ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು..ಇಂಥವರನ್ನು ಮದುವೆ ಆಗುವ ಮುನ್ನ ಇದನ್ನು ಯೋಚಿಸಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು………||

ಇಂಥವರನ್ನು ಮದುವೆಯಾಗುವ ಮುನ್ನ ಒಮ್ಮೆ ಯೋಚಿಸಿ? ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತದೆ. ಆದರೆ ಅದು ಗಡಿ ದಾಟಿದರೆ ಬಾಂಧವ್ಯ ಉಳಿಯುವುದಿಲ್ಲ. ನಾನು ನನ್ನದು ನಾನು ಹೇಳುವುದನ್ನೇ ಕೇಳು ನಾನು ಹೇಳುವುದನ್ನೇ ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನು ತೋರಿಸುವವರಿಂದ ದೂರವಿರುವುದು ಉತ್ತಮ. ಮದುವೆಯನ್ನು ಜೀವನದ ಪ್ರಮುಖ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಪ್ರತಿಯೊಬ್ಬರು ತನ್ನ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿದೆ ಎಂದು ಭಾವಿಸಿ ಕೆಲವರು ಮದುವೆಗಾಗಿ ಜೀವನವನ್ನೇ ಹಾಳು ಮಾಡಿ ಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ ಸಾಮರಸ್ಯ ಇಲ್ಲದೆ ತಮ್ಮ ದಾಂಪತ್ಯವನ್ನು ವಿಚ್ಛೇದನದಲ್ಲಿ ಅಂತ್ಯ ಗೊಳಿಸುತ್ತಾರೆ. ಹೀಗಾಗಿ ಮದುವೆಯಾಗುವ ಮುನ್ನ ಈ ಲಕ್ಷಣಗಳು ಇದ್ದರೆ ನೀವು ಅವರಿಂದ ದೂರ ಇರುವುದೇ ಒಳ್ಳೆಯದು.

ಸರ್ವಾಧಿಕಾರಿ ಲಕ್ಷಣ: ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಗಳು ಇರುತ್ತವೆ. ತಮ್ಮಿಷ್ಟದಂತೆ ತಮ್ಮ ಬದುಕು ಆರಿಸಿಕೊಳ್ಳುವ ಆಯ್ಕೆ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮನ್ನು ಎಲ್ಲದಕ್ಕೂ ನಿಯಂತ್ರಣ ಮಾಡುತ್ತಿದ್ದರೆ ಉದಾಹರಣೆಗೆ ಇದನ್ನೇ ತಿನ್ನಿ, ಈ ಉಡುಗೆಯನ್ನೇ ಧರಿಸಿ, ಆಲ್ಲಿ ಹೋಗ ಬೇಡ, ಅವರ ಜೊತೆ ಮಾತನಾಡಬೇಡ ಈ ರೀತಿ ಪ್ರತಿ ವಿಷಯದಲ್ಲೂ ನಿಮ್ಮನ್ನು ನಿಯಂತ್ರಿಸುವ ಉತ್ತಮ ಸಂಗಾತಿಯಾಗಲು ಸಾಧ್ಯವಿಲ್ಲ.

ಗೌರವ ನೀಡದ ವ್ಯಕ್ತಿ: ಗೌರವ ಪರಸ್ಪರ ಸಂಗಾತಿಗಳ ಕರ್ತವ್ಯ ಆಗಿರುತ್ತೆ. ಮದುವೆಯಾಗಲು ಬಯಸುವ ಇಬ್ಬರ ನಡುವೆ ಇದು ಸಮಾನವಾಗಿರ ಬೇಕು. ಗೌರವ ಕೊಡುವ ಅಭಯಾಸವಿಲ್ಲದವರು ಯಾರೊಂದಿಗೂ ಸುಖವಾಗಿರಲು ಸಾಧ್ಯವಿಲ್ಲ. ಅತಿಯಾದ ಅಹಂಕಾರ: ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತೆ. ಆದರೆ ಅದು ಗಡಿ ದಾಟಿದರೆ ಬಾಂಧವ್ಯ ಉಳಿಯುವುದಿಲ್ಲ.

ನಾನು ಹೇಳುವುದನ್ನೇ ಕೇಳು, ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನ ತೋರಿಸುವವರಿಂದ ದೂರವಿರುವುದು ಒಳ್ಳೆಯದು! ಸುಳ್ಳುಕೋರರು:ನಿಮ್ಮ ಜೀವನದಲ್ಲಿ ಸುಳ್ಳುಗಾರನನ್ನು ಎಂದಿಗೂ ಆಹ್ವಾನಿಸಬೇಡಿ. ಇದು ಮನೋರೋಗದ ಲಕ್ಷಣವೂ ಹೌದು. ಪ್ರತಿ ಯೊಂದು ಸಣ್ಣ ವಿಷಯದ ಬಗ್ಗೆ ಸುಳ್ಳು ಹೇಳುವ ವ್ಯಕ್ತಿ ನಿಮ್ಮೊಂದಿಗೆ ಎಷ್ಟು ಆತ್ಮವಿಶ್ವಾಸವನ್ನು ಹೊಂದಬಹುದು ಅನ್ನೋದರ ಬಗ್ಗೆ ಯೋಚಿಸಿ. ಪ್ರಾಮಿಸ್ ಬ್ರೇಕರ್: ಒಂದಲ್ಲ, ಎರಡು ಬಾರಿ ಭರವಸೆ ಯನ್ನು ಉಳಿಸಿಕೊಳ್ಳದವರಿಂದ ಎಚ್ಚರವಿರಿ.

ಅವರು ಪದೇ ಪದೇ ಇದೇ ತಪ್ಪು ಮಾಡ್ತಿದರೆ ಅವರಿಗೆ ಕೊಟ್ಟ ಮಾತಿಗೆ ಬೆಲೆ ಗೊತ್ತಿಲ್ಲ ಎಂದರ್ಥ ಅವರಿಗೆ ಭರವಸೆ ನೀಡುವುದು ಸಣ್ಣ ವಿಷಯವಾಗಿರುತ್ತೆ. ಪದೇ ಪದೇ ತಪ್ಪು ಮಾಡುವವರು: ಒಂದು ಅಥವಾ ಎರಡು ಸಾರಿ ತಪ್ಪು ಮಾಡಿದರೆ ಕ್ಷಮಿಸಬಹದು ಆದರೆ ಪದೇ ಪದೇ ತಪ್ಪು ಮಾಡೋ ಅಭ್ಯಾಸ ಹೊಂದಿರುವ ಜನರು ಉತ್ತಮ ಜೀವನ ಸಂಗಾತಿಯಾಗಿರಲು ಸಾಧ್ಯವಿಲ್ಲ. ಅವರಿಗೆ ಕ್ಷಮೆಯ ಬೆಲೆಯು ಗೊತ್ತಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *