ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ ನಮ್ಮ ವ್ಯಯಕ್ತಿಕ ಜೀವನ ಕೆಣಕಿದರೆ ನರಕ...ಎಂದ ಲೀಲಾವತಿ - Karnataka's Best News Portal

ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ ನಮ್ಮ ವ್ಯಯಕ್ತಿಕ ಜೀವನ ಕೆಣಕಿದರೆ ನರಕ…ಎಂದ ಲೀಲಾವತಿ

ವಿನೋದ್ ರಾಜ್ ಹೆಂಡ್ತಿ ಮತ್ತು ಮಗನ ಬಗ್ಗೆ ಮಾತನಾಡಿದವರ ಚಳಿ ಬಿಡಿಸಿದ ಹಿರಿಯ ನಟಿ ಲೀಲಾವತಿ…

ಕಳೆದ ವಾರದಿಂದ ವಿನೋದ್ ರಾಜ್ ಅವರ ಕುಟುಂಬದ ವಿಚಾರ ಭಾರಿ ಚರ್ಚೆ ಆಗುತ್ತಿದೆ. ಲೀಲಾವತಿಯವರು ಮಹಾಲಿಂಗ ಭಾಗವತರ್ ಅವರ ಪತ್ನಿ ಚೆನ್ನೈ ಆಸ್ತಿ ಪತ್ರಗಳು ಅದಕ್ಕೆ ಸಾಕ್ಷಿ ಹೇಳುತ್ತಿವೆ, ಜೊತೆಗೆ ವಿನೋದ್ ರಾಜ್ ಅವರು ಮದುವೆಯಾಗದೆ ತಾಯಿ ಸೇವೆಯಲ್ಲಿ ಜೀವನ ಕಳೆಯುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿರುವುದು ಸುಳ್ಳು. ಅವರಿಗೆ ಮದುವೆಯಾಗಿ ಇಂಜಿನಿಯರಿಂಗ್ ಓದುವಷ್ಟು ಎತ್ತರದ ಮಗನಿದ್ದಾನೆ ಎನ್ನುವುದನ್ನು ಪತ್ರಕರ್ತ ಮತ್ತು ಡಾ. ರಾಜಕುಮಾರ್ ಕುಟುಂಬದ ಆಪ್ತ ಪ್ರಕಾಶ್ ರಾಜ್ ಮೆಹು ಅವರು ಫೋಟೋ ಸಾಕ್ಷಿ ಸಮೇತ ಹೇಳಿದ್ದರು.

ಇದಾದ ಮೇಲೆ ವಿನೋದ್ ರಾಜ್ ತಾಯಿ ಲೀಲಾವತಿ ಅವರು ಇದಕ್ಕೆಲ್ಲ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ಅವರು 80ರ ವಯಸ್ಸಿನಲ್ಲೂ ಇಷ್ಟು ನೋವು ಹಿಂಸೆ ಕೊಡುತ್ತಿದ್ದೀರಾ, ನಮ್ಮ ವೈಯುಕ್ತಿಕ ಜೀವನ ಕೆಣಕಿದವರೆಲ್ಲ ನರಕಕ್ಕೆ ಹೋಗ್ತೀರಾ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಮಗ ಮದುವೆ ಆಗಿರುವ ಸುದ್ದಿಯನ್ನು ಕೂಡ ಸಮರ್ಥಿಸಿಕೊಂಡು ಅದಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ.

ನನ್ನ ಮಗ ಏನು ಹುಡುಗಿ ಅಲ್ಲ ಅವನು 9 ತಿಂಗಳ ಬಸುರಾಗಿರಲಿಲ್ಲ ಅದಕ್ಕಾಗಿ ನಾನು ಕದ್ದು ಮದುವೆ ಮಾಡದೆ ಎಂದು ಹೇಳಬೇಕಿಲ್ಲ. 600 ಸಿನಿಮಾಗಳನ್ನು ಮಾಡಿರುವಂತಹ ನಟಿ ನಾನು ಆದರೆ ನನ್ನ ಬಡತನದ ಬಗ್ಗೆ ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತದೆ. ಎಂತೆಂಥವರು ತಮ್ಮ ಮಕ್ಕಳ ಮದುವೆಗಳನ್ನು ಪ್ಯಾಲೇಸ್ ಅಲ್ಲಿ ಮಾಡುತ್ತಾರೆ. ಆದರೆ ನನಗೆ ಆ ದಿನಗಳಲ್ಲಿ ಅಷ್ಟು ಶಕ್ತಿ ಇರಲಿಲ್ಲ, ಚೈತನ್ಯ ಇರಲಿಲ್ಲ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಹಾಗಾಗಿ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ನನ್ನ ಮಗನ ಮದುವೆಯನ್ನು ಸರಳವಾಗಿ ಮಾಡಿಸಿದೆ. ಏಳು ಜನ ಕನ್ನಡಿಗರು ನನ್ನ ಮಗನ ಮದುವೆಗೆ ಬಂದಿದ್ದರು. ಏನು ಲೀಲಾವತಿಯವರೇ ಈ ರೀತಿ ಮದುವೆ ಮಾಡುತ್ತಿದ್ದೀರಾ ನಿಮಗೆ ಜನ ಸಿಗಲಿಲ್ಲವೇ ಎಂದು ಕೇಳುತ್ತಿದ್ದರು, ಅದಕ್ಕೂ ನಾನು ಉತ್ತರ ಕೊಡಲಿಲ್ಲ. ಮದುವೆ ವಿಚಾರ ಗೊತ್ತಾದರೆ ಅಂಕು ಡೊಂಕು ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿ ಅದನ್ನು ರಹಸ್ಯವಾಗಿ ಇಟ್ಟೆ.

ಈಗ ನೀಟಾಗಿ ಇದ್ದಾರೆ ಅಲ್ವಾ ಅಂಕುಡೊಂಕು ಇಲ್ಲದೆ ಸುಳ್ಳು ಕಳ್ಳತನ ಇಲ್ಲದೆ ನೀಟಾಗಿ ನೆಮ್ಮದಿಯಾಗಿ ಇದ್ದಾರೆ. ನನ್ನ ಮಗ ಸೊಸೆ ಹಾಗೂ ಮೊಮ್ಮಗನನ್ನು ಚೆನ್ನಾಗಿ ಇಟ್ಟಿದ್ದಾನೆ ಅವರು ಬಂಗಳೆಯಲ್ಲಿ ವಾಸಿಸುತ್ತಿದ್ದಾರೆ, ಆರಾಮಾಗಿದ್ದಾರೆ. ಅವರಿಗೇನು ಕೊರತೆ ಇರದಂತೆ ನೋಡಿಕೊಳ್ಳುತ್ತಿದ್ದಾನೆ ನನ್ನ ಮಗ. ಯಾರು ಬೆರಳು ತೋರಿಸುವ ರೀತಿ ನಾನು ಇಟ್ಟಿಲ್ಲ ಅವರನ್ನು ಚೆನ್ನಾಗಿ ಇಟ್ಟಿದ್ದೇನೆ.

ಈ ರೀತಿ ನಮ್ಮ ವೈಯಕ್ತಿಕ ವಿಚಾರವನ್ನು ಅಂತರಂಗದ ಸುದ್ದಿಯನ್ನು ಕೆಣಕುವಾಗ ಬಹಳ ನೋವಾಗುತ್ತದೆ, ನಮಗೆ ನೋವು ಕೊಡುವವರು ನರಕಕ್ಕೆ ಹೋಗುತ್ತಾರೆ ಎಂದು ನೊಂದುಕೊಂಡು ಹೇಳಿದ್ದಾರೆ. ಮಗನ ಮದುವೆ ಬಗ್ಗೆ ಅವರು ಹೇಳಿದ ಮಾತುಗಳನ್ನು ಕೇಳಲು ಮತ್ತು ಈ ವಿಚಾರದ ಬಗ್ಗೆ ವಿನೋದ್ ರಾಜ್ ಅವರು ಏನು ಹೇಳಿದರು ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]