ಅಮವಾಸ್ಯೆ ಒಳಗೆ ಈ 4 ರಾಶಿಗೆ ಶತ್ರುಗಳಿಂದ ಮುಕ್ತಿ ರಾಜಯೋಗ ಆರಂಭ ವರಾಹಿ ಅಮ್ಮನ ಸಂಪೂರ್ಣ ಕೃಪೆ - Karnataka's Best News Portal

ಅಮವಾಸ್ಯೆ ಒಳಗೆ ಈ 4 ರಾಶಿಗೆ ಶತ್ರುಗಳಿಂದ ಮುಕ್ತಿ ರಾಜಯೋಗ ಆರಂಭ ವರಾಹಿ ಅಮ್ಮನ ಸಂಪೂರ್ಣ ಕೃಪೆ

ಮೇಷ ರಾಶಿ:- ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ನಿಮ್ಮ ಮನಸ್ಸು ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನೀವು ಏಕಕಾಲ ದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಇಂದು ನೀವು ಚುರುಕಾಗಿರುತ್ತೀರಿ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಈ ದಿನ ಇದ್ದಕ್ಕಿದ್ದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ

ವೃಷಭ ರಾಶಿ:- ಈ ದಿನ ಹೆಚ್ಚು ಆತ್ಮವಿಶ್ವಾಸದಿಂದ ಹಾಗೂ ಉತ್ಸಾಹ ದಿಂದ ಇರುತ್ತೀರಿ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವಂತಹ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ. ಇಂದು ನಿಮ್ಮ ವೃತ್ತಿಪರ ಜೀವನದಲ್ಲಿ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಕುಟುಂಬದಲ್ಲಿ ಇಂದು ಕೆಲವು ಸಮಸ್ಯೆಗಳು ಎದುರಾಗಬಹುದು. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:00 ವರೆಗೆ.

ಮಿಥುನ ರಾಶಿ:- ಈ ದಿನ ನೀವು ಮಾನಸಿಕವಾಗಿ ಶಾಂತಿಯನ್ನು ಅನುಭವಿಸುತ್ತೀರಿ. ಯಾವುದೇ ಸಮಸ್ಯೆ ಇದ್ದರೂ ತಾಳ್ಮೆಯಿಂದ ಸರಿಪಡಿಸಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ವಿವಾದ ಹೊಂದಿದ್ದರೆ ಅದು ಈ ದಿನ ದೂರವಾಗುತ್ತದೆ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಪ್ರಯೋಜನವಾಗಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 9 ಗಂಟೆಯವರೆಗೆ

ಕಟಕ ರಾಶಿ:- ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ ಮತ್ತು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ಆಲೋಚನೆ ಮಾಡಿ ತೆಗೆದುಕೊಳ್ಳಿ. ಕಚೇರಿಯಲ್ಲಿ ನಿಮಗೆ ಸಹ ಉದ್ಯೋಗಿಗಳು ಕಿರಿಕಿರಿಯಾಗಿ ಕಾಣಬಹುದು. ಈ ದಿನ ಆದಷ್ಟು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 9:00 ಗಂಟೆಯಿಂದ 12 ಗಂಟೆಯವರೆಗೆ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಸಿಂಹ ರಾಶಿ:- ಈ ದಿನ ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದರಿಂದ ಇಂದು ನಿಮಗೆ ಕೆಲವು ಚಿಂತೆ ಎದುರಾಗಬಹುದು. ನೀವು ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ. ಈ ದಿನ ಆರೋಗ್ಯದಲ್ಲಿ ಕೆಲವು ತೊಂದರೆ ಉಂಟಾಗಬಹುದು. ಆರ್ಥಿಕ ರಂಗದಲ್ಲಿ ಈ ದಿನ ವಿಶೇಷತೆ ಏನು ಇರುವುದಿಲ್ಲ. ಈ ದಿನ ನಿಮ್ಮ ಪ್ರಯಾಣ ಶುಭವಾಗಿರುತ್ತದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ

ಕನ್ಯಾ ರಾಶಿ:- ಇಂದು ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಜನರ ಪ್ರಭಾವಕ್ಕೆ ಒಳಪಡದೆ ನೀವೇ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ

ತುಲಾ ರಾಶಿ:- ಕೆಲಸದ ಆರಂಭದಲ್ಲಿ ಇಂದು ಕೆಲವು ದೊಡ್ಡ ಸವಾಲುಗಳು ಎದುರಾಗಬಹುದು. ವ್ಯಾಪಾರಿಗಳು ಈ ದಿನ ಹೂಡಿಕೆ ಮಾಡುವುದನ್ನು ತಪ್ಪಿಸಿ. ಈ ದಿನ ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ವೃಶ್ಚಿಕ ರಾಶಿ:- ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ದಿನ ಸಾಲ ಪಡೆದುಕೊಳ್ಳುವುದನ್ನು ಹಾಗೂ ಸಾಲ ಕೊಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ನಿಮ್ಮ ಮನೆಯಲ್ಲಿರುವ ಹಿರಿಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ. ವ್ಯಾಪಾರಿಗಳು ಎಂದು ಯಾವುದೇ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ವರೆಗೆ.

ಧನಸ್ಸು ರಾಶಿ:- ನಿಮ್ಮ ಕನಸುಗಳು ತುಂಬಾ ದೊಡ್ಡದಾಗಿರುತ್ತದೆ. ಆದರೆ ಅದನ್ನು ಹೇಗೆ ನನಸಾಗಿಸಿಕೊಳ್ಳುವುದು ಎಂದು ಆಲೋಚನೆ ಇರುತ್ತದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರುತ್ತದೆ. ಹಾಗೂ ಉತ್ತಮವಾದ ಆರ್ಥಿಕ ಲಾಭ ಸಹ ಸಿಗಬಹುದು. ಹೆಸರಾಂತ ಜನರನ್ನು ರಾಜಕಾರಣಿ ಗಳನ್ನು ಭೇಟಿ ಮಾಡಬಹುದು. ಈ ದಿನ ಕೆಲಸ ಮಾಡುವಂತಹ ಸ್ಥಳದಲ್ಲಿ ಹೆಚ್ಚು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ.

ಮಕರ ರಾಶಿ:- ಈ ದಿನ ಕುಟುಂಬ ಸದಸ್ಯರೊಂದಿಗೆ ಸಂತೋಷವಾದ ದಿನವನ್ನು ಕಳೆಯುತ್ತೀರಿ. ಜೊತೆಗೆ ಮನೆಯ ಹಿರಿಯರ ಆಶೀರ್ವಾದ ಹಾಗೂ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ನಿಮ್ಮ ಪ್ರೀತಿ ಪಾತ್ರದಿಂದ ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಮಿಶ್ರಫಲದ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಕುಂಭ ರಾಶಿ:- ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟ ಇದ್ದರೂ ಅದು ಈ ದಿನ ಕೊನೆಗೊಳ್ಳುತ್ತದೆ. ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ. ನೀವು ಯಾವುದೇ ವ್ಯವಹಾರದ ನಿರ್ಧಾರ ಗಳನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಸಂಗಾತಿಯ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ

ಮೀನ ರಾಶಿ:- ಈ ದಿನ ನೀವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ಈದಿನ ಮನೆಗೆ ಸಂಬಂಧಿಸಿದಂತೆ ಕೆಲವು ಹಣಕಾಸಿನ ಖರ್ಚನ್ನು ಮಾಡಬಹುದು. ಈ ದಿನ ನಿಮ್ಮ ಸಂಗಾತಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ.

[irp]


crossorigin="anonymous">