ಗೊಮ್ಮಟೇಶ್ಚರ ಬೆತ್ತಲಾಗಿರುವುದು ಯಾಕೆ ಗೊತ್ತಾ ? ಗೊಮ್ಮಟೇಶ್ವರನ ಬಗ್ಗೆ ನೀವು ತಿಳಿಯದ ಸತ್ಯ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಗೊಮ್ಮಟೇಶ್ವರ ಬೆತ್ತಲಾಗಿರುವುದು ಯಾಕೆ ಗೊತ್ತಾ……?

ಗೊಮ್ಮಟೇಶ್ವರನನ್ನು ಬಾಹುಬಲಿ ಎಂದು ಸಹ ಕರೆಯುತ್ತಾರೆ. ಜೈನ ಗ್ರಂಥಗಳ ಪ್ರಕಾರ ಇಕ್ಷ್ವಾಕು ರಾಜವಂಶದ ವೃಷಭನಾಥ ಮತ್ತು ಸುನಂದಾಗೆ ಗೊಮ್ಮಟೇಶ್ವರ ಜನಿಸುತ್ತಾನೆ. ಇದೇ ರೀತಿ ಗೊಮ್ಮಟೇಶ್ವ ರನ ತಾಯಿ ಸುನಂದ ಒಟ್ಟಾರೆಯಾಗಿ ನೂರು ಜನ ಮಕ್ಕಳಿಗೆ ಜನ್ಮವನ್ನು ನೀಡುತ್ತಾಳೆ. ಅದರಲ್ಲಿ ಭರತ ಚಕ್ರವರ್ತಿ ದೊಡ್ಡವನು. ಗೊಮ್ಮಟೇಶ್ವರ ಅಂದರೆ ಬಾಹುಬಲಿ ಅವನ ತಮ್ಮನಾಗಿದ್ದ.

ಆದರೆ ಗೊಮ್ಮಟೇಶ್ವರ ವೈದ್ಯಕೀಯ, ಬಿಲ್ಲುಗಾರಿಕೆ, ಪುಷ್ಪ ಕೃಷಿ, ಹೀಗೆ ಯುದ್ಧಕ್ಕೆ ಸಂಬಂಧಿಸಿದಂತಹ ವಿದ್ಯೆಗಳೆಲ್ಲವನ್ನು ಸಹ ಕಲಿತು ಗುರುಗಳು ಕಲಿಸಿದಂತಹ ಶಾಸ್ತ್ರಗಳೆಲ್ಲವನ್ನು ಸಹ ಕಲಿತು ಅದೆಲ್ಲದರಲ್ಲಿಯೂ ನಿಪುಣನಾಗಿದ್ದ. ದಿನ ಕಳೆದಂತೆ ವೃಷಭನಾಥನಿಗೆ ಅಂದರೆ ಗೊಮ್ಮಟೇಶ್ವ ರನ ತಂದೆಗೆ ವಯಸ್ಸಾಗುತ್ತಾ ಹೋಗುತ್ತದೆ. ಜೊತೆಗೆ ವೃಷಭನಾಥ ಸನ್ಯಾಸಿಯಾಗಲು ತೀರ್ಮಾನ ಮಾಡುತ್ತಾನೆ. ಇದರಿಂದ ತನ್ನ ಇಡೀ ರಾಜ್ಯವನ್ನು ತನ್ನ ನೂರು ಮಕ್ಕಳಿಗೆ ಸಮಾನವಾಗಿ ಹಂಚುತ್ತಾನೆ.

ಭರತನಿಗೆ ಅಯೋಧ್ಯೆ ರಾಜ್ಯವನ್ನು ಗೊಮ್ಮಟೇಶ್ವರನಿಗೆ ಆಸ್ಮಕ ರಾಜ್ಯ ವನ್ನು ನೀಡುತ್ತಾನೆ. ಇದರ ನಡುವೆ ಭರತನಿಗೆ ರತ್ನಚಕ್ರ ಎಂಬ ದೈವಿಕ ಚಕ್ರ ಸಹ ದೊರೆಯುತ್ತದೆ. ಇದು ದೊರೆತ ನಂತರ ಭರತ ಚಕ್ರವರ್ತಿಗೆ ಧುರಾಸೆ ಹುಟ್ಟುತ್ತದೆ. ನಾನು ರಾಜರ ರಾಜ ಎಂದು ಕರೆಸಿಕೊಳ್ಳಬೇಕು ಎಂದು ಬೇರೆ ರಾಜ್ಯಗಳನ್ನು ಸಹ ತನ್ನ ಕೈವಶ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ.

ನಂತರ ಆ ರತ್ನ ಚಕ್ರವನ್ನು ಹಿಡಿದು ಭೂಮಿಯನ್ನೆಲ್ಲಾ ಸಂಚರಿಸಿ ಪ್ರತಿ ರಾಜ್ಯವನ್ನು ವಶಪಡಿಸಿಕೊಂಡು ಕೊನೆಗೆ ತನ್ನ ರಾಜ್ಯವಾದಂತಹ ಅಯೋಧ್ಯೆಗೆ ಬರುತ್ತಾನೆ. ಆದರೆ ಆ ರತ್ನ ಚಕ್ರವು ಅರಮನೆಯ ಬಾಗಿಲ ಬಳಿಯೇ ನಿಂತುಬಿಡುತ್ತದೆ. ಇದರಿಂದ ಆಶ್ಚರ್ಯಪಟ್ಟಂತಹ ಭರತ ರತ್ನ ಚಕ್ರವು ದ್ವಾರದಲ್ಲಿಯೇ ನಿಂತಿದೆ ಎಂದರೆ ಅದರ ಅರ್ಥ ನನ್ನನ್ನು ಇನ್ನು ಕೆಲವರು ಚಕ್ರವರ್ತಿಯಾಗಿ ಸ್ವೀಕರಿಸಿಲ್ಲ ಎಂದು ಅಂದುಕೊಳ್ಳುತ್ತಾನೆ.

ಆಗ ಹಿರಿಯರೊಬ್ಬರು ಮಂತ್ರಿ ಬಂದು ನಿಮ್ಮ ಸ್ವಂತ ತಮ್ಮಂದಿರೇ ನಿಮ್ಮನ್ನು ರಾಜರ ರಾಜ ಎಂದು ಒಪ್ಪಿಕೊಂಡಿಲ್ಲ ಎಂದು ಹೇಳಿದಾಗ ಭರತ ತನ್ನ ಸಹೋದರರಿಗೆ ನಿಮ್ಮ ರಾಜ್ಯಗಳೆಲ್ಲವನ್ನು ಸಹ ನನಗೆ ಒಪ್ಪಿಸಬೇಕು. ನನ್ನನ್ನು ನಿಮ್ಮ ರಾಜನನ್ನಾಗಿ ಸ್ವೀಕರಿಸಬೇಕು ಎಂದು ಆದೇಶ ಪತ್ರವನ್ನು ಕಳಿಸಿದಾಗ ಅಣ್ಣನ ಕೋರಿಕೆಯನ್ನು ಧಿಕ್ಕರಿಸ ಬಾರದು ಎಂದು ಅವನ ಎಲ್ಲ ಸಹೋದರರು ಭರತನಿಗೆ ಅವರ ರಾಜ್ಯಗಳನ್ನು ಒಪ್ಪಿಸಿ ಅವರನ್ನು ತಮ್ಮ ರಾಜನನ್ನಾಗಿ ಸ್ವೀಕರಿಸುತ್ತಾರೆ.

ಆದರೆ ಒಬ್ಬನನ್ನು ಮಾತ್ರ ಬಿಟ್ಟು ಅವನೇ ಬಾಹುಬಲಿ. ಅಂದರೆ ಗೊಮ್ಮಟೇಶ್ವರ ಹೌದು ತನ್ನ ಅಣ್ಣನ ಪತ್ರವನ್ನು ನಿರಾಕರಿಸಿ ನಾನು ಭರತನನ್ನು ನನ್ನ ಅಣ್ಣ ಎಂದು ಗೌರವವನ್ನು ಕೊಡುತ್ತೇನೆ. ಆದರೆ ನನ್ನ ಪ್ರಭು ಎಂದಲ್ಲ! ಎಂಬ ಘೋಷಣೆಯನ್ನು ಮಾಡುತ್ತಾನೆ. ಇದರಿಂದ ಕೋಪಗೊಂಡಂತಹ ಭರತ ಬಾಹುಬಲಿಯನ್ನು ಯುದ್ಧಕ್ಕೆ ಆಹ್ವಾನ ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *