ಕುಂಭ ರಾಶಿ ಮೇ ಮಾಸ ಭವಿಷ್ಯ..ಇನ್ನೇನು ಆಗುತ್ತೆ ಅನ್ನೋದ್ರಲ್ಲೇ ಒಂದು ಟ್ವಿಸ್ಟ್ ಕಾದಿದೆ..ಮಿಸ್ ಮಾಡದೆ ನೋಡಿ

ಕುಂಭ ರಾಶಿ ಮೇ ಮಾಸ ಭವಿಷ್ಯ…..||

WhatsApp Group Join Now
Telegram Group Join Now

ಕುಂಭ ರಾಶಿಯವರಿಗೆ ಮೇ ತಿಂಗಳಿನಲ್ಲಿ ಯಾವ ರೀತಿಯಾಗಿ ಶುಭಫಲಗಳು ಇರುತ್ತದೆ? ಹಾಗೂ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ? ಯಾವ ರೀತಿಯ ಬದಲಾವಣೆಗಳು ಮೇ ತಿಂಗಳಿನಲ್ಲಿ ನಡೆಯುತ್ತದೆ? ಯಾವ ವಿಚಾರವಾಗಿ ಹೆಚ್ಚು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಕುಂಭ ರಾಶಿಯವರಿಗೆ ಸಾಡೇ ಸಾಥ್ ನ ತೀವ್ರತೆ ಅಂದರೆ ಪ್ರಖರತೆ ಯನ್ನು ನೀವೀಗಾಗಲೇ ಅನುಭವಿಸುತ್ತಿರುತ್ತೀರಿ. ಅದರಲ್ಲೂ ಜನ್ಮ ಶನಿ ಇದೊಂದು ವಿಚಿತ್ರವಾದ ಸಂಧಿಗ್ಧ ಪರಿಸ್ಥಿತಿ ಎಂದೇ ಹೇಳಬಹುದು. ಹಾಗಾದರೆ ಮೊದಲನೇಯದಾಗಿ ಕುಂಭ ರಾಶಿಯವರಿಗೆ ಮೇ ತಿಂಗಳು ಯಾವ ಒಂದು ವಿಚಾರವಾಗಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಮೊದಲನೆಯದಾಗಿ ಯಾವ ರೀತಿಯ ಶುಭ ಫಲಗಳನ್ನು ಪಡೆದುಕೊಳ್ಳುತ್ತೀರಿ ಎಂದು ನೋಡುವುದಾದರೆ.

ವಿಶೇಷವಾಗಿ ನಿಮ್ಮ ಎರಡನೇ ಮನೆಯಲ್ಲಿ ಶುಕ್ರ ಗ್ರಹ ಇರುತ್ತಾನೆ ಇದರಿಂದ 23ನೇ ತಾರೀಖಿನವರೆಗೆ ನಿಮಗೆ ಹಣಕಾಸಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಹಾಗೇನಾದರೂ ಸ್ವಲ್ಪ ಸಮಸ್ಯೆ ಗಳು ಎದುರಾದರೂ ಶುಕ್ರನಿಂದ ನಿಮಗೆ ಸ್ವಲ್ಪಮಟ್ಟಿಗೆ ಸಮಸ್ಯೆಗಳು ದೂರವಾಗುತ್ತದೆ. ಅದು ನಿಮ್ಮನ್ನು ರಕ್ಷಿಸುತ್ತದೆ ಎಂದೇ ಹೇಳಬಹುದು. ಕುಂಭ ರಾಶಿಗೆ ಮಿತ್ರನಾಗಿ ಉಚ್ಚ ರಾಶಿಯಲ್ಲಿ ಇರುವುದರಿಂದ ಸಾಕಷ್ಟು ದುಡ್ಡಿನ ಪರಿಹಾರಗಳನ್ನು ಪರಿಹರಿಸುತ್ತಾನೆ ಶುಕ್ರ.

ಒಂದು ಕಡೆ ಕೆಲವೊಂದಷ್ಟು ಹಣದ ವಿಚಾರವಾಗಿ ಖರ್ಚಾಗುತ್ತಿದ್ದರೆ ಒಂದು ಕಡೆ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ ಶುಕ್ರ ಎಂದೇ ಹೇಳಬಹುದು. ಹಾಗೆ ಬಾಕಿ ಇರುವ ಹಣಕಾಸುಗಳು ನಿಮಗೆ ಈ ಒಂದು ಸಮಯದಲ್ಲಿ ಬರುವ ಎಲ್ಲಾ ಸಾಧ್ಯತೆಗಳು ಕೂಡ ಇದೆ. ಹಾಗೆ ನೌಕರರಿಗೆ ಅವರ ವೇತನ ಹೆಚ್ಚಾಗುವ ಸಾಧ್ಯತೆಗಳು ಇದೆ. ಹಾಗೂ ವ್ಯಾಪಾರಿಗಳಿಗೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಾಭ ಉಂಟಾಗುವಂತದ್ದು.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಸಾಡೆ ಸಾತ್ ಇರುವುದರಿಂದ ಶುಕ್ರ ಕೆಲಸ ಮಾಡುವುದೇನು ನಿಲ್ಲಿಸುವು ದಿಲ್ಲ ಬದಲಿಗೆ ನಿಮಗೆ ಎಲ್ಲಾ ರೀತಿಯ ಲಾಭಗಳನ್ನು ಕೂಡ ಕೊಡುತ್ತಾನೆ. ವಿಶೇಷವಾಗಿ 15ನೇ ತಾರೀಖಿನವರೆಗೆ ರವಿ ನಿಮ್ಮ ಎಲ್ಲಾ ಭಾರಗಳನ್ನು ಹೊರುತ್ತಾನೆ. ಹಾಗೂ ಉನ್ನತ ಅಧಿಕಾರಿ ಹುದ್ದೆಯಲ್ಲಿರು ವವರಿಗೆ ಶುಕ್ರನಿಂದ ಸಾಕಷ್ಟು ಲಾಭಗಳೇ ಉಂಟಾಗುತ್ತದೆ. ಹಾಗೂ ಮಧ್ಯಮ ವರ್ಗದ ವ್ಯಕ್ತಿಗಳಿಗೂ ಕೂಡ ಉನ್ನತ ಲಾಭ ಸಿಗುತ್ತದೆ.

ಹಾಗೂ 15ನೇ ತಾರೀಖಿನವರೆಗೆ ನಿಮಗೆ ಯಾರಾದರೂ ಶತ್ರುಗಳಿದ್ದರೆ ಅವರನ್ನು ನಿಮ್ಮಿಂದ ದೂರ ಮಾಡುವಂತಹ ಕೆಲಸವನ್ನು ರವಿ ಮಾಡುತ್ತಾನೆ. ಕೆಲವೊಂದಷ್ಟು ಜನರಿಗೆ ಸಾಡೆ ಸಾತ್ ನ ಪ್ರಭಾವ ಬೀಳುವುದಿಲ್ಲ. ಜನ್ಮ ಜಾತಕದಲ್ಲಿ ಶನಿ ಬಲವಾಗಿದ್ದರೆ ನಿಮಗೆ ಯಾವುದೇ ಸಾಡೇಸಾತ್ ಪರಿಣಾಮವನ್ನು ಬೀರುವುದಿಲ್ಲ ಎಂದೇ ಹೇಳಬಹುದು. ಬದಲಿಗೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಉನ್ನತ ಲಾಭವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">