ಹುಷಾರ್ ಧರ್ಮಸ್ಥಳದಲ್ಲಿ ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ…!!
ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಥಳ ಎಂಬುದು ಭಕ್ತರ ನಂಬಿಕೆ. ಇಲ್ಲಿ ಸಾಕ್ಷಾತ್ ಪರಮೇಶ್ವರನೇ ನೆಲೆಸಿದ್ದಾನೆ ಎಂದು ಕೂಡ ಹೇಳುತ್ತಾರೆ. ಇದನ್ನು ಶ್ರೀ ಮಂಜುನಾಥನ ಆವಸ್ಥಾನ ಎಂದು ಸಹ ನಂಬಲಾಗಿದೆ. ಈ ಪವಿತ್ರ ದೇಗುಲವು ನೇತ್ರಾವತಿ ನದಿಯ ದಂಡೆಯಲ್ಲಿ ಇದೆ. ಇದು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಅವನ ಭಕ್ತರು ನಂಬಿದ್ದಾರೆ.
ಅಷ್ಟು ಮಾತ್ರವಲ್ಲದೆ ಶಿವ ಭಕ್ತರ ನೆಚ್ಚಿನ ಸ್ಥಳವು ಇದಾಗಿದೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನೋಡುವ ಆಸೆ ಪ್ರತಿಯೊಬ್ಬರಲ್ಲಿಯೂ ಕೂಡ ಇದ್ದೆ ಇರುತ್ತದೆ. ಶ್ರೀ ಮಂಜುನಾಥನ ಆಶೀರ್ವಾದವನ್ನು ಪಡೆಯಲು ಹತ್ತಿರದ ಜನರು ಮತ್ತು ದೂರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬಂದು ಸೇರುತ್ತಾರೆ.

ಈ ಪ್ರದೇಶದಲ್ಲಿ ಹರಿಯುವಂತಹ ನೇತ್ರಾವತಿ ನದಿಯು ಈ ಪ್ರದೇಶದ ಪ್ರಸಿದ್ಧ ಆಕರ್ಷಣೆ ಮತ್ತು ಯಾತ್ರಾರ್ಥಿಗಳು ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಈ ನದಿಯಲ್ಲಿ ಸ್ನಾನ ಮಾಡುವುದು ವಿಶೇಷವಾಗಿದೆ. ಆದರೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿರುವ ಕಾರಣ ಇಲ್ಲಿ ಹಲ ವಾರು ಸಮಸ್ಯೆಗಳು ಎದುರಾಗುತ್ತಿದೆ. ಇದೇ ಕಾರಣ ಧರ್ಮಸ್ಥಳದಲ್ಲಿ ಹಲವಾರು ಭಾಗಗಳಲ್ಲಿ ಇಲ್ಲಸಲ್ಲದ ವಿಷಯಗಳು ನಡೆಯುತ್ತಿದೆ. ಎಲ್ಲಾ ರೀತಿಯ ಜನರು ಬರುವುದರಿಂದ
ಈ ಪುಣ್ಯಕ್ಷೇತ್ರ ಇತ್ತೀಚೆಗೆ ಕಲ್ಮಶಗೊಳ್ಳುತ್ತಿದೆ. ಇದಕ್ಕೆ ಕಡಿವಾಣವನ್ನು ಹಾಕಲು ಇಲ್ಲಿನ ಆಡಳಿತ ಮಂಡಳಿ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಇದರ ಕುರಿತು ಕೆಲವು ಮಹತ್ವದ ಸೂಚನೆಯನ್ನು ಸಹ ನೀಡಿದೆ. ಇತ್ತೀಚೆಯ ಕರಾವಳಿ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ ಸೂರ್ಯನು ಅತಿಪ್ರಕಾಶಮಾನವಾಗಿ ಉರಿಯುತ್ತಿದ್ದಾನೆ. ಇದರಿಂದಾಗಿ ಧರ್ಮಸ್ಥಳದ ಪುಣ್ಯ ನದಿ ನೇತ್ರಾವತಿ ನದಿಗು ಕೂಡ ಕಟ್ಟಿದೆ.
ಹೌದು ಬಿಸಿಲಿನ ತಾಪಮಾನಕ್ಕೆ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಈ ಕಾರಣದಿಂದ ಧರ್ಮಸ್ಥಳದ ಕುರಿತು ಮಹತ್ವದ ಸೂಚನೆಯೋಂದು ನೀಡಲಾಗಿದೆ. ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನ ಘಟ್ಟದಲ್ಲಿ ತೀವ್ರ ಬಿಸಿಲಿನ ಕಾರಣ. ಹರಿಯುವ ನೀರು ಕೂಡ ಕಡಿಮೆ ಯಾಗಿದೆ. ಹೀಗಾಗಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಂಗಡಿಗರ ಮಾಲೀಕರಿಗೆ ಸೂಚನೆಯನ್ನು ನೀಡಿದ್ದು ನೇತ್ರಾವತಿ ನದಿಯ ಸ್ನಾನ ಘಟ್ಟ, ನೇತ್ರಾನಗರ
ಹರಿಕೆ ಮಂಡೆಯ ಸುತ್ತಮುತ್ತಲಿನ ಅಂಗಡಿಗಳಲ್ಲಿ ಸೋಪು ಮತ್ತು ಶಾಂಪೂಗಳನ್ನು ಮಾರಾಟ ಮಾಡದಂತೆ ಅಧಿಕೃತವಾಗಿ ಸೂಚನೆಯನ್ನು ನೀಡಲಾಗಿದೆ. ಹಾಗೂ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವಾಗ ಶಾಂಪು ಅಥವಾ ಸೋಪನ್ನು ಬಳಸದಂತೆ ಸೂಚನೆಯನ್ನು ನೀಡಲಾಗಿದೆ. ಹಾಗಾಗಿ ಯಾರೂ ಕೂಡ ಸೋಪು ಮತ್ತು ಶಾಂಪುಗಳನ್ನು ಬಳಸಬಾರದು, ಈ ರೀತಿ ಬಳಸುವುದರಿಂದ ನದಿಯ ನೀರು ಮತ್ತಷ್ಟು ಕಲ್ಮಶಗೊಳ್ಳುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದು ಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.