ಮೈಸೂರು ರಾಜರ ಕೈಯಲ್ಲಿ ದುಡ್ಡಿಲ್ಲದೆ ಆಣೆಕಟ್ಟು ಕಟ್ಟುವ ಕೆಲಸವನ್ನು ನಿಲ್ಲಿಸಲಾಗಿತ್ತು…….||
ಕೆ ಆರ್ ಎಸ್ ಡ್ಯಾಮ್ ಮತ್ತು ಕಾವೇರಿ ನೀರು ಈ ಒಂದು ವಿಷಯಕ್ಕೆ ಕರ್ನಾಟಕ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ತುಂಬಾನೇ ವರ್ಷಗಳಿಂದ ಜಗಳ ಆಡಿಕೊಂಡು ಬರುತ್ತಿರುವಂತಹ ವಿಷಯ ನಿಮಗೆಲ್ಲರಿಗೂ ಸಹ ಗೊತ್ತೇ ಇದೆ. ನಮ್ಮ ಕರ್ನಾಟಕದ ಜನ ಕಾವೇರಿ ನೀರು ಮತ್ತು ಕೆ ಆರ್ ಎಸ್ ಡ್ಯಾಮ್ ಅನ್ನು.
ಯಾಕೆ ಅಷ್ಟೊಂದು ಹಚ್ಚಿಕೊಂಡಿದ್ದಾರೆ ನಮ್ಮ ಜನಕ್ಕೂ ಹಾಗೂ ಆ ಡ್ಯಾಮ್ ಗೆ ಇರುವ ಸಂಬಂಧ ಏನು ಅನ್ನುವುದು ತುಂಬಾ ಜನಕ್ಕೆ ಗೊತ್ತಿಲ್ಲ. ಹಾಗಾದರೆ ಆ ಒಂದು ಕಾರಣ ಏನು ಎನ್ನುವುದರ ಬಗ್ಗೆ ಈದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಆಗಿನ ಕಾಲದಲ್ಲಿ ಆ ಒಂದು ಡ್ಯಾಮ್ ನಿರ್ಮಾಣ ಆದಂತಹ ಸಂದರ್ಭದಲ್ಲಿ ಬಂದ ಕಷ್ಟಗಳು ಮತ್ತು
ಅವನು ಡ್ಯಾಮ್ ನಿರ್ಮಾಣ ಮಾಡಿದ ರೀತಿ ನಿಜಕ್ಕೂ ಒಂದು ರೋಚಕವಾಗಿರುವಂತಹ ವಿಷಯ ಎಂದೇ ಹೇಳಬಹುದು. ಸ್ವತಂತ್ರ ಪೂರ್ವದಲ್ಲಿ ಈಗಿನ ಕರ್ನಾಟಕ ಮೈಸೂರಿನ ಪ್ರಾಂತ್ಯವಾಗಿತ್ತು ಆಗ ಈ ಗಿನ ಮಂಡ್ಯ ತುಂಬಾ ಬರಡಾಗಿದ್ದಂತಹ ಕಾಲ ಅದು ಆಗ ಈ ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನದಲ್ಲಿತ್ತು. 1870ರಲ್ಲಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾರೆ ಬ್ರಿಟಿಷ್ ಸರಕಾರ. ಆದರೆ ನಂತರದ ದಿನಗಳಲ್ಲಿ
ಭೀಕರ ಬರಗಾಲ ಎದುರಾದ ನಂತರ ಆ ಯೋಜನೆಗಳನ್ನು ಅಲ್ಲಿಯೇ ಕೈಬಿಡುತ್ತಾರೆ. ನಂತರ ಮೈಸೂರು ಬ್ರಿಟಿಷ್ ಆಡಳಿತದಿಂದ ನೇರವಾಗಿ ಹೊರಗೆ ಬರುತ್ತದೆ. ನಂತರ ರಾಜ್ಯ ಸಂಸ್ಥಾನ ಆಗುತ್ತದೆ ಆಗ ಮೈಸೂರನ್ನು ರಾಜ ಕೃಷ್ಣರಾಜ ಒಡೆಯರು ಆಳುತ್ತಾ ಇರುತ್ತಾರೆ. ಒಂದು ದಿನ ಅವರು ಮಂಡ್ಯ ಭಾಗದಲ್ಲಿ ಸಂಚರಿಸುತ್ತಿರುವಂತಹ ವೇಳೆಯಲ್ಲಿ ಅಲ್ಲಿ ಬರಡು ಬಿದ್ದಿರುವಂತಹ ಭೂಮಿಗಳನ್ನು ನೋಡಿ.
ಇವರ ಮನಸ್ಸಿಗೆ ತುಂಬಾ ಸಂಕಟ ಉಂಟಾಗುತ್ತದೆ. ಮತ್ತೊಂದು ಕಡೆ ಈ ಕಾವೇರಿ ನದಿ ವ್ಯರ್ಥವಿಲ್ಲದೆ ಹರಿದು ಹೋಗುವುದನ್ನು ನೋಡಿ ಅಲ್ಲಿಯೂ ಸಹ ಮನಸಿಗೆ ತುಂಬಾ ಬೇಜಾರಾಗುತ್ತದೆ. ಆ ಸಂದರ್ಭದಲ್ಲಿ ಹುಟ್ಟಿದ್ದೆ ಈ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಬೇಕು ಎಂಬ ಕಲ್ಪನೆ. ಆದರೆ ಆಗಲೇ ಬ್ರಿಟೀಷ್ ಸರಕಾರಗಳು ಕೆಲವು ಕಡೆ ದೊಡ್ಡ ಪ್ರಮಾಣದ ಡ್ಯಾಮ್ ಗಳನ್ನು ಕಟ್ಟಬೇಕು ಎಂದು ನಕ್ಷೆಗಳನ್ನು ಸಿದ್ಧ ಮಾಡಿಕೊಂಡಿರುತ್ತಾರೆ.
ಆ ಒಂದು ನೀಲಿ ನಕ್ಷೆಯನ್ನು ಅಲ್ಲಿರುವಂತಹ ಮಹಾರಾಜರಿಗೂ ಸಹ ಕೊಟ್ಟಿರುತ್ತಾರೆ. ಆಗ ಇವರು ಸಹ ಕೆಆರ್‌ಎಸ್ ಡ್ಯಾಮ್ ಅನ್ನು ಕಟ್ಟಬೇಕು ಎಂದು ಮನಸ್ಸು ಮಾಡಿದಂತಹ ಸಂದರ್ಭದಲ್ಲಿ ನೀಲಿ ನಕ್ಷೆ ಅವರ ಕೈಗೆ ಸಿಗುತ್ತದೆ. ನಂತರ ಅವರು ಆ ಡ್ಯಾಮ್ ಅನ್ನು ಕಟ್ಟುವುದಕ್ಕೆ ಒಬ್ಬ ಒಳ್ಳೆಯ ತಾಂತ್ರಿಕ ನಿಪುಣನನ್ನು ಹುಡುಕುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.