವಿನ ಸಮಸ್ಯೆ ಮತ್ತು ಮುಖದ ಹೊಳಪು ಅಂದರೆ ಚೈತನ್ಯ ಕಡಿಮೆಯಾಗುತ್ತಾ ಹೋಗುವುದು. ಆಗಾಗ ನಮ್ಮ ಇಡೀ ದೇಹ ಸುಸ್ತು ನಿಶಕ್ತಿಯಿಂದ ಕೂಡಿರುವುದು. ಹಾಗೆ ಮೂತ್ರ ವಿಸರ್ಜಿಸುವಾಗ ಉರಿ ಕಾಣಿಸುವುದು.

ಅತಿ ಹೆಚ್ಚು ಅಥವಾ ಅತಿ ಕಡಿಮೆ ಮೂತ್ರ ವಿಸರ್ಜನೆ ಮಾಡುವುದು. ಹೊಟ್ಟೆ ಹಸಿಯದಿರುವುದು, ವಾಕರಿಕೆ ಬರುವುದು, ನಿರಂತರವಾಗಿ ದೇಹದ ತೂಕ ಕಡಿಮೆಯಾಗುತ್ತಾ ಬರುವುದು, ಬೆಳಿಗ್ಗೆ ಎದ್ದ ನಂತರ ಕಣ್ಣು ಮತ್ತು ಮುಖದ ಸುತ್ತಲೂ ಊತ ಕಾಣಿಸಿಕೊಳ್ಳುವುದು. ರಾತ್ರಿ ಸಮಯ ಅತಿಯಾದ ಮೂತ್ರ ವಿಸರ್ಜನೆ ಮಾಡುವುದು. ಇವೆಲ್ಲವೂ ಪ್ರಮುಖ ಲಕ್ಷಣವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">