ಪತಿ ಮನೆಯಲ್ಲಿ ಇಲ್ಲದಿದ್ದಾಗ ಪತ್ನಿಯರು ಈ ಕೆಲಸಗಳನ್ನು ಮಾಡಲೇಬಾರದು…..!!
ಮದುವೆಗೂ ಮುನ್ನ ಹೆಣ್ಣು ಹುಟ್ಟಿದ ಮನೆಯಲ್ಲಿಯೇ ಜೀವನ ಕಳೆಯುತ್ತಾಳೆ. ಆದರೆ ಮದುವೆ ನಂತರ ತನ್ನ ಪತಿಯ ಜೀವನವೇ ಅವಳ ಬದುಕಾಗಿರುತ್ತದೆ. ತನ್ನನ್ನು ನಂಬಿ ಬಂದವಳನ್ನು ಪತಿ ಕೂಡ ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆಯು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮದುವೆಗೂ ಮುನ್ನ ಬದುಕುವ ಬದುಕು ಒಂದಾದರೆ, ಮದುವೆ ನಂತರ ಬದುಕುವ ಬದುಕು ಇನ್ನೊಂದು.
ಮದುವೆ ಎನ್ನುವುದು ಕೇವಲ ಎರಡು ಮನಸ್ಸುಗಳ ಮಿಲನವಲ್ಲ. ಎರಡು ಕುಟುಂಬಗಳ ಸಂಗಮ. ಮದುವೆಯ ನಂತರ ಎಲ್ಲರ ಜೀವನದಲ್ಲಿ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ ಈ ಸಣ್ಣ ಪುಟ್ಟ ಜಗಳಗಳನ್ನು ದೊಡ್ಡದಾಗಿ ಮಾಡಬಾರದು. ಆದರೆ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿ ಮಾಡುವ ಕೆಲಸಗಳು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ತಡೆಯಬಹುದು.
ಹಾಗಾದರೆ ಅವುಗಳು ಯಾವುದು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ. ಗಂಡ ಇಲ್ಲದಿರುವಾಗ ಮನೆಗೆ ನಿಮ್ಮ ಸ್ನೇಹಿತರನ್ನು ಮನೆಗೆ ಕರೆಯುವುದು ಅಷ್ಟೊಂದು ಒಳ್ಳೆಯದಲ್ಲ. ಅದರಲ್ಲೂ ವಿಶೇಷವಾಗಿ ಹುಡುಗರು ಏಕೆಂದರೆ ಅದು ನಿಮ್ಮ ಗಂಡನಲ್ಲಿ ಹಲವಾರು ಅನುಮಾನ ಗಳನ್ನು ಸೃಷ್ಟಿಸಬಹುದು. ಆದರೆ ಎಲ್ಲರೂ ಇದೇ ರೀತಿಯಾಗಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ ಆದ್ದರಿಂದ ಎಲ್ಲರೂ ಈ ನಿಯಮಗಳನ್ನು ಅನುಸರಿಸುವುದು ಉತ್ತಮ.
ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ. ಇನ್ನು ಎರಡನೆಯದಾಗಿ ಗಂಡ ಮನೆಯಲ್ಲಿ ಇಲ್ಲದಿದ್ದಾಗ ನೀವೇನಾದರೂ ಹೊರಗಡೆ ಹೋಗಬೇಕು ಎನ್ನುವಂತಹ ಸಂದರ್ಭದಲ್ಲಿ ಮೈತುಂಬ ಬಟ್ಟೆಯನ್ನು ಧರಿಸಿ ಹೋಗುವುದು ಉತ್ತಮ. ಹೆಚ್ಚಿನ ಶೃಂಗಾರವನ್ನು ಮಾಡಿಕೊಂಡು ಹೋಗುವುದು ಅಷ್ಟೇನೂ ಒಳ್ಳೆಯದಲ್ಲ. ಹಾಗೂ ಅದು ಅಗತ್ಯವೂ ಸಹ ಇರುವುದಿಲ್ಲ.
ಗಂಡ ಮನೆಯಲ್ಲಿ ಇಲ್ಲದಿದ್ದಾಗ ಪರ ಪುರುಷರ ಜೊತೆ ನಿಂತು ಮಾತ ನಾಡಬಾರದು ಹಾಗೂ ಪಕ್ಕದ ಮನೆಯಲ್ಲಿ ಹೋಗಿ ಕುಳಿತುಕೊಂಡು ಮಾತನಾಡಬಾರದು. ಇದರಿಂದ ಚರಿತ್ರೆಯಲ್ಲಿ ದೋಷಗಳು ಕಂಡು ಬರುತ್ತದೆ ಅಥವಾ ಬೇರೆಯವರು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಹುದು ಅದರಿಂದ ಮಹಿಳೆಯರು ಇಂತಹ ವಿಷಯದಲ್ಲಿ ಹೆಚ್ಚು ಜಾಗೃತರಾಗಿರುವಂತೆ ನಡೆದುಕೊಳ್ಳಬೇಕು.
ಯಾವುದೇ ಕಾರಣಕ್ಕೂ ಗಂಡ ಮನೆಯಲ್ಲಿ ಇಲ್ಲದಿದ್ದಾಗ ರಾತ್ರಿ ಸಮಯ ಒಂಟಿಯಾಗಿ ಹೆಂಡತಿ ಎಲ್ಲಿಯೂ ಹೋಗಬಾರದು. ಜೊತೆಗೆ ಯಾವುದಾ ದರೂ ಕೆಲಸದ ನಿಮಿತ್ತ ನೀವೇನಾದರೂ ನಿಮ್ಮ ಸ್ನೇಹಿತರೊಡನೆ ಹೊರ ಗಡೆ ಹೋಗಿದ್ದರೆ ಕೆಲಸ ಮುಗಿದ ತಕ್ಷಣ ನಿಮ್ಮ ಮನೆಗೆ ಬರುವುದು ಒಳ್ಳೆಯದು. ಗಂಡ ಇಲ್ಲದ ಸಮಯದಲ್ಲಿ ಹೆಂಡತಿಯರು ಯಾವುದೇ ಕಾರಣಕ್ಕೂ ಯಜ್ಞ ಹಾಗೂ ಹೋಮಗಳಿಗೆ ಭಾಗವಹಿಸಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.