ರಮೇಶ್ ಅರವಿಂದ್ ಸ್ಫೂರ್ತಿದಾಯಕ ಮಾತುಗಳು……||
ರಮೇಶ್ ಅರವಿಂದ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ ಹಾಗೂ ಇವರು ಇಂಜಿನಿಯ ರಿಂಗ್ ಪದವಿಯನ್ನು ಪಡೆದಿದ್ದು ಅದಾಗಿಯೂ ಇವರು ನಟನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರಿಂದ ನಟನೆಯಲ್ಲಿ ಇವರು ಅಭಿವೃದ್ಧಿ ಯನ್ನು ಹೊಂದುತ್ತಾರೆ. ಅದೇ ರೀತಿಯಾಗಿ ಇವರು ಅತ್ಯುತ್ತಮವಾದ ಚಿತ್ರಗಳನ್ನು ಅಭಿನಯಿಸುವುದರ ಮೂಲಕ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ರಮೇಶ್ ಅರವಿಂದ್ ಅವರು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಅಂದರೆ ತನ್ನ ಗುರಿಯನ್ನು ತಲುಪಬೇಕು ಎಂದರೆ ಯಾವ ಎರಡು ವಿಚಾರಗಳನ್ನು ಪ್ರತಿಯೊಂದರಲ್ಲಿಯೂ ಅಳವಡಿಸಿಕೊಳ್ಳಬೇಕು ಹಾಗೆ ಯಾವ ವ್ಯಕ್ತಿ ಯಾವ ರೀತಿಯಾದಂತಹ ಸಂಬಂಧಗಳನ್ನು ಪಡೆದರೆ ಅವನು ತನ್ನ ಜೀವನದಲ್ಲಿ ಖುಷಿಯಾಗಿರುತ್ತಾನೆ.
ಹಾಗೆ ತನ್ನ ಜೀವನದಲ್ಲಿ ಯಾವ ಒಂದು ನಿಯಮಗಳನ್ನು ಅಳವಡಿಸಿ ಕೊಂಡರೆ ಅವನು ತನ್ನ ಜೀವನದಲ್ಲಿ ಯಶಸ್ಸಿನ ಉತ್ತುಂಗವನ್ನು ಏರಬಹುದು,ಹೀಗೆ ಈ ವಿಷಯವಾಗಿ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿಗಳನ್ನು ಹೇಳುತ್ತಾರೆ. ಹೌದು ಏನೆಂದರೆ ಯಾವುದೇ ಒಬ್ಬ ವ್ಯಕ್ತಿ ಒಬ್ಬ ಉತ್ತಮವಾದಂತಹ ಸ್ನೇಹಿತನನ್ನು ಪಡೆದುಕೊಂಡರೆ ಅಂದರೆ ಆ ವ್ಯಕ್ತಿ ಒಳ್ಳೆಯ ವಿಚಾರಗಳನ್ನು ತಿಳಿದುಕೊಂಡಿರಬೇಕು ಕಷ್ಟ ಸುಖಗಳನ್ನು ಅರಿತುಕೊಂಡಿರಬೇಕು ಕೆಟ್ಟ ವಿಷಯಗಳನ್ನು ಆಲೋಚನೆಯೂ ಸಹ ಮಾಡಬಾರದು ಹೀಗೆ ಒಳ್ಳೆಯ ಗುಣಗಳನ್ನು ಹೊಂದಿರುವಂತಹ ವ್ಯಕ್ತಿಯನ್ನು.
ನಾವು ನಮ್ಮ ಜೀವನದಲ್ಲಿ ಸ್ನೇಹಿತರನ್ನಾಗಿ ಮಾಡಿಕೊಂಡರೆ ಅವರಲ್ಲಿ ರುವಂತಹ ಗುಣಗಳನ್ನು ನಾವು ಕಲಿಯುತ್ತೇವೆ ಅದೇ ರೀತಿಯಾಗಿ ಹೆಚ್ಚಾಗಿ ಹಣವನ್ನು ಖರ್ಚು ಮಾಡುವಂತಹ, ಹಿರಿಯರಿಗೆ ಗೌರವವನ್ನು ಕೊಡದೆ ಇರುವಂತಹ, ಕೆಟ್ಟ ಚಟಗಳನ್ನು ಹೊಂದಿರುವಂತಹ ಸ್ನೇಹಿತರನ್ನು ನಾವು ನಮ್ಮ ಗೆಳೆಯರನ್ನಾಗಿ ಅಥವಾ ಗೆಳತಿಯರನ್ನಾಗಿ ಮಾಡಿಕೊಂಡರೆ ನಾವು ಕೂಡ ಅವುಗಳ ಚಟಕ್ಕೆ ಬೀಳುತ್ತೇವೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉತ್ತಮವಾದಂತಹ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಅದೇ ರೀತಿಯಾಗಿ ನೀವು ಕೂಡ ಅವರಿಂದ ಅಭಿವೃದ್ಧಿಯನ್ನು ಹೊಂದುವಂತಹ ಮಾಹಿತಿಗಳನ್ನು ತಿಳಿದುಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಕೂಡ ಅವರಂತೆ ಹಾಗೂ ಅದಕ್ಕಿಂತ ಎತ್ತರದ ಸ್ಥಾನಕ್ಕೆ ಹೋಗುವುದಕ್ಕೆ ಸುಲಭವಾದ ಮಾರ್ಗ ಸಿಗುತ್ತದೆ. ಬದಲಿಗೆ ಅಡ್ಡದಾರಿಗಳನ್ನು ಹಿಡಿದರೆ ನೀವು ನಿಮ್ಮ ಜೀವನದಲ್ಲಿ ಉತ್ತುಂಗದ ಮಟ್ಟಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.
ಹೀಗೆ ಈ ಒಂದು ವಿಷಯವನ್ನು ರಮೇಶ್ ಅರವಿಂದ್ ಅವರು ಒಂದು ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಹೇಳಿದಂತಹ ಅದ್ಭುತವಾದಂತಹ ಮಾತು ಇದಾಗಿತ್ತು. ಹಾಗೂ ಈ ಒಂದು ವಿಷಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ರಮೇಶ್ ಅರವಿಂದ್ ಅವರು ಹೇಳಿದರು. ಈ ಒಂದು ಮಾಹಿತಿ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪ್ರತಿಯೊಬ್ಬರ ಜೀವನದಲ್ಲಿಯೂ ಇದು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.