ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ ಐಪಿಎಲ್ ನ ಕರಾಳ ಸತ್ಯ.. » Karnataka's Best News Portal

ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ ಐಪಿಎಲ್ ನ ಕರಾಳ ಸತ್ಯ..

ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ…….||

WhatsApp Group Join Now
Telegram Group Join Now

ದೇಶದ ಸಮಸ್ತ ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಎಂದರೆ ಏನೋ ಒಂದು ವಿಶೇಷ ರೀತಿಯ ಕ್ರೇಜ್. ಬೇರೆ ಸ್ಪೋರ್ಟ್ಸ್ ಗಳಿಗೆ ಹೋಲಿಸಿದರೆ ಈ ಐಪಿಎಲ್ ನಲ್ಲಿ ಹಣ ಹೆಚ್ಚಾಗಿ ಹರಿದು ಬರುತ್ತದೆ. ಇಲ್ಲಿ ತಂಡದ ಮಾಲೀಕರು ಕೋಟಿಗಟ್ಟಲೆ ಹಣವನ್ನು ಸುರಿದು ತಮ್ಮ ತಮ್ಮ ಟೀಮ್ ಅನ್ನು ತಯಾರು ಮಾಡುತ್ತಾರೆ.

ಬ್ರಾಡ್ ಕಾಸ್ಟಿಂಗ್ ರೈಡ್ಸ್, ಬ್ರಾಂಡಿಂಗ್ ರೈಟ್ಸ್ ಹೀಗೆ ಪ್ರತಿಯೊಂದರಲ್ಲಿ ಯೂ ಸಹ ಇಲ್ಲಿ ಕೋಟಿಗಟ್ಟಲೆ ಬೆಲೆ ಇರುತ್ತದೆ. ಇದೇ ಕಾರಣದಿಂದಾಗಿ ಈ ಐಪಿಎಲ್ ಉಳಿದ ಇತರೆ ಲೀಗ್ ಗಳಿಗಿಂತಲೂ ದುಬಾರಿ ಹಾಗೂ ಪಾಪುಲರ್ ಆದಂತಹ ಲೀಗ್. ಇದೆಲ್ಲ ಈ ಐಪಿಎಲ್ ನ ಒಂದು ಭಾಗವಾದರೆ ಅದರ ಇನ್ನೊಂದು ಕರಾಳವಾದಂತಹ ಮುಖ ಬೇರೆ ಇದೆ.

ಮ್ಯಾಕ್ಸ್ ಫಿಕ್ಸಿಂಗ್ ಹಾಗೂ ರೇವ್ ಪಾರ್ಟಿ ಹೀಗೆ ಹಲವಾರು ವಿವಾದಗ ಳಿಂದಲೂ ಕೂಡ ಇದು ತುಂಬಿಹೋಗಿದೆ. ಹಾಗಾದರೆ ಈ ದಿನ ಈ ಐಪಿಎಲ್ ಗೆ ಸಂಬಂಧಪಟ್ಟಂತೆ ಇದರ ಹಿಂದಿನ ಕರಾಳವಾದಂತಹ ವಿಷಯದ ಬಗ್ಗೆ ಹಾಗೂ ನಿಮಗೆ ಯಾರಿಗೂ ಸಹ ಗೊತ್ತಿಲ್ಲದೇ ಇರುವಂತಹ ಕೆಲವೊಂದಷ್ಟು ಮಾಹಿತಿಯ ಬಗ್ಗೆ ಈ ದಿನ ಚರ್ಚಿಸುತ್ತಾ ಹೋಗೋಣ. ಮೊದಲನೆಯದಾಗಿ 2013ರಲ್ಲಿ ದೆಹಲಿ ಪೊಲೀಸ್ ಅವರ ಟೀಮ್.

ಐಪಿಎಲ್ ನಲ್ಲಿ ನಡೆಯುತ್ತಿರುವಂತಹ ಸ್ಪಾಟ್ ಫಿಕ್ಸಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಕುರಿತಾದ ಹಗರಣದ ಬಗ್ಗೆ ನ್ಯೂಸ್ ಅನ್ನು ಕವರ್ ಮಾಡಿತ್ತು. ಇದರಲ್ಲಿ ಮುಖ್ಯವಾಗಿ ಮೂರು ಜನ ಆಟಗಾರರ ಬೃಹತ್ ಕೈವಾಡ ಇರುವುದರ ಬಗ್ಗೆ ಮಾಹಿತಿ ಅವರಿಗೆ ಸಿಕ್ಕಿತು. ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾದಂತಹ ಶ್ರೀಶಾಂತ್, ಅಂಕಿತ್ ಚೌಹಾಣ್, ಮತ್ತು ಅಜಿತ್ ಚಂಡೀಲಾ.

ಇವರು ಮ್ಯಾಚ್ ಫಿಕ್ಸಿಂಗ್ ನ ದಂಧೆ ಗಾಗಿ ಹಣವನ್ನು ಪಡೆದುಕೊಂಡಿ ದ್ದಂತಹ ಸಂಗತಿ ಬಯಲಾಯಿತು. ಇಲ್ಲಿ ಶ್ರೀಶಾಂತ್ ಒಂದು ಓವರ್ ನಲ್ಲಿ 14 ರನ್ ಗಿಂತಲೂ ಹೆಚ್ಚು ರನ್ ಬರುವಂತೆ ಮಾಡಬೇಕು ಹಾಗೂ ಅದಕ್ಕಾಗಿ ತನ್ನ ಸೊಂಟದಲ್ಲಿ ಬಟ್ಟೆಯನ್ನು ಇಟ್ಟುಕೊಂಡು ಈ ರೀತಿ ಆದಾಗ ಸಿಗ್ನಲ್ ಮಾಡಬೇಕು ಅಂತ ಈ ಮೊದಲೇ ಅಲ್ಲಿ ಮಾತು ಕಥೆ ನಡೆದಿತ್ತು.

ಇಷ್ಟು ದೊಡ್ಡ ಹಗರಣದಲ್ಲಿ ಶ್ರೀಶಾಂತ್ ನಂತಹ ಒಬ್ಬ ದೊಡ್ಡ ಪ್ರತಿಭಾವಂತ ಆಟಗಾರ ಪಾಲ್ಗೊಂಡಿದ್ದು ಅವತ್ತಿನ ಕಾಲಕ್ಕೆ ಆತನ ಅಭಿಮಾನಿಗಳು ಹಾಗೂ ಇತರೆ ಕ್ರಿಕೆಟ್ ಪ್ರಿಯರನ್ನು ಅತೀವ ಶಾಕ್ ಗೆ ಗುರಿ ಮಾಡಿತ್ತು. ಇದರಲ್ಲಿ ರಾಜಸ್ಥಾನದ ರಾಯಲ್ಸ್ ತಂಡದ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆಟಗಾರರಾದಂತಹ ಧೋನಿ ಅವರ ಹೆಸರು ಸಹ ಸಾಕಷ್ಟು ಸಲ ಕೇಳಿಬಂದಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">