ಬೆಲ್ಲ ಸಕ್ಕರೆ ಹಾಕದೆ ಮಕ್ಕಳ ಸರಿಯಾದ ಬೆಳವಣಿಗೆಗೆ ದೊಡ್ಡವರಿಗೆ ವಯಸ್ಸಾದವರಿಗೆ ಕುಡಿಯುವ ಜ್ಯೂಸ್.. - Karnataka's Best News Portal

ಬೆಲ್ಲ ಸಕ್ಕರೆ ಹಾಕದೆ ಮಕ್ಕಳ ಸರಿಯಾದ ಬೆಳವಣಿಗೆಗೆ ದೊಡ್ಡವರಿಗೆ ವಯಸ್ಸಾದವರಿಗೆ ಕುಡಿಯುವ ಜ್ಯೂಸ್..

ಸಕ್ಕರೆ ಹಾಕದೆ ಮಕ್ಕಳ ಸರಿಯಾದ ಬೆಳವಣಿಗೆಗೆ, ದೊಡ್ಡವರಿಗೆ,
ವಯಸ್ಸಾದವರಿಗೆ, ಕುಡಿಯುವ ಜ್ಯೂಸ್……||

WhatsApp Group Join Now
Telegram Group Join Now

ಮಕ್ಕಳಿಗೆ ದೊಡ್ಡವರಿಗೆ ವಯಸ್ಸಾದವರಿಗೆ ಒಟ್ಟಾರೆ ಮನೆಯಲ್ಲಿರು ವಂತಹ ಎಲ್ಲರಿಗೂ ಆರೋಗ್ಯ ಭರಿತವಾದ ಬೆಲ್ಲ ಸಕ್ಕರೆ ಹಾಕದೆ ಮಾಡಿದಂತಹ ಈ ರೆಸಿಪಿ ಇದನ್ನು ನೀವು ವಾರದಲ್ಲಿ ಎರಡು ಬಾರಿ ಕುಡಿದರೆ ನಮಗೆ ಮುಂದಕ್ಕೆ ಬರುವಂತಹ ಹಲವು ಕಾಯಿಲೆಗಳಿಂದ ನಾವು ದೂರ ಇರಬಹುದು. ಈ ಒಂದು ಜ್ಯೂಸ್ ರೆಸಿಪಿಯನ್ನು ಹೇಗೆ ಮಾಡುವುದು ಎಂದು ನೋಡೋಣ.

ಈಗ ಒಂದು ಮೂರು ಗ್ಲಾಸ್ ನಷ್ಟು ಜ್ಯೂಸ್ ಅನ್ನು ಮಾಡೋಣ ಇದಕ್ಕೆ 20 ಬಾದಾಮಿ ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿ ಕೊಂಡು ಇಟ್ಟಿರಬೇಕು. ಹಾಗೂ ಅದರ ಸಿಪ್ಪೆಯನ್ನು ತೆಗೆದು ಬೇಯಿಸಿಕೊಳ್ಳಬೇಕು ನಿಮಗೆ ಜೀರ್ಣ ಶಕ್ತಿ ಸರಿಯಾಗಿ ಇದೆ ಎಂದರೆ ನೀವು ಸಿಪ್ಪೆ ಸಮೇತ ಅದನ್ನು ಬೇಯಿಸಿಕೊಳ್ಳಬಹುದು ಹಾಗೂ ನೀವು ಮಕ್ಕಳಿಗೂ ಕೂಡ ಸಿಪ್ಪೆ ಸಮೇತ ಬೇಯಿಸಿ ಕೊಡಬಹುದು. ಆಗ ಏನು ತೆಗೆಯುವಂತಹ ಸಮಸ್ಯೆ ಇರುವುದಿಲ್ಲ.


ಬಾದಾಮಿ ಮಾತು ನಿವಾರಕ ಎಂದು ಹೇಳುತ್ತಾರೆ. ಮಾತಿನಲ್ಲಿ ದೋಷ ಇರುವವರಿಗೆ ಇದು ತುಂಬಾ ಒಳ್ಳೆಯದು. ಹಾಗೂ ಇದು ನರ ಮೆದುಳು ಚರ್ಮ ಹಾಗೂ ಕೂದಲಿಗೆ ಕೂಡ ಒಳ್ಳೆಯದು ವಯಸ್ಸಾದವರಿಗೆ, ಜಾಯಿಂಟ್ ಪೈನ್ ಅಂಥವರಿಗೂ ಕೂಡ ಇದು ತುಂಬಾ ಒಳ್ಳೆಯದಾಗು ತ್ತದೆ. ಆದ್ದರಿಂದಾಗಿ ನೀವು ದಿನಕ್ಕೆ 5 ರಿಂದ 6 ಬಾದಾಮಿಯನ್ನು ಉಪಯೋಗಿಸಿಕೊಳ್ಳಬಹುದು.

ತುಂಬಾ ಸುಸ್ತಾಗುತ್ತೆ ಹಾಗೂ ಮತ್ತೆ ಹೊರಗಡೆ ಹೋಗಿದಾಗ ಇಲ್ಲಿ ತುಂಬಾ ಸುಸ್ತಾಗುತ್ತದೆ, ಹೊಟ್ಟೆಯಲ್ಲಿ ಕೆಲವರಿಗೆ ತನಗೆ ತಾನೇ ಒಂದು ಸಂಕಟ ಆಗುತ್ತದೆ ಅಂತವರಿಗೂ ಕೂಡ ಇದು ತುಂಬಾ ಒಳ್ಳೆಯದು. ಬದಾಮಿಯ ಸಿಪ್ಪೆಯನ್ನು ತೆಗೆದು ಹಾಗೂ ಒಂದು 3 ರಿಂದ 4 ಬಾದಾಮಿ ಸಿಪ್ಪೆಯನ್ನು ಹಾಗೆ ಇಟ್ಟುಕೊಳ್ಳಬೇಕು. ಏಕೆಂದರೆ ಬಾದಾಮಿಯ ಸಿಪ್ಪೆಯಲ್ಲಿ ಅಧಿಕ ಗುಣಗಳಿದೆ.

ನಂತರ ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿಕೊಂಡು. 6 ಖರ್ಜೂರವನ್ನು ಸೇರಿಸಬೇಕು. ಮುಂಚೆಯೇ ತೊಳೆದು ಅದರ ಬೀಜವನ್ನು ತೆಗೆದು ಅದನ್ನು ಸಣ್ಣದಾಗಿ ಹೆಚ್ಚಿಕೊಂಡು ಇಟ್ಟಿಕೊಂಡಿರಬೇಕು. ಕರ್ಜೂರ ಅಸಿಡಿಟಿ, ಪಾದದಲ್ಲಿ ಉರಿ, ಜೀರ್ಣ ಶಕ್ತಿ ಕಡಿಮೆ ಇರುವವರಿಗೆ ಇದು ತುಂಬಾ ಒಳ್ಳೆಯದು. ಇದಕ್ಕೆ ಒಂದು ಗ್ಲಾಸ್ ಹಾಲನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಆದ ನಂತರ ಅದನ್ನು ಒಂದು ಬೌಲಿಗೆ ಹಾಕಿಕೊಳ್ಳಬೇಕು ನಂತರ ಅದೇ ಮಿಕ್ಸಿ ಜಾರಿಗೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಹಾಲು ಸೇರಿಸುವಾಗ ಇದಕ್ಕೆ ಕಾಯಿಸಿ ಆರಿಸಿರುವಂತಹ ಹಾಲನ್ನು ಉಪಯೋಗಿಸಿಕೊಳ್ಳಬೇಕು. ಅದು ಗಟ್ಟಿಯಾದರೆ ನೀವು ಹಾಲನ್ನು ಸೇರಿಸಿಕೊಳ್ಳಬಹುದು. ಈಗ ಇದು ಸಂಪೂರ್ಣವಾಗಿ ತಯಾರಾಗಿದೆ. ನೀವು ದಿನ ಕುಡಿಯಬಹುದು ಅಥವಾ ವಾರದಲ್ಲಿ 2 ದಿನ ಕೂಡ ಕುಡಿಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">