ಇಂದು ಏಪ್ರಿಲ್ 22 ಶನಿವಾರ ಅಕ್ಷಯ ತೃತೀಯ ಮಹಾಲಕ್ಷ್ಮಿ ಅಮ್ಮನ ಅನುಗ್ರಹ ಈ 3 ರಾಶಿಗೆ ಸಂಪತ್ತಿನ ವೃದ್ದಿ..ಭೂ ವಿವಾದಗಳು ತೀರಿ ಶ್ರೀಮಂತರಾಗುವ ಯೋಗ ಹಣದ ಲಾಭ ಹೇಗಿದೆ ನೋಡಿ. - Karnataka's Best News Portal

ಇಂದು ಏಪ್ರಿಲ್ 22 ಶನಿವಾರ ಅಕ್ಷಯ ತೃತೀಯ ಮಹಾಲಕ್ಷ್ಮಿ ಅಮ್ಮನ ಅನುಗ್ರಹ ಈ 3 ರಾಶಿಗೆ ಸಂಪತ್ತಿನ ವೃದ್ದಿ..ಭೂ ವಿವಾದಗಳು ತೀರಿ ಶ್ರೀಮಂತರಾಗುವ ಯೋಗ ಹಣದ ಲಾಭ ಹೇಗಿದೆ ನೋಡಿ.

ಮೇಷ ರಾಶಿ :- ನೀವು ಇಂದು ಯಾವುದೇ ಒಪ್ಪಂದವನ್ನು ಅಂತ್ಯಗೊಳಿ ಸುವ ಮೊದಲು ಶ್ರದ್ಧೆಯಿಂದ ಕೆಲಸವನ್ನು ಮಾಡಿ. ಹಾಗೂ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು 10 ಬಾರಿ ಯೋಚಿಸಿ. ಈ ದಿನ ನಿಮ್ಮ ಮನೆಯ ವಾತಾವರಣವು ಸ್ವಲ್ಪ ಕಠಿಣವಾಗಿರುತ್ತದೆ. ನೀವು ಬುದ್ಧಿವಂತಿಕೆಯಿಂದ ಕೆಲಸವನ್ನು ಮಾಡಬೇಕಾಗುತ್ತದೆ. ಅದೃಷ್ಟ ಸಂಖ್ಯೆ- 2 ಅದೃಷ್ಟ ಬಣ್ಣ- ಕೇಸರಿ ಬಣ್ಣ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 2:30ರವರೆಗೆ.

ವೃಷಭ ರಾಶಿ :- ನಿಮಗೆ ಇಂದು ಮಿಶ್ರ ಫಲವಾದ ದಿನವಾಗಿರುತ್ತದೆ. ಮೊದಲನೆಯದಾಗಿ ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಾದರೆ ನೀವು ಇತ್ತೀಚಿಗಷ್ಟೇ ಉದ್ಯೋಗದ ಕೆಲಸಕ್ಕೆ ಸೇರಿದ್ದರೆ ನೀವು ಅಲ್ಲಿ ಹೆಚ್ಚು ವಾದ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನೀವು ಮಾಡುವ ಕೆಲಸದಲ್ಲಿ ಸಂಪೂರ್ಣ ಗಮನವನ್ನು ಹರಿಸಿ. ಅದೃಷ್ಟ ಸಂಖ್ಯೆ :- 1 ಅದೃಷ್ಟ ಬಣ್ಣ – ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 8:30 ರವರೆಗೆ.

ಮಿಥುನ ರಾಶಿ:- ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ಕ್ಷಣ ಬರುತ್ತದೆ. ಹಾಗೂ ನಿಮ್ಮ ಜೀವನದ ಭವಿಷ್ಯದ ಬಗ್ಗೆ ಚರ್ಚಿಸಬಹುದು. ಕೆಲಸದ ಯೋಜನೆಗಳ ಬಗ್ಗೆಯೂ ಚರ್ಚಿಸಬಹುದು. ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಕಾಣಬಹುದು ಹಾಗೂ ನೀವು ಮಾಡುವ ಒಂದೊಂದು ಕೆಲಸವೂ ಜಯಶಾಲಿಯಾಗುತ್ತದೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ.

ಕರ್ಕಾಟಕ ರಾಶಿ:- ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮನ್ನು ಉತ್ತಮ ಸ್ಥಾನಕ್ಕೆ ನಿಮ್ಮ ಗುರಿಯನ್ನು ತಲುಪಿಸಲು ಸೂಚಿಸುತ್ತದೆ ಹಾಗೂ ನಿಮ್ಮ ಮನೆಯ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಮನೆಯ ಹಿರಿಯರ ಜೊತೆ ನೀವು ಗೌರವದಿಂದ ಇರುತ್ತೀರಿ. ಹಾಗೂ ತಂದೆಯ ಲಾಭವನ್ನು ಪಡೆಯುತ್ತಿರಿ. ಹಾಗೂ ನೀವು ಮದ್ಯಪಾನ ಅಥವಾ ಧೂಮಪಾನದ ಅಭ್ಯಾಸದಲ್ಲಿದ್ದರೆ ಅದರಿಂದ ಆಚೆ ಬನ್ನಿ ಇಲ್ಲದಿದ್ದರೆ ಅದರಿಂದ ನಿಮ್ಮ ಅರೋಗ್ಯವನ್ನು ಕೆಡಿಸಿಕೊಳ್ಳುತ್ತೀರಿ. ಅದೃಷ್ಟ ಸಂಖ್ಯೆ:- 5 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ಡಿಸೆಂಬರ್ ಅಮವಾಸ್ಯೆ ರಾಶಿ ಭವಿಷ್ಯ ಎಚ್ಚರ ಎಚ್ಚರ ಈ ರಾಶಿಯವರಿಗೆ ಕಂಟಕ ಶುರುವಾಗಲಿದೆ...

ಸಿಂಹ ರಾಶಿ:- ನೀವು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತೀರಾ. ಹಾಗೂ ನೀವು ಮಾಡುವ ಕೆಲಸದಲ್ಲಿ ಗಂಭೀರತೆಯಿಂದ ಕೆಲಸ ಮಾಡಲು ಯೋಚಿಸುತ್ತೀರಿ. ವಿಶೇಷವಾಗಿ ನಿಮ್ಮ ಬಾಸ್ ನಿಮಗೆ ಪ್ರಮುಖವಾದ ಕೆಲಸವನ್ನು ನೀಡಬಹುದು. ಹಾಗೂ ಈಗ ಕೊಟ್ಟಿರುವ ನಿಮ್ಮ ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00ಯವರೆಗೆ.

ಕನ್ಯಾ ರಾಶಿ:- ಇಂದು ನೀವು ಮಾಡುತ್ತಿರುವ ಕೆಲಸಗಳಲ್ಲಿ ಜವಾಬ್ದಾರಿ ಇರುತ್ತದೆ. ಹಾಗೂ ನೀವು ಕಚೇರಿಯಲ್ಲಿ ಕೆಲಸ ಮಾಡುವಾಗ ಜವಾಬ್ದಾರಿಯಿಂದ ಕೆಲಸಗಳನ್ನು ನಿರ್ವಹಿಸುತ್ತೀರ. ಹಾಗೂ ನಿಮ್ಮ ಜವಾಬ್ದಾರಿಗಳು ಕೂಡ ಹೆಚ್ಚಾಗುತ್ತದೆ ಹಾಗೂ ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೀಗಾಗಿ ನಿಮ್ಮ ಎಲ್ಲಾ ಕಾರ್ಯಗಳು ಕೂಡ ಸಂಪೂರ್ಣವಾಗಿ ನಡೆಯುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:30 ರವರೆಗೆ.

ತುಲಾ ರಾಶಿ:- ಇಂದು ನಿಮ್ಮ ಮನೆಯ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಹಾಗೂ ಇಂದು ನೀವು ನಿಮ್ಮ ಕುಟುಂಬದ ಜೊತೆ ಸಮಯವನ್ನು ಕಳೆಯಲು ಉತ್ತಮ ಸಮಯವಾಗಿರುತ್ತದೆ. ಹಾಗೂ ಇಂದು ನಿಮಗೆ ಹೆಚ್ಚಾಗಿ ಖರ್ಚು ಇರುತ್ತದೆ. ನಿಮ್ಮಗೆ ಇಷ್ಟವಿಲ್ಲದಿದ್ದರೂ ಅದಕ್ಕೆ ಖರ್ಚು ಮಾಡುವ ಪರಿಸ್ಥಿತಿಯಿಂದಾಗಿರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12:00 ವರೆಗೆ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ವೃಶ್ಚಿಕ ರಾಶಿ:- ಇಂದು ನೀವು ಒಳ್ಳೆಯ ವಿಷಯಗಳನ್ನು ಕೇಳಬಹುದು. ಹಾಗೂ ನಿಮ್ಮ ಮನೆಯ ಮಕ್ಕಳ ಜೀವನದಲ್ಲಿ ಒಂದು ಒಳ್ಳೆಯ ವಿಷಯವನ್ನು ಕೇಳಬಹುದು. ಹಾಗೂ ಅವರ ಓದಿನ ವಿಷಯಗಳು ನಿಮಗೆ ಕೇಳಿಬರುತ್ತದೆ. ಹಾಗೂ ಇಂದು ಕೆಲಸ ಮಾಡುವವರಿಗೆ ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಮಾರ್ಗದರ್ಶನ ಸಿಗುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಧನಸ್ಸು ರಾಶಿ:- ದುಡಿಮೆಗೆ ತಕ್ಕಂತ ಪ್ರತಿಫಲವಿದೆ ಹಾಗೂ ದೇವರ ದರ್ಶನದ ಅದೃಷ್ಟವಿದೆ. ಹಾಗೂ ಹಿರಿಯರಿಗೆ ಮನಸ್ಸು ಶಾಂತಿ ನೀಡಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಗಳ ಅದೃಷ್ಟವಿದೆ ಹಾಗೂ ಬಂದಿರುವಂತಹ ಅದೃಷ್ಟವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಲಿದೆ. ಅದೃಷ್ಟ ಸಂಖ್ಯೆ – 2ಅದೃಷ್ಟ ಸಮಯ – ಕೇಸರಿ ಬಣ್ಣ ಸಮಯ – ಮಧ್ಯಾಹ್ನ 4:00 ಯಿಂದ ರಾತ್ರಿ 8 ಗಂಟೆಯವರೆಗೆ.

ಮಕರ ರಾಶಿ:- ಇಂದು ನೀವು ಬೇಡವಾದoತಹ ವಿಷಯಗಳನ್ನು ತಲೆಗೆ ಹಚ್ಚಿಕೊಂಡು ತಲೆಯನ್ನು ಕೆಡಿಸಿಕೊಳ್ಳುತ್ತಿರ. ಹಾಗೂ ಅದರ ಬಗ್ಗೆ ಚಿಂತೆ ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಮತ್ತು ಆರೋಗ್ಯವನ್ನು ಕೆಡಿಸಿ ಕೊಡುತ್ತೀರ. ಬೇರೆಯವರಿಗೆ ಸಹಾಯ ಮಾಡಿ ಹಾಗೂ ಕಷ್ಟಗಳ ಹೋರಾಟಗಳ ನಡುವೆ ನಿಮ್ಮ ಸಾಧನೆಗಳ ಗುರಿಯನ್ನು ಮುಟ್ಟಿ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

See also  ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ಕುಂಭ ರಾಶಿ:- ಇಂದು ನಿಮಗೆ ನೀವು ಯಾವುದೇ ಸ್ಪರ್ಧಾರ್ಥಕ ವಿಷಯದ ಪರೀಕ್ಷೆಯನ್ನು ಸ್ಪರ್ಧಿಸಲು ನಿಮಗೆ ಅವಕಾಶಗಳು ಸಿಗುತ್ತದೆ. ಹಾಗೂ ನಿಮಗೆ ಅದರಲ್ಲಿ ಜಯವಾಗಲಿದೆ. ಮತ್ತು ಉದ್ಯೋಗ ಮತ್ತು ಕೆಲಸಗಳ ವಿಷಯದಲ್ಲಿ ನೀವು ಸಂಬಂಧಿಕರಾಗಿರುತ್ತೀರ. ಹಾಗೂ ನೀವು ಅದನ್ನು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ಗಂಟೆಯವರೆಗೆ.

ಮೀನ ರಾಶಿ :- ಇಂದು ನೀವು ಆಹಾರ ಹಾಗೂ ಪಾನಿಯ ಪದಾರ್ಥಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯನ್ನು ವಹಿಸಿ. ಮಸಾಲೆಯುಕ್ತ ಹಾಗೂ ತಂಪಾದ ಪದಾರ್ಥಗಳು ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಹುದು. ಆದ್ದರಿಂದ ಇದನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆ.

[irp]