ಸಹಾಯ ಮಾಡಿದವರನ್ನೇ ಮರೆಯುವ ಈ ಕಾಲದಲ್ಲಿ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ…..?
ಮೊಹಮ್ಮದ್ ಆರಿಫ್ ಮೂಲತಃ UP ಯ ಅಮೇಥಿ ಯವನು 2022 ರ ಆಗಸ್ಟ್ ನಲ್ಲಿ ಎಂದಿನಂತೆ ಈಗ ತನ್ನ ಹೊಲದ ಕಡೆ ಹೋಗಿದಾಗ ಅಲ್ಲಿ ಬದುವಿನ ಮೇಲೆ ದೊಡ್ಡ ಗಾತ್ರದ ಕೊಕ್ಕರೆ ಜಾತಿಗೆ ಸೇರಿದಂತಹ ಈ ಪಕ್ಷಿಯು ಪ್ರಜ್ಞೆ ಇಲ್ಲದೆ ಬಿದ್ದಿತ್ತು. ಕರೆಂಟ್ ಶಾಕ್ ಗೆ ಒಳಗಾಗಿಯೋ ಅಥವಾ
ಯಾವುದೋ ಜೀವಿಯ ದಾಳಿಗೆ ಸಿಲುಕಿ ಇದು ಸತ್ತು ಹೋಗಿರಬಹುದು ಎಂದು ಭಾವಿಸಿದಂತಹ ಆರಿಫ್. ಅದನ್ನು ಎತ್ತಿ ಬೇರೆಡೆಗೆ ಸಾಗಿಸೋಣ ಎಂದು ಅದರ ಬಳಿಗೆ ಧಾವಿಸಿ ಬಂದು ನೋಡಿದಾಗ ಆದರೆ ಹೃದಯ ಇನ್ನೂ ಬಡಿದುಕೊಳ್ಳುತ್ತಿತ್ತು. ಅದು ಇನ್ನು ಬದುಕಿದೆ ಎಂದು ಆರಿಫ್ ಗೆ ತಿಳಿಯಿತು. ಆದರೆ ಇದು ಮೂರ್ಛೆ ಹೋಗಲು ಕಾರಣ ಏನು ಎಂದು ಆರಿಫ್ ಚಿಂತಿಸಿದ.
ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರ ಒಂದು ಕಾಲಿಗೆ ಗಂಭೀರ ವಾದಂತಹ ಪೆಟ್ಟು ತಗಲಿ ಆ ನೋವಿನ ಬಾಧೆ ತಾಳಲಾರದೆ ಅದು ವಿಲ ವಿಲ ಒದ್ದಾಡಿ ಮೂರ್ಚೆ ಹೋಗಿತ್ತು. ಯಾವುದೋ ಕಾರಣದಿಂದ ಏಟು ಮಾಡಿಕೊಂಡಿದ್ದಂತಹ ಅದು ನೋವು ಸಹಿಸಲಾರದೆ ಅಲ್ಲಿ ಎಚ್ಚರ ತಪ್ಪಿ ಮಲಗಿತ್ತು. ಇದನ್ನು ಕೊಂಡೊಯ್ದು ಹಾರೈಕೆ ಮಾಡಿದರೆ ಇದು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು
ಅರಿತಿದ್ದಂತಹ ಆರಿಫ್ ಅದನ್ನು ತನ್ನ ಬೈಕ್ ಮೇಲೆ ಸೂಕ್ಷ್ಮವಾಗಿ ಕೂರಿಸಿ ಕೊಂಡು ಮನೆ ಕಡೆಗೆ ಹೊರಟ. ಮನೆಗೆ ಬಂದವನೇ ಆ ಪಕ್ಷಿಯಲ್ಲಿ ಆಗಿದ್ದಂತಹ ಗಾಯವನ್ನು ಚೆನ್ನಾಗಿ ಒರೆಸಿ ಬಟ್ಟೆಯಿಂದ ಅದನ್ನು ಬಿಗಿದ ಮನುಷ್ಯರಿಗೆ ಬಳಸಿದಂತಹ ಔಷಧಿಗಳನ್ನು ಬಳಸಿದರೆ ಅದಕ್ಕೆ ಏನಾದರೂ ಹೆಚ್ಚು ಕಮ್ಮಿ ಆಗಬಹುದು ಎಂಬ ಭಯದಿಂದ ಅದಕ್ಕೆ ಪ್ರಕೃತಿ ಚಿಕಿತ್ಸೆ ನೀಡಲು ಆರಿಫ್ ಮುಂದಾದ.
ಅದು ಸ್ವಲ್ಪ ಚೇತರಿಸಿಕೊಂಡು ಕಣ್ಣು ಬಿಟ್ಟ ತಕ್ಷಣ ಅದಕ್ಕೆ ಕುಡಿಯಲು ಶುದ್ಧ ನೀರನ್ನು ನೀಡಿದ. ನೀರು ಕುಡಿದ ಅದು ಮತ್ತೆ ವಿಶ್ರಾಂತಿಗೆ ಹೊರಳಿತು ಇತ್ತ ಕಾಲಿಗೆ ಕಟ್ಟಿದಂತಹ ಪಟ್ಟಿಯ ಸಹಾಯದಿಂದಾಗಿ ಮೂರ್ನಾಲ್ಕು ದಿನಗಳ ಬಳಿಕ ನಿಧಾನವಾಗಿ ಎದ್ದು ಜಿಗಿಯಲು ಅದು ಶುರು ಮಾಡಿತು. ಆನಂತರ ಆರಿಫ್ ಸೇವಿಸುತ್ತಿದ್ದಂತಹ ಆಹಾರವನ್ನು ಕೊಡುತ್ತಿದ್ದ ಅದನ್ನು ತಿನ್ನಲು ಶುರು ಮಾಡಿತು.
ಹೀಗೆ ಆರು ದಿನದ ಬಳಿಕ ತನಗೆ ತಾನೇ ಎದ್ದು ಜಿಗಿಯಲು ಶುರು ಮಾಡಿತು. ಅದರ ಕಾಲಿಗೆ ಪೆಟ್ಟಾದ ಕಾರಣ ಅದು ತನ್ನ ಕಾಲನ್ನು ಸಂಪೂರ್ಣವಾಗಿ ನೆಲದ ಮೇಲೆ ಇಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಆರೀಫ್ ಅದರ ಕಾಲಿಗೆ ಬಿದ್ದಂತಹ ಪೆಟ್ಟನ್ನು ಸ್ವಚ್ಛ ಮಾಡಿ ಅದನ್ನು ಜೋಪಾನವಾಗಿ ಗುಣವಾಗುವಂತೆ ನೋಡಿಕೊಳ್ಳುತ್ತಿದ್ದ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.