ಇದೊಂದೇ ತರಕಾರಿ ನೂರು ಮಾತ್ರೆಗೆ ಸಮ ನಿಶಕ್ತಿ, ಸುಸ್ತು, ಆಯಾಸ ಕೈ ಕಾಲು ಪಾದ ಎದೆ ಉರಿ, ಗ್ಯಾಸ್, ಅಸಿಡಿಟಿ, ಉರಿಮೂತ್ರ, ಬೊಜ್ಜು ದೂರವಾಗುತ್ತೆ……||
ನಾವು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಹಲವಾರು ರೀತಿಯ ತರಕಾರಿಗಳನ್ನು ಉಪಯೋಗಿಸುತ್ತಿರುತ್ತೇವೆ ಆದರೆ ಅವುಗಳ ಪ್ರಯೋಜನ ಮಾತ್ರ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ ಅದೇ ರೀತಿಯಾಗಿ ಕೆಲವೊಂದಷ್ಟು ತರಕಾರಿಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಒಂದು ತರಕಾರಿ ಅದ್ಭುತವಾದಂತಹ ಕೆಲಸವನ್ನು ಮಾಡುತ್ತದೆ ಎಂದೇ ಹೇಳಬಹುದು. ಹಾಗಾದರೆ ಆ ಒಂದು ತರಕಾರಿ ಯಾವುದು? ಹಾಗೂ ಅದನ್ನು ಯಾವ ರೂಪದಲ್ಲಿ ಸೇವನೆ ಮಾಡಬೇಕು? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಇಷ್ಟೆಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಉಂಟು ಮಾಡುತ್ತಿರುವಂತಹ ಆ ಒಂದು ಅದ್ಭುತವಾದ ತರಕಾರಿ ಯಾವುದು ಎಂದರೆ ಬೂದು ಕುಂಬಳಕಾಯಿ ಹೌದು ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಪ್ರತಿನಿತ್ಯ ಬೂದು ಕುಂಬಳ ಕಾಯಿಯನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ಎಂದೇ ಹೇಳಲಾಗುತ್ತದೆ.
ಅಂತಹ ಒಂದು ಅದ್ಭುತವಾದ ಶಕ್ತಿಯನ್ನು ಇದು ಒಳಗೊಂಡಿದೆ ಹೌದು ಬೂದುಕುಂಬಳಕಾಯಿಯ ಜ್ಯೂಸ್ ಅನ್ನು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಹಾಗೂ ಹೃದಯದ ಆರೋಗ್ಯಕ್ಕೆ ಕಿಡ್ನಿ ಗೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ಉಂಟಾಗುವಂತಹ ಸುಸ್ತು ನಿಶಕ್ತಿ ಎಲ್ಲವನ್ನು ಸಹ ದೂರ ಮಾಡುತ್ತದೆ.
ಹಾಗೆಯೇ ನೀವು ಯಾವುದೇ ರೀತಿಯ ಆಯುರ್ವೇದದ ಚಿಕಿತ್ಸಾ ವಿಧಾನವನ್ನು ಪಡೆದುಕೊಳ್ಳಲು ಹೋದರೆ ಅಲ್ಲಿ ಮೊದಲನೆಯದಾಗಿ ನಿಮ್ಮ ದೇಹದಲ್ಲಿ ವಾತ ಪಿತ್ತ ಕಫ ಈ ಮೂರು ಸಹ ಸರಿಯಾದ ರೀತಿಯಲ್ಲಿ ಇದೆಯಾ ಎನ್ನುವುದನ್ನು ಗಮನಿಸುತ್ತಾರೆ ಹಾಗೇನಾದರೂ ಅದರಲ್ಲಿ ಯಾವುದು ಹೆಚ್ಚು ಹಾಗೂ ಯಾವುದು ಕಡಿಮೆ ಇರುತ್ತದೆಯೋ ಅವೆಲ್ಲವನ್ನು ಸಹ ಸಮ ಪ್ರಮಾಣದಲ್ಲಿ ಮಾಡುವುದಕ್ಕೆ ಈ ಒಂದು ಬೂದುಗುಂಬಳಕಾಯಿಯ ಜ್ಯೂಸ್ ಅನ್ನು ಮೊದಲನೆಯದಾಗಿ ಕೊಡುತ್ತಾರೆ.
ಇದು ನಿಮ್ಮ ದೇಹದಲ್ಲಿರುವಂತಹ ಎಲ್ಲ ವಾದ ಪಿತ್ತ ಕಫವನ್ನು ಸಹ ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇದನ್ನು ಸೇವನೆ ಮಾಡುವುದು ಉತ್ತಮ ಅದರಲ್ಲೂ ಯಾರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುತ್ತಿರುತ್ತಾರೋ ಅಂತವರು ಇದನ್ನು ಸೇವನೆ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.