ತಾಯಿ ಕರುಮಾರಿಯಮ್ಮನ ಅನುಗ್ರಹದಿಂದ ಈ 4 ರಾಶಿಗಳಿಗೆ ಬಾರಿ ಧನಲಾಭ ಅದೃಷ್ಟ ಆರೋಗ್ಯದಲ್ಲಿ ಜಯ.ಈ ಅಮವಾಸ್ಯೆ ನಂತರ ಜೀವನವೇ ಬದಲಾಗಲಿದೆ.. - Karnataka's Best News Portal

ತಾಯಿ ಕರುಮಾರಿಯಮ್ಮನ ಅನುಗ್ರಹದಿಂದ ಈ 4 ರಾಶಿಗಳಿಗೆ ಬಾರಿ ಧನಲಾಭ ಅದೃಷ್ಟ ಆರೋಗ್ಯದಲ್ಲಿ ಜಯ.ಈ ಅಮವಾಸ್ಯೆ ನಂತರ ಜೀವನವೇ ಬದಲಾಗಲಿದೆ..

ಮೇಷ ರಾಶಿ:- ವಿಶೇಷವಾಗಿ ಈ ದಿನ ನಿಮ್ಮ ಕೋಪವನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಮಾತಿನಿಂದ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಆದಷ್ಟು ತಾಳ್ಮೆಯಿಂದ ಇರಬೇಕು. ಕೆಲಸ ಮಾಡುವಂತಹ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಷಭ ರಾಶಿ:- ಹಣದ ವಿಷಯದಲ್ಲಿ ಇಂದು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹೆಚ್ಚುವರಿ ಹಣದ ಖರ್ಚು ನಿಮಗೆ ತೊಂದರೆ ಯಲ್ಲಿ ಸಿಲುಕಿಸಬಹುದು. ಹೆಚ್ಚು ತಾಳ್ಮೆಯಿಂದ ಇರುವುದರಿಂದ ಮುಂದಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಪೋಷಕರ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ.

ಮಿಥುನ ರಾಶಿ:- ಕೆಲಸದ ವಿಷಯದಲ್ಲಿ ಈ ದಿನ ಬಹಳ ಶುಭ ದಿನವಾಗಿ ರುತ್ತದೆ. ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ. ನೀವು ಮಾಡುತ್ತಿರುವ ಕೆಲಸದ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಸಂತೋಷವಾಗಿ ಇರುತ್ತಾರೆ. ಕುಟುಂಬ ಜೀವನವು ಸಂತೋಷ ವಾಗಿರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30ರಿಂದ ರಾತ್ರಿ 9 ಗಂಟೆಯವರೆಗೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಕಟಕ ರಾಶಿ:- ಇಂದು ಹೊಸ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸ ಬಹುದು. ಶೀಘ್ರದಲ್ಲಿ ನಿಮ್ಮ ಮದುವೆ ಕೂಡ ನೆರವೇರಬಹುದು. ಮನೆಯ ವಾತಾವರಣ ಈ ದಿನ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧವು ಕೂಡ ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಚನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಿಗ್ಗೆ 7.30 ರಿಂದ 9:00 ವರೆಗೆ.

ಸಿಂಹ ರಾಶಿ:- ಈ ದಿನ ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಇಂದು ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ನಿಮ್ಮ ನಡವಳಿಕೆ ಉತ್ತಮವಾಗಿರುವಂತೆ ಪ್ರಯತ್ನಿಸಿ. ಈ ದಿನ ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ

ಕನ್ಯಾ ರಾಶಿ:- ಈ ದಿನ ಉದ್ಯಮಿಗಳು ಕೆಲವು ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಹಾಗೆಯೇ ಶೀಘ್ರದಲ್ಲಿಯೇ ನಿಮ್ಮ ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ಆದಷ್ಟು ದೂರವಿರಿ. ಮನೆಯ ವಾತಾವರಣ ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 8:00 ಗಂಟೆಯವರೆಗೆ.

ತುಲಾ ರಾಶಿ:- ನಿಮ್ಮ ದೊಡ್ಡ ಸಮಸ್ಯೆಗೆ ಈ ದಿನ ಪರಿಹಾರ ಸಿಗಬಹುದು. ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ನಿಮಗೆ ಉತ್ತಮವಾದ ನೌಕರಿ ಸಿಗುವ ಸಾಧ್ಯತೆ ಇರುತ್ತದೆ. ಯಾವುದೇ ವ್ಯಾಪಾರ ವ್ಯವಹಾರ ಮಾಡುವಂತಹ ಜನರು ಈ ದಿನ ಅವಸರದ ನಿರ್ಧಾರಗಳನ್ನು ತೆಗೆದು ಕೊಳ್ಳಬೇಡಿ. ಮನೆಯ ವಾತಾವರಣ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 7:30ರ ವರೆಗೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ವೃಶ್ಚಿಕ ರಾಶಿ:- ಇಂದು ಹಣದ ದೃಷ್ಟಿಯಿಂದ ಉತ್ತಮ ದಿನವಾಗಿರುತ್ತದೆ. ಈ ಹಿಂದೆ ಮಾಡಿದ ಸಾಲವನ್ನು ಮರುಪಾವತಿಸುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ಹಿಂದೆ ನಿಂತು ಹೋದಂತಹ ಎಲ್ಲಾ ಕೆಲಸಗಳನ್ನು ಕೂಡ ಪೂರ್ಣಗೊಳಿಸುವಂತಹ ಸಮಯ ಇದಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 6:30 ರಿಂದ ರಾತ್ರಿ 9 ಗಂಟೆಯವರೆಗೆ.

ಧನಸ್ಸು ರಾಶಿ:- ಈ ದಿನ ವ್ಯರ್ಥವಾಗಿ ಹಣವನ್ನು ಖರ್ಚು ಮಾಡಬೇಡಿ. ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವಂತಹ ಜನರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಕೆಲಸವನ್ನು ಪೂರ್ಣ ಗೊಳಿಸುವುದಕ್ಕೆ ಪ್ರಯತ್ನಿಸಿ. ಹಾಗೂ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6:00 ಯಿಂದ 9 ಗಂಟೆಯವರೆಗೆ.

ಮಕರ ರಾಶಿ:- ಇಂದು ನೀವು ಸಕಾರಾತ್ಮಕ ಭಾವನೆಯನ್ನು ಹೊಂದಿರು ತ್ತೀರಿ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುವುದಕ್ಕೆ ಪ್ರಯತ್ನ ಮಾಡಿ. ವ್ಯಾಪಾರಿಗಳು ಈ ದಿನ ಮಾಡುವ ಯಾವುದೇ ಕೆಲಸವನ್ನು ಅವಸರದಿಂದ ಮಾಡಬೇಡಿ. ನಿಮ್ಮ ಹಣಕಾಸಿನ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 2 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಕುಂಭ ರಾಶಿ:- ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಿನ ಪರಿಹಾರ ಸಿಗುತ್ತದೆ. ಹೊಸ ಕೆಲಸವನ್ನು ಮಾಡಬೇಕು ಎಂದು ಪ್ರಯತ್ನಿಸಿದರೆ ಇನ್ನು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಉದ್ಯೋಗಿಗಳು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಹಾಗೂ ನಿಮಗೆ ಎಲ್ಲಾ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 12:30 ವರೆಗೆ.

ಮೀನ ರಾಶಿ:- ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾ ಗುತ್ತದೆ. ವಿದ್ಯಾರ್ಥಿಗಳು ಈ ದಿನ ಹೆಚ್ಚಿನ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕಾಗುತ್ತದೆ. ಕೆಲಸ ಕಾರ್ಯಗಳು ಉತ್ತಮವಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯ ವರೆಗೆ.

[irp]


crossorigin="anonymous">