ಯಾರಿಗೂ ಸಹ ಈ ವಸ್ತುಗಳನ್ನು ದಾನ ಮಾಡಬೇಡಿ..ಸಂಕಷ್ಟ ತಪ್ಪಿದ್ದಲ್ಲ.ನಿಮ್ಮ ಕಷ್ಟಗಳಿಗೆ ನೀವೆ ಕಾರಣ - Karnataka's Best News Portal

ಯಾರಿಗೂ ಸಹ ಈ ವಸ್ತುಗಳನ್ನು ದಾನ ಮಾಡಬೇಡಿ..ಸಂಕಷ್ಟ ತಪ್ಪಿದ್ದಲ್ಲ.ನಿಮ್ಮ ಕಷ್ಟಗಳಿಗೆ ನೀವೆ ಕಾರಣ

ಅಪ್ಪಿ ತಪ್ಪಿಯು ದಾನ ಮಾಡಬಾರದು ಈ 8 ವಸ್ತುಗಳನ್ನು….!! ಇಲ್ಲವಾದರೆ ಕಟ್ಟಲಾಗದ ನಷ್ಟ ಅನುಭವಿಸುತ್ತೀರಿ….!!

WhatsApp Group Join Now
Telegram Group Join Now

ನಮ್ಮಲ್ಲಿ ಕೆಲವೊಂದಷ್ಟು ವಸ್ತುಗಳಿಗೆ ಬಹಳ ಮಹತ್ವಪೂರ್ಣವಾದ ಅರ್ಥ ಇರುತ್ತದೆ ಆದ್ದರಿಂದ ಅವುಗಳನ್ನು ನಾವು ಅಷ್ಟೇ ಗೌರವದಿಂದ ಹಾಗೂ ಅವುಗಳನ್ನು ಯಾರಿಗೂ ಕೊಡದಂತೆ ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವುಗಳನ್ನು ನಾವು ಬೇರೆಯವರಿಗೆ ಕೊಟ್ಟರೆ ನಮ್ಮ ಅದೃಷ್ಟವೆಲ್ಲವೂ ಬೇರೆಯವರ ಪಾಲಾಗುವ ಸಾಧ್ಯತೆ ಇರುತ್ತದೆ.

ಹೌದು ಮೇಲೆ ಹೇಳಿದಂತೆ ಈ ವಸ್ತುಗಳನ್ನು ನಾವು ಬೇರೆಯವರಿಗೆ ಕೊಟ್ಟರೆ ನಮಗೆ ನಷ್ಟ ಎನ್ನುವುದು ಸಂಭವಿಸುತ್ತದೆ ನಮ್ಮಿಂದ ಅವರು ಏಳಿಗೆಯನ್ನು ಪಡೆಯುತ್ತಾರೆ ಹೊರತು ನಮಗೆ ಯಾವುದೇ ರೀತಿ ಯಲ್ಲೂ ಏಳಿಗೆ ಉಂಟಾಗುವುದಿಲ್ಲ. ಅದರಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಅಂತಹ ವಸ್ತುಗಳು ಯಾವುದು ಎಂದು ಈ ಕೆಳಗಿನಂತೆ ತಿಳಿಯೋಣ.

ಮೊದಲನೆಯದಾಗಿ ಪೊರಕೆ ಹೌದು ಪೊರಕೆಯನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ದಾನ ಮಾಡಬಾರದು ಹಾಗೇನಾದರೂ ನೀವು ದಾನ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣ ಉಳಿಯುವುದಿಲ್ಲ ಬದಲಿಗೆ ಅವರಿಗೆ ಹೆಚ್ಚಾಗಿ ಸೇರುತ್ತದೆ. ಏಕೆ ಎಂದರೆ ಪೊರಕೆಯನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸುತ್ತಾರೆ ಆದ್ದರಿಂದ ನಾವು ಮಹಾಲಕ್ಷ್ಮಿಯನ್ನು ನಮ್ಮ ಬಳಿ ಇಟ್ಟುಕೊಳ್ಳದೆ ಬೇರೆಯವರಿಗೆ ಕೊಟ್ಟರೆ ನಮಗೆ ಹಣಕಾಸಿನ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಈ ರೀತಿ ಪೊರಕೆಯನ್ನು ಕೊಡುವುದು ಉತ್ತಮವಲ್ಲ.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಇನ್ನು ಎರಡನೆಯದಾಗಿ ಸ್ಟೀಲ್ ಪಾತ್ರೆಗಳನ್ನು ಕೊಡುವುದರಿಂದ ನಮ್ಮ ಸುಖ ಶಾಂತಿ, ದೂರವಾಗುತ್ತದೆ ಹೌದು ಮನೆಯಲ್ಲಿರುವಂತಹ ಹಾಗೂ ನಾವು ಉಪಯೋಗಿಸುವಂತಹ ಸ್ಟೀಲ್ ಪಾತ್ರೆಗಳನ್ನು ಬೇರೆಯವರಿಗೆ ಕೊಟ್ಟರೆ ನಮ್ಮ ಮನೆಯಲ್ಲಿ ಇರುವಂತಹ ಸುಖ ಶಾಂತಿ, ನೆಮ್ಮದಿ ಎಲ್ಲವೂ ದೂರವಾಗುತ್ತದೆ. ಮನೆಯಲ್ಲಿ ಉಪಯೋಗಿಸಲ್ಪಡುವಂತಹ ಎಣ್ಣೆ ಅಂದರೆ ಈಗಾಗಲೇ ನಾವು ಉಪಯೋಗಿಸಿರುವಂತಹ ಎಣ್ಣೆಯನ್ನು ಬೇರೆಯವರಿಗೆ ದಾನ ಮಾಡಿದರೆ ಅಶುಭ ಫಲಗಳು ಸಿಗುತ್ತದೆ.

ಹಳಸಿದ ಅನ್ನವನ್ನು ಬೇರೆಯವರಿಗೆ ಕೊಟ್ಟರೆ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಹಣ ವ್ಯಯವಾಗುತ್ತದೆ. ಮನೆಯಲ್ಲಿ ಉಪಯೋಗಿಸು ವಂತಹ ಚಾಕು, ಕತ್ತರಿ ಹರಿತ ಪದಾರ್ಥಗಳನ್ನು ದಾನ ಮಾಡಿದರೆ ಮನೆಯಲ್ಲಿ ಜಗಳ ಆಗುತ್ತದೆ. ಹರಿದ ಗ್ರಂಥ ಮತ್ತು ಪುಸ್ತಕಗಳನ್ನು ದಾನ ಮಾಡಿದರೆ ಭಾಗ್ಯ ಹಾಳಾಗುತ್ತದೆ. ಪ್ಲಾಸ್ಟಿಕ್ ಸಾಮಾನುಗಳನ್ನು ದಾನ ಮಾಡುವುದರಿಂದ ವ್ಯವಹಾರಗಳಲ್ಲಿ ನಷ್ಟ ಸಂಭವಿಸುತ್ತದೆ.

ಹಾಗೆಯೇ ತುಳಸಿ ಸಸ್ಯವನ್ನು ಬೇರೆಯವರಿಗೆ ದಾನ ಮಾಡುವುದರಿಂದ ನಮ್ಮ ಶುಭಫಲಗಳೆಲ್ಲವೂ ದೂರ ಆಗುತ್ತದೆ ಹಾಗೂ ನಮಗೆ ಇಲ್ಲ ಸಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗಿ ಅದಕ್ಕೆ ಹೆಚ್ಚಿನ ಹಣಕಾಸನ್ನು ಖರ್ಚು ಮಾಡುವಂತಹ ಸನ್ನಿವೇಶಗಳು ಬರುತ್ತದೆ. ಆದ್ದರಿಂದ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ದಾನ ಮಾಡಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">