ಗುರು ಬಲ 2023 ಹೇಗಿರಲಿದೆ ಗೊತ್ತಾ 12 ರಾಶಿಗಳಿಗೆ ಈ ಬಾರಿ ಗುರುಬಲ ಯಾರಿಗೆ ಲಾಭ ಯಾರಿಗೆ ನಷ್ಟ ನೋಡಿ - Karnataka's Best News Portal

ಗುರು ಬಲ 2023 ಹೇಗಿರಲಿದೆ ಗೊತ್ತಾ 12 ರಾಶಿಗಳಿಗೆ ಈ ಬಾರಿ ಗುರುಬಲ ಯಾರಿಗೆ ಲಾಭ ಯಾರಿಗೆ ನಷ್ಟ ನೋಡಿ

ಮೀನ ರಾಶಿಯಿಂದ ಮೇಷ ರಾಶಿಗೆ ಗುರು ಪ್ರವೇಶ, ಉಳಿದ ರಾಶಿ ಮೇಲೆ ಆಗುವ ಪರಿಣಾಮಗಳು ಏನೇನು ಗೊತ್ತಾ?

16 ಏಪ್ರಿಲ್ 2023 ಭಾನುವಾರದಂದು ಮೇಷ ರಾಶಿಗೆ ಮೀನ ರಾಶಿಯಿಂದ ಗುರು ಪ್ರವೇಶ ಆಗುತ್ತದೆ. ಪಂಚಾಂಗದ ಪ್ರಕಾರ 22 ಏಪ್ರಿಲ್ 2023 ರಂದು ಮೇಷ ರಾಶಿಗೆ ಗುರು ಪ್ರವೇಶ ಆಗುತ್ತದೆ. ಈ ರೀತಿ ಪಂಚಾಂಗ ಹೇಳುವವರು ಅನುಸರಿಸುವ ವಿಧಾನಗಳ ಪ್ರಕಾರ ಸಮಯ ಸ್ವಲ್ಪ ಏರುಪೇರು ಆಗಬಹುದು ಆದರೆ ಇದೇ ತಿಂಗಳಿನಲ್ಲಿ ಮೇಷ ರಾಶಿಗೆ ಗುರು ಪ್ರವೇಶ ಆಗಲಿದೆ.

ಹರ ಮುನಿದರೂ ಗುರು ಕಾಯುವನಯ್ಯ ಎನ್ನುವ ನುಡಿ ಬಹಳ ಹಿಂದಿನಿಂದಲೂ ಕೂಡ ಚಾಲ್ತಿಯಲ್ಲಿ ಇದೆ. ಯಾವುದೇ ಶುಭ ಕಾರ್ಯ ಶುರು ಮಾಡಬೇಕು ಎಂದರು ಅವರಿಗೆ ಗುರುಬಲ ಇರಬೇಕು ಎನ್ನುವ ಮಾತನ್ನು ಸಹ ಹೇಳುತ್ತಾರೆ. ಗುರುಬಲಕ್ಕೆ ಎರಡು ಅರ್ಥ ಇದೆ. ಮೊದಲನೆಯದು ಜಾತಕದಲ್ಲಿ ಗುರು ಕೆಲ ಸ್ಥಾನಗಳಲ್ಲಿ ಇದ್ದಾಗ ಗುರುಬಲ ಸೃಷ್ಟಿ ಆಗುತ್ತದೆ. ಇದರ ಅನ್ವಯ ಶುಭ ಕಾರ್ಯಗಳಿಗೆ ಮುಹೂರ್ತ ಇಡಲಾಗುತ್ತದೆ.


ಮನೆ ಕಟ್ಟುವಾಗ, ಭೂಮಿ ಪೂಜೆ ಮಾಡುವಾಗ, ಮದುವೆ ಮಾಡುವಾಗ ಇನ್ನು ಅನೇಕ ಸಂದರ್ಭಗಳಲ್ಲಿ ಅವರ ಜಾತಕದಲ್ಲಿ ಗುರು ಸ್ಥಾನ ಎಲ್ಲಿದೆ ಎಂದು ನೋಡುತ್ತೇವೆ. ಅವರಿಗೆ ಗುರುಬಲ ಇದೆಯಾ ಎಂದು ಕೇಳುತ್ತೇವೆ ಮತ್ತು ಗುರುಬಲ ಇದ್ದರೆ ಮಾತ್ರ ಇದೆಲ್ಲ ಸಾಧ್ಯ, ಆಗಿದ್ದಾಗ ಮಾತ್ರ ಒಳ್ಳೆಯದು ಎನ್ನುವ ನಂಬಿಕೆಯೂ ಇದೆ. ಇದು ಜೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವ ಗುರುಬಲ ಆಗಿರುತ್ತದೆ. ಇದನ್ನು ಹೊರತುಪಡಿಸಿ ಇನ್ನೂ ಒಂದು ರೀತಿಯ ಗುರುಬಲ ಇದೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಪೂರ್ವಿಕರ ಪ್ರಕಾರ ಇನ್ನೊಂದು ರೀತಿಯ ಗುರುಬಲ ಇದೆ. ಇದರ ಬಗ್ಗೆ ಬಹಳ ಜನರಿಗೆ ಗೊತ್ತೇ ಇರುವುದಿಲ್ಲ. ಇದಕ್ಕೆ ಗುರು ಮುಖೇನ ಮಾಡುವುದು ಎನ್ನುತ್ತಾರೆ. ಉದಾಹರಣೆಗೆ ರಾಮಾಯಣವನ್ನೇ ಹೇಳುವುದಾದರೆ ರಾಮಾಯಣದ ಪ್ರಕಾರ ದಶರಥ ಮತ್ತು ರಾಮನಿಗೆ ವಸಿಷ್ಠ ಮುನಿಗಳು ಗುರುಗಳಾಗಿದ್ದರು, ನಂತರದಲ್ಲಿ ವಾಲ್ಮೀಕಿ ಗುರುಗಳಾಗಿದ್ದರು. ಗುರುಗಳ ಪ್ರಾಮುಖ್ಯತೆ ಎಷ್ಟು ಎನ್ನುವುದನ್ನು ಇದು ತಿಳಿಸುತ್ತದೆ ಇದನ್ನು ಈ ರೀತಿ ಕೂಡ ಹೇಳಬಹುದು.

ಗುರುಗಳು ಒಬ್ಬರು ಮನೆಯಲ್ಲಿದ್ದರೆ, ಅವರ ಮಾರ್ಗದರ್ಶನದ ಮೂಲಕ ನಡೆದರೆ ಯಶಸ್ಸು ಸಿಗುತ್ತದೆ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಈ ರೀತಿ ಗುರು ಸ್ಥಾನದಲ್ಲಿ ಇರುವವರು ಅಧ್ಯಯನ ಮಾಡಿಕೊಂಡು ತಪಸ್ಸು ಮಾಡಿಕೊಂಡು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುತ್ತಾರೆ. ಅವರಿಗೆ ಎಲ್ಲವೂ ತಿಳಿದಿರುತ್ತದೆ. ಅವರಲ್ಲಿ ಒಂದು ವಾಕ್ ಶುದ್ಧಿ ಇರುತ್ತಿತ್ತು. ಅವರು ಹೇಳುವುದು ಸತ್ಯವಾಗುತ್ತಿತ್ತು. ಅಂತಹ ಗುರುಗಳನ್ನು ಕಲಿಗಾಲದಲ್ಲಿ ಕಾಣುವುದು ಕಷ್ಟ. ಇದು ಎರಡನೇ ರೀತಿಯ ಗುರುಬಲ.

ಆದರೆ ಮೊದಲ ತಿಳಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿ ರಾಶಿಯಿಂದ ರಾಶಿಗೆ ಗುರು ಸಂಚಾರ ಆಗುವಾಗ ಯಾವ ರಾಶಿಗೆ ಗುರು ಇದೆ ಎನ್ನುವುದರ ಮೇಲೆ ಹಲವು ಪರಿಣಾಮಗಳು ಉಳಿದ ಎಲ್ಲಾ ರಾಶಿಯ ಮೇಲು ಕೂಡ ಬೀರುತ್ತದೆ. ಈಗ ಸದ್ಯಕ್ಕೆ ಮೀನ ರಾಶಿಯಿಂದ ಮೇಷ ರಾಶಿಗೆ ಗುರುಪ್ರವೇಶ ಆಗುತ್ತಿರುವುದರಿಂದ ದ್ವಾದಶ ರಾಶಿಗಳ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

[irp]