ಇಂದು ಭಯಂಕರ ಸೂರ್ಯಗ್ರಹಣ ಹಾಗೂ ಅಮವಾಸ್ಯೆ ಪ್ರತ್ಯಂಗೀರಾ ಅಮ್ಮನ ಅನುಗ್ರಹ ಈ ರಾಶಿಗಳ ಮೇಲೆ ಶತ್ರುಗಳಿಂದ ಮುಕ್ತಿ ಆರೋಗ್ಯ ವೃದ್ದಿ ಧನಲಾಭ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ಕಛೇರಿಯಲ್ಲಿ ವಹಿಸಿರುವ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಪೂರೈಸಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ಶುಭದಿನವಾಗಿರುತ್ತದೆ. ನಿಮ್ಮ ವ್ಯವಹಾರ ಕಬ್ಬಿಣಕ್ಕೆ ಸಂಬಂಧಿಸಿದರೆ ಇನ್ನು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಉಳಿಯುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಉತ್ತಮ ಸಮಯ – ಬೆಳಗ್ಗೆ 10:00 ರಿಂದ ಒಂದು 1:15 ರವರೆಗೆ.

ವೃಷಭ ರಾಶಿ:- ವ್ಯಾಪಾರಸ್ಥರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ಹಿಂದೆ ತೆಗೆದುಕೊಂಡ ಯಾವುದೋ ನಿರ್ಧಾರ ಎಂದು ಪ್ರಯೋಜನಕ್ಕೆ ಬರಲಿದೆ. ಕಛೇರಿಯಲ್ಲಿ ಎಲ್ಲರೊಡನೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುತ್ತದೆ. ಹೊಸ ಅಧ್ಯಯನವನ್ನು ಶುರು ಮಾಡಲು ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದರೆ ಈ ದಿನ ಒಳ್ಳೆಯದು. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಉತ್ತಮ ಸಮಯ – ಸಂಜೆ 6:45 ರಿಂದ ರಾತ್ರಿ 10:00 ರವರೆಗೆ.

ಮಿಥುನ ರಾಶಿ:- ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಕೋಪದಲ್ಲಿ ತಪ್ಪು ಪದಗಳ ಬಳಕೆ ಮಾಡುವುದನ್ನು ನಿಲ್ಲಿಸಿ. ಇಲ್ಲವಾದರೆ ಸಣ್ಣ ವಿಷಯಗಳು ಕೂಡ ದೊಡ್ಡ ಗೊಂದಲವಾಗಬಹುದು. ಹಣದ ವಿಷಯದಲ್ಲಿ ಇಂದಿನ ದಿನವು ನ್ಯಾಯಯುತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ವ್ಯವಹಾರವಿದ್ದರೂ ಇಂದು ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಉತ್ತಮ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:00 ರವರೆಗೆ.

ಕರ್ಕಾಟಕ ರಾಶಿ:- ಇಂದು ಯಾವುದೇ ವಿಚಾರಕ್ಕಾಗಿ ಮನೆಯಿಂದ ಹೊರಡಬೇಕಾದರೂ ತಂದೆ ತಾಯಿಗಳ ಆಶೀರ್ವಾದ ಪಡೆದುಕೊಂಡು ಹೊರಡಿ. ಅವರ ಆಶೀರ್ವಾದವು ನಿಮಗೆ ದೊಡ್ಡ ಪ್ರಯೋಜನಕಾರಿಯಾಗಿದೆ. ಕೆಲಸದ ವಿಚಾರವಾಗಿ ಹೇಳುವುದಾದರೆ ಇಂದು ಉದ್ಯೋಗದಲ್ಲಿ ಇರುವಂತಹ ಜನರಿಗೆ ಅದೃಷ್ಟದ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಉತ್ತಮ ಸಮಯ – ಬೆಳಗ್ಗೆ 8:45 ರಿಂದ 12:00ರವರೆಗೆ.

ಸಿಂಹ ರಾಶಿ:- ನಿಮ್ಮ ಅಧ್ಯಯನದ ಮೇಲೆ ಸಂಪೂರ್ಣ ಗಮನ ಹರಿಸಬೇಕು. ಈ ಸಮಯದಲ್ಲಿ ನಿಮ್ಮ ಅಧ್ಯಯನದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ನಿಮ್ಮ ಕನಸು ಕನಸಾಗಿಯೇ ಉಳಿಯುತ್ತದೆ. ಕೆಲಸದ ಸ್ಥಳದಲ್ಲಿ ಇಂದು ಕೆಲ ಪ್ರಮುಖ ಬದಲಾವಣೆಗಳಾಗುತ್ತವೆ. ವ್ಯಾಪಾರಸ್ಥರು ಲಾಭಗಳಿಸಲು ಬಹಳ ಕಷ್ಟಪಟ್ಟು ಓಡಾಡಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಉತ್ತಮ ಸಮಯ – ಸಂಜೆ 5:30 ರಿಂದ ರಾತ್ರಿ 8:45ವರೆಗೆ.

ಕನ್ಯಾ ರಾಶಿ:- ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಡಗಿನ ಸಂಬಂಧವು ಕೂಡ ಬಲವಾಗಿರುತ್ತದೆ. ವಿಶೇಷವಾಗಿ ನಿಮ್ಮ ಸಹೋದರಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಚಾರವಾಗಿ ಹೇಳುವುದಾದರೆ ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಹಣಕಾಸಿನ ನಿರ್ಧಾರ ಮಾಡುವಾಗ ಸ್ವಲ್ಪ ಯೋಚಿಸಿದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೂಡ ಕೊನೆಯಾಗುತ್ತದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಉತ್ತಮ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ತುಲಾ ರಾಶಿ:- ಕೆಲಸ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಛೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಮಾರ್ಗದರ್ಶನ ಹಾಗೂ ಬೆಂಬಲ ಇರುತ್ತದೆ. ನಿಮ್ಮ ಕಷ್ಟಕರ ಕೆಲಸಗಳನ್ನು ಇಂದು ಸುಲಭವಾಗಿ ಪೂರೈಸಬಹುದು. ಔಷಧಿ ಮಾಡುವವರಿಗೆ ಈ ದಿನ ಬಹಳ ಆರ್ಥಿಕ ಲಾಭವಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಉತ್ತಮ ಸಮಯ – ಬೆಳಿಗ್ಗೆ 7:30 ರಿಂದ 10:45 ರವರೆಗೆ.

ವೃಶ್ಚಿಕ ರಾಶಿ:- ಮನೆಯ ವಾತಾವರಣ ಉದ್ವಿಗ್ನವಾಗಿರುತ್ತದೆ. ನನ್ನ ಪುಟ್ಟ ವಿಚಾರಗಳಿಗೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಇದು ನೀವು ಯೋಚಿಸುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ತಾಳ್ಮೆ ಹಾಗೂ ಸಮಾಧಾನದಿಂದ ವರ್ತಿಸಿ. ನೀವು ಕೆಲಸ ಹುಡುಕುತ್ತಿದ್ದರೆ ಅಥವಾ ಬೇರೆ ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಈ ದಿನ ಶುಭ ಸುದ್ದಿ ಕೇಳುತ್ತೀರಿ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಉತ್ತಮ ಸಮಯ – ಸಂಜೆ 4:15 ರಿಂದ 7:30 ರವರೆಗೆ.

ಧನಸ್ಸು ರಾಶಿ:- ನೀವು ವ್ಯಾಪಾರ ಮಾಡುತ್ತಿದ್ದರೆ ಅಥವಾ ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಉದ್ಯೋಗಸ್ಥರಿಗೆ ಕೆಲಸದಲ್ಲಿ ದೊಡ್ಡ ಅಡೆತಡೆ ಉಂಟಾಗಬಹುದು. ಅದರ ಬಗ್ಗೆ ಹೆಚ್ಚಿನ ಚಿಂತೆ ಮಾಡಬೇಕಿಲ್ಲ, ತಕ್ಷಣವೇ ಅದು ಪರಿಹಾರ ಆಗುತ್ತದೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ. ಇಂದು ಯಾವುದೇ ಚಿಕ್ಕ ಕೆಲಸವನ್ನು ಕೂಡ ನಿರ್ಲಕ್ಷ ಮಾಡುವಂತಿಲ್ಲ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಉತ್ತಮ ಸಮಯ – ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 2:30 ವರೆಗೆ.

ಮಕರ ರಾಶಿ:- ಕೆಲಸದ ಬಗ್ಗೆ ಹೇಳುವುದಾದರೆ ಇಂದು ದಿನಪೂರ್ತಿ ಕೆಲಸದಲ್ಲಿ ಮುಳುಗಿರುತ್ತೀರಿ. ಅದು ಕೆಲಸವೇ ಆಗಿರಲಿ ವ್ಯವಹಾರವೇ ಆಗಿರಲಿ ಇಂದು ನೀವು ಹೆಚ್ಚಿನ ಜವಾಬ್ದಾರಿಯನ್ನು ಹೊರಲೇಬೇಕು. ಕಷ್ಟಪಟ್ಟು ಕೆಲಸ ಮಾಡಬೇಕಿರುತ್ತದೆ. ನೀವು ಒಬ್ಬಂಟಿಯಾಗಿದ್ದರೆ ಹೊಸ ಸಂಬಂಧವನ್ನು ಆರಂಭಿಸಲು ಉತ್ಸುಕರಾಗಬೇಡಿ. ನೀವು ಪ್ರೀತಿಯ ಪ್ರಸ್ತಾಪವನ್ನು ಪಡೆದರೆ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಉತ್ತಮ ಸಮಯ – ಬೆಳಿಗ್ಗೆ 6:15 ರಿಂದ 9:30ವರೆಗೆ.

ಕುಂಭ ರಾಶಿ:- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ತುಂಬಾ ಹಳೆಯ ಸಾಲವನ್ನು ಮರುಪಾವತಿ ಮಾಡುತ್ತೀರಿ. ಇಂದು ನೀವು ಚಿಂತೆ ಇಲ್ಲದ ಒಂದು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ತಂದೆಯ ಆರೋಗ್ಯದಲ್ಲಿ ದೊಡ್ಡ ಸುಧಾರಣೆಯನ್ನು ಕಾಣಬಹುದು. ನಿಮ್ಮ ಜೀವನ ಸಂಗಾತಿ ಜೊತೆ ಸಣ್ಣಪುಟ್ಟ ಮನಸ್ತಾಪ ಇದ್ದರೂ ಕೂಡ ಇಂದು ಎಲ್ಲಾ ಬಗೆಹರಿಯಲಿದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಉತ್ತಮ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:15 ರವರೆಗೆ.

ಮೀನಾ ರಾಶಿ:- ಇಂದು ನೀವು ಸೋಮಾರಿತನ ಮತ್ತು ಆಲಸ್ಯವನ್ನು ಅನುಭವಿಸಬಹುದು. ನೀವು ಪ್ರತಿದಿನ ಲಘು ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಉತ್ತಮ. ಇದು ನಿಮ್ಮನ್ನು ತಾಜಾತನದಿಂದ ಇರಿಸುತ್ತದೆ. ಕಚೇರಿಯಲ್ಲಿ ಎಲ್ಲರೊಂದಿಗೆ ನಗುನಗುತ್ತ ಇರಿ. ವ್ಯಾಪಾರ ವಹಿವಾಟು ಮಾಡುವವರಿಗೆ ಯಾವುದಾದರು ಅಡೆತಡೆ ಬರಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಉತ್ತಮ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 11:15 ರವರೆಗೆ.

By admin

Leave a Reply

Your email address will not be published. Required fields are marked *