ಅಭಿಷೇಕ ಮಾಡುವಾಗ ಕಣ್ಣಮುಚ್ಚುವ ದೇವಿ ನಿಮ್ಮ ಕಣ್ಣಾರೆ ನೋಡಿ ಈ ವಿಡಿಯೋದಲ್ಲಿ... - Karnataka's Best News Portal

ಅಭಿಷೇಕ ಮಾಡುವಾಗ ಕಣ್ಣಮುಚ್ಚುವ ದೇವಿ ನಿಮ್ಮ ಕಣ್ಣಾರೆ ನೋಡಿ ಈ ವಿಡಿಯೋದಲ್ಲಿ…

ಅಭಿಷೇಕ ಮಾಡುವಾಗ ಕಣ್ಣುಮುಚ್ಚುವ ದೇವಿ…….!! ಈ ಅದ್ಭುತ ಪವಾಡ……!!

WhatsApp Group Join Now
Telegram Group Join Now

ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಅಮ್ಮನವರ ಶಿಲೆ ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ಶಿಲೆ ಸುಮಾರು ಏಳು ಸಾವಿರ ವರ್ಷದ ಹಿಂದಿನ ಶಿಲೆ ಎಂದು ತಿಳಿದುಬಂದಿದೆ. ಈ ದೇವಸ್ಥಾನದಲ್ಲಿ ನಡೆಯುವಂತಹ ಪವಾಡ ಎಲ್ಲಾ ಭಕ್ತಾದಿಗಳ ಮುಂದೆಯೇ ನಡೆಯು ತ್ತದೆ. ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳಿಂದಲೂ ಈ ಪವಾಡ ನಡೆಯುತ್ತಿದೆ ಎಂದು ಹೇಳಲಾಗಿದೆ.

ಬಹುಶಹ ಈ ರೀತಿಯಾದ ಪವಾಡ ಪ್ರಪಂಚದ ಯಾವ ದೇವಸ್ಥಾನದಲ್ಲಿ ಯೂ ನಡೆಯಲು ಸಾಧ್ಯವಿಲ್ಲ. ಹಾಗಾದರೆ ಅಷ್ಟಕ್ಕೂ ಈ ಒಂದು ಅದ್ಭುತವಾದಂತಹ ಪವಾಡವನ್ನು ಸೃಷ್ಟಿ ಮಾಡುತ್ತಿರುವಂತಹ ದೇವಸ್ಥಾನ ಇರುವುದಾದರೂ ಎಲ್ಲಿ ಅದೇ ರೀತಿಯಾಗಿ ಈ ದೇವಿ ಎಲ್ಲರ ಸಮ್ಮುಖದಲ್ಲಿ ಯಾವ ಅದ್ಭುತವಾದ ಪವಾಡವನ್ನು ಮಾಡುತ್ತಿದ್ದಾರೆ. ಹಾಗೂ ಈ ದೇವಿಯ ವಿಶೇಷತೆಗಳು ಏನು? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.


ಕರ್ನಾಟಕದ ನೆರೆ ರಾಜ್ಯವಾದ ತೆಲಂಗಾಣದಲ್ಲಿರುವ ಹತ್ತಿಯನ್ನು ಬೆಳೆಯುವ ನಗರವಾದ ವಾರಂಗಲ್ ಇಂದ ಸುಮಾರು 10 ಕಿಲೋ ಮೀಟರ್ ಪಯಾಣ ಮಾಡಿದರೆ “ಶ್ರೀ ಭದ್ರಕಾಳಿ ದೇವಸ್ಥಾನ” ಕಂಡು ಬರುತ್ತೆ. ಇದೇ ದೇವಸ್ಥಾನದಲ್ಲಿ ನೆಲೆಸಿರುವ ಪುರಾತನ ಭದ್ರಕಾಳಿ ಅಮ್ಮನವರ ಅತಿ ದೊಡ್ಡ ಶಿಲೆ. ಪಾರ್ವತಿ ಅಮ್ಮನವರ ಮತ್ತೊಂದು ರೂಪ ಭದ್ರಕಾಳಿ ಅಮ್ಮನವರು.

ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಭದ್ರಕಾಳಿ ಅಮ್ಮನವರ ಶಿಲೆ ಸಂಪೂರ್ಣವಾಗಿ ಸಾಲಿಗ್ರಾಮ ಶಿಲೆ. ಭಾರತ ದೇಶದಲ್ಲಿಯೇ ಇಷ್ಟು ಹಳೆಯದಾದ ಪುರಾತನವಾದ ಭದ್ರಕಾಳಿ ಅಮ್ಮನವರ ವಿಗ್ರಹವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಭದ್ರಕಾಳಿ ದೇವಿ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ಅಮ್ಮನವರು ವಾರಂಗಲ್ ನಲ್ಲಿ ಸುಮಾರು 7,000 ವರ್ಷಗಳಿಂದ ನೆಲೆಸಿದ್ದಾರೆ ಎಂದು ಪೂರಾವೆಯಲ್ಲಿ ಉಲ್ಲೇಖಿಸಲಾಗಿದೆ.

ಕೆಲವೊಂದಷ್ಟು ಜನ ಈ ವಿಷಯ ಕೇಳುತ್ತಿದ್ದಂತೆ ನಿಮ್ಮಲ್ಲಿ ಹಲವಾರು ಜನ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುತ್ತೀರ. ಕರ್ನಾಟಕದಿಂದ ಹಲ ವಾರು ಭಕ್ತರು ಈ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವಿಯ ದರ್ಶನವನ್ನು ಪಡೆದುಕೊಂಡು ಬರುತ್ತಾರೆ. ಐದು ವರ್ಷಕ್ಕೆ ಒಮ್ಮೆ ನಡೆಯುವಂತಹ ಭದ್ರಕಾಳಿ ಅಮ್ಮನವರ ಜಾತ್ರೆ ಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅಲಂಕಾರವನ್ನು ದೇವಿಗೆ ಮಾಡಲಾಗುತ್ತದೆ. ಈ ಒಂದು ಜಾತ್ರೆ 11 ದಿನ ನಡೆಯುತ್ತದೆ.

11 ದಿನದಲ್ಲಿ ಮೂರು ಸಾವಿರ ಅಲಂಕಾರ ಎಂದರೆ ಎಂತವರಿಗಾದರೂ ಆಶ್ಚರ್ಯ ಎನಿಸಬಹುದು. ಈ ದೇವಸ್ಥಾನಕ್ಕೆ ಭಕ್ತರು ಬರುವುದಕ್ಕೆ ಒಂದು ಪ್ರಮುಖವಾದ ಕಾರಣ ಇದೆ. ಭದ್ರಕಾಳಿ ಅಮ್ಮನವರಿಗೆ ಅಭಿ ಷೇಕ ಮಾಡುವುದನ್ನು ನೋಡುವುದಕ್ಕೆ ಸಾವಿರಾರು ಕಿಲೋಮೀಟರ್ ನಿಂದ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಈ ದೇವಿಗೆ ಅಭಿಷೇಕವನ್ನು ಮಾಡುವಂತಹ ಸಮಯದಲ್ಲಿ ಈ ದೇವಿ ಕಣ್ಣುಮುಚ್ಚುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">