ಪ್ರತಿದಿನ ತುಪ್ಪದ ದೀಪ ಹಚ್ಚಬಾರದು? ಇದರಿಂದ ಕಷ್ಟಗಳು ಜಾಸ್ತಿ ಆಗುತ್ತೆ! ಸಂಪೂರ್ಣ ಮಾಹಿತಿ….|| ನೀವು ಇದನ್ನು ನಂಬುತ್ತೀರಾ….||
ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ದೀಪಾರಾಧನೆ ಮಾಡುವುದು ಬಹಳ ಮುಖ್ಯ ಎಂದೇ ತಿಳಿಯಲಾಗಿದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಪ್ರತಿದಿನ ದೇವರ ಮನೆಯಲ್ಲಿ ದೀಪಾರಾಧನೆಯನ್ನು ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನ ಪ್ರತಿನಿತ್ಯ ತುಪ್ಪದ ದೀಪ ಹಚ್ಚಬಾರದು.
ಹಾಗೇನಾದರೂ ತುಪ್ಪದ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳು ಹೆಚ್ಚಾಗುತ್ತದೆ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ತಪ್ಪು ಬದಲಿಗೆ ನಮ್ಮ ಹಿಂದಿನ ಕಾಲದಿಂದಲೂ ಕೂಡ ಯಾವುದೇ ಒಂದು ಶುಭ ವಿಚಾರ ತಿಳಿದಂತಹ ಸಮಯದಲ್ಲಿ, ಮನೆಯಲ್ಲಿ ಯಾವುದೇ ರೀತಿಯ ಒಳ್ಳೆಯ ವಿಷಯ ಬಂದರೆ, ಮೊದಲು ಹಿರಿಯರು ಹೇಳುತ್ತಿದ್ದಿದ್ದು ಮೊದಲು ಹೋಗಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಎಂದು.
ಹೌದು ಆದ್ದರಿಂದಲೇ ತುಪ್ಪದ ದೀಪಕ್ಕೆ ಬಹಳ ಮಹತ್ವವಾದ ಸ್ಥಾನ ಇದೆ ಎಂದೇ ಹೇಳಬಹುದು ವಾಸ್ತು ಶಾಸ್ತ್ರದ ಪ್ರಕಾರ ತುಪ್ಪದ ದೀಪವನ್ನು ದೇವರ ಮುಂದೆ ಹಚ್ಚುವುದರಿಂದ ಮನೆಯಲ್ಲಿರುವಂತಹ ನೆಗಿಟಿವ್ ಎನರ್ಜಿ ದೂರುವಾಗುತ್ತದೆ. ಹಾಗೂ ತುಪ್ಪದ ದೀಪವನ್ನು ದೇವರ ಮುಂದೆ ಹಚ್ಚುವುದರಿಂದ ಅತ್ಯಂತ ಶ್ರೇಷ್ಠ ಎಂದೇ ಹೇಳಬಹುದು. ಹೌದು ಅದರಲ್ಲೂ ನೀವೇ ತಯಾರಿಸಿದಂತಹ ಶುದ್ಧವಾದ ತುಪ್ಪವನ್ನು ಹಚ್ಚುವುದರಿಂದ.
ನಿಮ್ಮ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ಐಶ್ವರ್ಯ ಎಲ್ಲವೂ ಕೂಡ ಹೆಚ್ಚಾಗುತ್ತದೆ ಎಂದೇ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಆದ್ದ ರಿಂದ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಆಗದಿದ್ದರೂ ನಿಮ್ಮ ಮನೆಯ ದೇವರ ವಾರದ ದಿನ ತುಪ್ಪದ ದೀಪವನ್ನು ಹಚ್ಚುವುದು ಬಹಳ ಮುಖ್ಯ ವಾಗಿರುತ್ತದೆ. ಅದರಲ್ಲೂ ತುಳಸಿ ಗಿಡದ ಮುಂದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಜೆಯ ಸಮಯ ತುಪ್ಪದ ದೀಪವನ್ನು ಹಚ್ಚುವುದ ರಿಂದ
ನಿಮ್ಮ ಮನೆಯಲ್ಲಿರುವಂತಹ ದುಷ್ಟ ಶಕ್ತಿಗಳು ದೂರವಾಗುತ್ತದೆ ಜೊತೆಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ. ಅದೇ ರೀತಿಯಾಗಿ ಪ್ರತಿ ತಿಂಗಳು ಅಮಾವಾಸ್ಯೆಯ ದಿನ ಅರಳಿ ಮರದ ಕೆಳಗಡೆ ಒಂದು ತುಪ್ಪದ ದೀಪವನ್ನು ಹಚ್ಚುವುದರಿಂದ ಪಿತೃ ದೋಷ ನಿವಾರಣೆಯಾಗು ತ್ತದೆ, ಹಾಗೂ ಇದರಿಂದ ಅವರ ಸಂಪೂರ್ಣ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಇನ್ನು ಪ್ರತಿ ಮಂಗಳವಾರ ಬಾಳೆ ಗಿಡದ ಕೆಳಗಡೆ ಒಂದು ತುಪ್ಪದ ದೀಪವನ್ನು ಹಚ್ಚುವುದರಿಂದ ಗುಣಪಡಿಸಲಾಗದೆ ಇರುವಂತಹ ಎಷ್ಟೋ ಕಾಯಿಲೆಗಳು ದೂರವಾಗುತ್ತದೆ. ಅದರಲ್ಲೂ ನೀವೆಲ್ಲರೂ ಸಹ ಗಮನಿಸಿರಬಹುದು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶಕ್ತಿಶಾಲಿ ಯಾಗಿರುವಂತಹ ದೇವಿ ದೇವಸ್ಥಾನದ ಮುಂದೆ ಬೆಲ್ಲದ ದೀಪ ಹಾಗೂ ನಿಂಬೆಹಣ್ಣಿನ ದೀಪವನ್ನು ಹಚ್ಚುವಂತಹ ಪದ್ಧತಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ