ಮನೆಯಲ್ಲಿ ಇರುವ ಕೇವಲ ಮೂರು ಪದಾರ್ಥಗಳಿಂದ ಸೂಪರ್ ಆಗಿ ಐಸ್ ಕ್ರೀಮ್ ರೆಡಿ ಮಾಡಿ - Karnataka's Best News Portal

ಮನೆಯಲ್ಲಿ ಇರುವ ಕೇವಲ ಮೂರು ಪದಾರ್ಥಗಳಿಂದ ಸೂಪರ್ ಆಗಿ ಐಸ್ ಕ್ರೀಮ್ ರೆಡಿ ಮಾಡಿ

ಮನೆಯಲ್ಲೇ ಇರುವ ಕೇವಲ ಮೂರು ಪದಾರ್ಥ ಉಪಯೋಗಿಸಿ ಸೂಪರ್ ಆಗಿ ಐಸ್ ಕ್ರೀಮ್ ರೆಡಿ ಮಾಡಿ……!!

ಬೇಸಿಗೆ ಸಮಯದಲ್ಲಿ ವಾತಾವರಣ ಅಷ್ಟಾಗಿ ಚೆನ್ನಾಗಿರುವುದಿಲ್ಲ ಅದಕ್ಕಾಗಿ ಆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಇಷ್ಟಪಡುತ್ತಾರೆ. ತಣ್ಣಗಿರುವಂತಹ ಜ್ಯೂಸ್ ಹಣ್ಣುಗಳು ಹಾಗೂ ಐಸ್ ಕ್ರೀಮ್ ಸೇವನೆ ಮಾಡುವುದಕ್ಕೆ ಪ್ರತಿಯೊಬ್ಬರು ಇಷ್ಟಪಡುತ್ತಾರೆ.

ಹಾಗಾದರೆ ಈ ದಿನ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಐಸ್ ಕ್ರೀಮ್ ತಯಾರಿಸ ಬಹುದು ಹಾಗೂ ಶುದ್ಧವಾಗಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಉಪಯೋಗಿಸದೆ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೀವೇ ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಬಹುದು ಈ ವಿಷಯವಾಗಿ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.


ಮನೆಯಲ್ಲಿ ಮಕ್ಕಳಿಗೆ ಐಸ್ ಕ್ರೀಮ್ ತೆಗೆದುಕೊಡಲು ಪ್ರತಿಯೊಬ್ಬರೂ ಕೂಡ ಹಿಂಜರಿಯುತ್ತಾರೆ. ಏಕೆ ಎಂದರೆ ಅಂಗಡಿಗಳಲ್ಲಿ ಮಾರಾಟ ಮಾಡುವಂತಹ ಐಸ್ ಕ್ರೀಮ್ ಗಳಿಗೆ ಕೆಲವೊಂದಷ್ಟು ಬೇರೆ ಪದಾರ್ಥ ಗಳನ್ನು ಹಾಕಿರುತ್ತಾರೆ ಹಾಗೂ ಸ್ವಚ್ಛವಾಗಿ ಮಾಡಿರುವುದಿಲ್ಲ ಆದ್ದರಿಂದ ಮಕ್ಕಳಿಗೆ ಅನಾರೋಗ್ಯ ಉಂಟಾಗಬಹುದು ಎಂದು ಹೆಚ್ಚಿನ ಜನ ಹೊರಗಡೆ ಪದಾರ್ಥಗಳನ್ನು ಕೊಡಲು ಭಯಪಡುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿ.

ನೀವೇ ನಿಮ್ಮ ಮನೆಯಲ್ಲಿ ಐಸ್ ಕ್ರೀಮ್ ಸುಲಭವಾಗಿ ತಯಾರಿಸ ಬಹುದು. ಹೌದು ನಿಮ್ಮ ಮನೆಯಲ್ಲಿ ಇರುವಂತಹ ಕೇವಲ ಮೂರೇ ಮೂರು ಪದಾರ್ಥದಿಂದ ನಿಮ್ಮ ಮನೆಯಲ್ಲಿ ಐಸ್ ಕ್ರೀಮ್ ಮಾಡಬಹುದು ಹಾಗಾದರೆ ಅದನ್ನು ಹೇಗೆ ಮಾಡುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ದಿನ ತಿಳಿಯೋಣ.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಮೊದಲು ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ಗಟ್ಟಿ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು ನಂತರ ಅದರಲ್ಲಿ ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕಾನ್ಫ್ಲೋರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಅದನ್ನು ಕುದಿಯುತ್ತಿ ರುವಂತಹ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಅದಕ್ಕೆ ಎಷ್ಟು ಸಕ್ಕರೆ ಬೇಕೋ ಅಷ್ಟ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.

ಆನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಒಮ್ಮೆ ರುಬ್ಬಿ ಅದನ್ನು ಒಂದು ಪಾತ್ರೆಯಲ್ಲಿ ಇಟ್ಟು ಎರಡು ಗಂಟೆಗಳ ಕಾಲ ಫ್ರೀಜರ್ ನಲ್ಲಿ ಇಡಬೇಕು ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ಅದಕ್ಕೆ ವೆನಿಲಾ ಎಸೆನ್ಸ್ ಅನ್ನು ಹಾಕಿ ರುಬ್ಬಿ ನಂತರ ಅದನ್ನು ಫ್ರೀಜರ್ ನಲ್ಲಿ ಇಡಬೇಕು ಈ ರೀತಿ ಮಾಡುವುದರಿಂದ ನಿಮಗೆ ಶುದ್ಧವಾದoತಹ ರುಚಿಕರವಾದಂತಹ ಐಸ್ ಕ್ರೀಮ್ ರೆಡಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.